Advertisement
ಮಧುಗಿರಿ DYSP ರಾಮಚಂದ್ರಪ್ಪರು ಪಾವಗಡದಿಂದ ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಬಂದ ಮಹಿಳೆಯನ್ನು ತನ್ನ ಕಚೇರಿಯಲ್ಲಿನ ಏಕಾಂತ ಗೃಹ ಅಥವಾ ಶೌಚಾಲಯದಲ್ಲಿ ಕರೆದುಕೊಂಡು ಹೋಗಿದ್ದು ಅನೈತಿಕ ಚಟುವಟಿಕೆ ಆರಂಭಿಸಿದ್ದಾನೆ. ಕಿಟಕಿಯ ಮೂಲಕ ಚಿತ್ರೀಕರಣಗೊಂಡ ವಿಡಿಯೋ ಲಭಿಸಿದೆ.
”ಇದೊಂದು ದುರದೃಷ್ಟಕರ ವಿಚಾರ. ಈ ವಿಚಾರವಾಗಿ ತನಿಖೆ ನಡೆಸಲು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗುವುದು. ಈ ಬಗ್ಗೆ ನನಗೂ ಸ್ವಲ್ಪ ಮಾಹಿತಿಯಿತ್ತು. ಆದರೆ ಸಾಕ್ಷಿ ಇರಲಿಲ್ಲ. ಯಾವುದೇ ಕಾರಣಕ್ಕೂ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಇಲಾಖೆ ಸಹಿಸಿಕೊಳ್ಳಲ್ಲ. ಸಾರ್ವಜನಿಕರಿಗೆ ಇಲಾಖೆ ಮೇಲಿನ ನಂಬಿಕೆ ಹೋಗದಂತೆ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು” ಎಂದು ತುಮಕೂರು ಎಸ್ಪಿ ಅಶೋಕ್ ಉದಯವಾಣಿಗೆ ಪ್ರತಿಕ್ರಿಯೆ ನೀಡಿದ್ದಾರೆ.