Advertisement

Manipur ಘಟನೆಗಳಿಗೆ ಕ್ಷಮೆ ಕೇಳಿದ ಸಿಎಂ: ಪ್ರಧಾನಿ ಏಕೆ ಭೇಟಿ ನೀಡಿಲ್ಲ ಎಂದ ಕಾಂಗ್ರೆಸ್

03:10 PM Jan 01, 2025 | Team Udayavani |

ಹೊಸದಿಲ್ಲಿ : ಮಣಿಪುರ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರು ವರ್ಷಾಂತ್ಯದ ವೇಳೆ ರಾಜ್ಯದಲ್ಲಿ ನಡೆದ ಜನಾಂಗೀಯ ಸಂಘರ್ಷಕ್ಕೆ ಕ್ಷಮೆಯಾಚಿಸಿದ್ದಾರೆ. ಈ ವಿಚಾರ ಕಾಂಗ್ರೆಸ್ ಗೆ ಟೀಕಾಸ್ತ್ರವಾಗಿ ಪರಿಣಮಿಸಿದೆ.

Advertisement

ಸುದ್ದಿಗಾರೊಂದಿಗೆ ಮಾತನಾಡಿದ ಬಿರೇನ್ ಸಿಂಗ್ ‘ಸಾವಿರಾರು ಜನರು ನಿರಾಶ್ರಿತರಾಗಿದ್ದಾರೆ ಮತ್ತು ಹಿಂದಿನ ತಪ್ಪುಗಳನ್ನು ಮರೆತು, ಕ್ಷಮಿಸಿ ಮತ್ತು ಹೊಸದಾಗಿ ಪ್ರಾರಂಭಿಸಲು ಎಲ್ಲಾ ಸಮುದಾಯಗಳಿಗೆ ಮನವಿ ಮಾಡಿದ್ದಾರೆ.

ಈಶಾನ್ಯ ರಾಜ್ಯದ ಜನರ ಕ್ಷಮೆಯಾಚಿಸಿರುವ ಕುರಿತು ಕಾಂಗ್ರೆಸ್ ಮತ್ತು ಮಣಿಪುರ ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ವಾಗ್ಸಮರ ಪ್ರಾರಂಭವಾಗಿದ್ದು, ”ಪ್ರಧಾನಿ ನರೇಂದ್ರ ಮೋದಿ ಅವರು ಮಣಿಪುರಕ್ಕೆ ಭೇಟಿ ನೀಡಲು ಮತ್ತು ಸಂತ್ರಸ್ತ ಸಮುದಾಯಗಳನ್ನು ತಲುಪಲು ನಿರಾಕರಿಸುತ್ತಿರುವದನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್‌ ಪ್ರಶ್ನಿಸಿದ್ದಾರೆ.

ಪ್ರತಿಕ್ರಿಯಿಸಿದ ಬಿರೇನ್ ಸಿಂಗ್ “ಕಾಂಗ್ರೆಸ್ ಮಾಡಿದ ಹಿಂದಿನ ಪಾಪಗಳಿಂದಾಗಿ ತಮ್ಮ ರಾಜ್ಯ ಇಂದು ಪ್ರಕ್ಷುಬ್ಧವಾಗಿದೆ” ಎಂದು ತಿರುಗೇಟು ನೀಡಿದ್ದಾರೆ.

ಬಿರೇನ್ ಸಿಂಗ್ ಅವರು ಕಾಂಗ್ರೆಸ್ ವಿರುದ್ಧ ಕಿಡಿ ಕಾರಿ ”ಮಣಿಪುರದಲ್ಲಿ 1992 ಮತ್ತು 1997 ರ ನಡುವೆ ಸಂಭವಿಸಿದ ನಾಗಾ-ಕುಕಿ ಘರ್ಷಣೆ ಈಶಾನ್ಯ ಭಾರತದಲ್ಲಿ ರಕ್ತಸಿಕ್ತ ಜನಾಂಗೀಯ ಸಂಘರ್ಷಗಳಲ್ಲಿ ಒಂದಾಗಿದೆ” ಎಂದರು.

Advertisement

“ಮಣಿಪುರದಲ್ಲಿ ನಾಗಾ-ಕುಕಿ ಘರ್ಷಣೆಗಳು ಸರಿಸುಮಾರು 1,300 ಜನರ ಸಾವಿಗೆ ಕಾರಣವಾಯಿತು, ಸಾವಿರಾರು ಜನರು ಸ್ಥಳಾಂತರಗೊಂಡರು. ಹಿಂಸಾಚಾರವು ಹಲವಾರು ವರ್ಷಗಳವರೆಗೆ ಮುಂದುವರೆಯಿತು, 1992 ಮತ್ತು 1997 ರ ನಡುವೆ ಸಂಭವಿಸಿತು, ಆದರೂ ಸಂಘರ್ಷದ ಅತ್ಯಂತ ತೀವ್ರವಾದ ಅವಧಿಯು 1992-1993ರಲ್ಲಿತ್ತು” ಎಂದು ಬಿರೇನ್ ಸಿಂಗ್ ಟ್ವೀಟ್ ಮಾಡಿದ್ದಾರೆ.

“1991 ರಿಂದ 1996 ರವರೆಗೆ ಭಾರತದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಮತ್ತು ಆ ಸಮಯದಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಪಿ.ವಿ.ನರಸಿಂಹರಾವ್ ಅವರು ಕ್ಷಮೆಯಾಚಿಸಲು ಮಣಿಪುರಕ್ಕೆ ಬಂದಿದ್ದಾರೆಯೇ? ಕುಕಿ-ಪೈಟ್ ಘರ್ಷಣೆಗಳು ರಾಜ್ಯದಲ್ಲಿ 350 ಜನರನ್ನು ಬಲಿ ತೆಗೆದುಕೊಂಡಿವೆ. ಕುಕಿ-ಪೈಟ್ ಘರ್ಷಣೆಯ ಸಮಯದಲ್ಲಿ (1997-1998), ಐ.ಕೆ.ಗುಜ್ರಾಲ್ ಅವರು ಭಾರತದ ಪ್ರಧಾನಿಯಾಗಿದ್ದರು ಮಣಿಪುರ ಮತ್ತು ಜನರಿಗೆ ಕ್ಷಮಿಸಿ ಎಂದು ಹೇಳುತ್ತೀರಾ?” ಎಂದು ತಿರುಗೇಟು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next