Advertisement
ಎಪ್ಪತ್ತು ವರ್ಷದ ಸ್ವಾಮಿ ಅವರು ನನ್ನ ಮುಂದೆ ಕುಳಿತಿದ್ದರು. ಕೀಲು ನೋವು, ತಲೆಸುತ್ತು, ಅಜೀರ್ಣ, ಬಾಯಿ ಒಣಗುವುದು, ಮೂಗು ಕಟ್ಟಿ ಉಸಿರಾಟದ ಸಮಸ್ಯೆ, ನಿದ್ರಾಹೀನತೆ… ಹೀಗೆ, ಅನೇಕ ಸಮಸ್ಯೆಗಳು ಅವರನ್ನು ಬಾಧಿಸುತ್ತಿದ್ದವು. ಎದೆ ನೋವು ಅವರನ್ನು ಆಸ್ಪತ್ರೆಗೆ ಕರೆತಂದಿತ್ತು. ಎದೆನೋವಿಗೆ, ಮಾನಸಿಕ ಒತ್ತಡವೇ ಕಾರಣ ಎಂಬ ಅಭಿಪ್ರಾಯದೊಡನೆ, ಹೃದ್ರೋಗ ತಜ್ಞರು ಸಮಾಲೋಚನೆಗಾಗಿ ಅವರನ್ನು ನನ್ನ ಬಳಿ ಕಳಿಸಿದ್ದರು.
Related Articles
Advertisement
ಅಂದು ಸೀಗೆಪುಡಿಯ ಘಾಟು ಎಂದು ಜಗಳವಾದರೆ, ಇಂದು ಸ್ನಾನದ ಮನೆ ನಿರ್ಜೀವ. ಅಡುಗೆ ಮನೆಯಲ್ಲಿ ತೆಂಗಿನಕಾಯಿ ತುರಿಯುವ ಸದ್ದೇ ಇಲ್ಲ. ಅವಳ ಕೈ ರುಚಿ ಈಗೆಲ್ಲಿ? ಅಡುಗೆ ಕಟ್ಟೆಯನ್ನು ಸವರುತ್ತಾರೆ. ದೇವರ ಮನೆಗೆ ರಂಗೋಲಿ ಕಳೆಯೇ ಇಲ್ಲ.
ಇಂದು ಹೆಜ್ಜೆ ಹೆಜ್ಜೆಗೂ ಹೆಂಡತಿ ನೆನಪಾಗುತ್ತಾಳೆ. ಅಂದು, ಕಾಫಿ ಕೊಡಲು ತಡವಾದರೆ ಸಿಟ್ಟಿನಿಂದ ಕೂಗಾಡುತ್ತಿದ್ದರಂತೆ. ಈಗ ಕಾಫಿ ತಂದು ಕೊಡುವವರೇ ಇಲ್ಲ.
ವಯಸ್ಸಾದ ಮೇಲೆ ಒಂಟಿತನ, ಮಾನಸಿಕ ವ್ಯಥೆ ಒಂದೆಡೆಯಾದರೆ, ಶಾರೀರಕ ಸಮಸ್ಯೆಗಳು ಇನ್ನೊಂದೆಡೆ. ನಾನು ಅವಳನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳಬೇಕಿತ್ತು ಎನ್ನುವ ದುಃಖ, ಪಾಪಪ್ರಜ್ಞೆಯಿಂದ ಶರೀರ ಮತ್ತಷ್ಟು ಕುಸಿಯುತ್ತದೆ. ಮಿಂಚಿ ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎನ್ನುವಂತೆ, ಬದುಕಿದ್ದಾಗ ಹೆಂಡತಿಯನ್ನು ನೋಯಿಸಿ, ನಂತರ ಪಶ್ಚಾತ್ತಾಪಪಟ್ಟರೆ ಪ್ರಯೋಜನವಿಲ್ಲ. ಹಾಗಾಗಿ, ಗಂಡಸರೇ ನೆನಪಿಡಿ, ಮೃದು ಹೃದಯಿ ಮಡದಿಯನ್ನು ಪೌರುಷದಲ್ಲಿ ಜಗ್ಗಬೇಡಿ. ಆಕೆಯೊಡನೆ ಅಕ್ಕರೆಯಿಂದ ಮಾತನಾಡಿ. ಸಂಸಾರದ ನೊಗ ಹೊತ್ತವಳ ಬದುಕಿಗೆ ಸಂಭ್ರಮ ತುಂಬಿ. ಅವಳನ್ನು ಕಳೆದುಕೊಳ್ಳುವ ಮುನ್ನ ಎಚ್ಚೆತ್ತುಕೊಳ್ಳಿ. ಮನಸಿನ ಮಂದಿರದಲ್ಲಿ ಮಧುರ ನೆನಪುಗಳೇ ತುಂಬಿಕೊಳ್ಳಲಿ.
ಡಾ. ಶುಭಾ ಮಧುಸೂದನ್ಚಿಕಿತ್ಸಾ ಮನೋವಿಜ್ಞಾನಿ