ಮಣಿಪಾಲ: ಪ್ರಸ್ತುತ ಸನ್ನಿವೇಶದಲ್ಲಿ ಚೀನಾ ಭಾರತದ ಮೇಲೆ ಯುದ್ಧ ಮಾಡುವ ದುಸ್ಸಾಹಸಕ್ಕೆ ಕೈ ಹಾಕಬಹುದೇ? ನಿಮ್ಮ ಅಭಿಪ್ರಾಯವೇನು ಎಂದು ಉದಯವಾಣಿ ಕೇಳಿದ್ದು, ಆಯ್ದ ಅಭಿಪ್ರಯಗಳು ಇಲ್ಲಿದೆ.
ಸುಭಾಶ್ ಚಂದ್ರ ಕೋಟ್ಯಾನ್: ಕಂಡಿತಾ, ಈಗ ನಾವು ಕಷ್ಟದ ಸಮಯದಲ್ಲಿ ಇದ್ದೇವೆ. ಈ ಸಂದರ್ಭದಲ್ಲಿ ಅವರು ದಾಳಿ ನಡೆಸಲು ಸಂಚು ರೂಪಿಸುತ್ತಿರುವುದು ಕೂಡಾ ಸತ್ಯ.
ಸುರೇಶ್ ಸೂರ್ಯ: ಚೀನಾವನ್ನು ನಂಬುವುದೇ ದೊಡ್ಡ ಮೂರ್ಖತನ, 1962ರಲ್ಲಿ ಚೆನ್ನಾಗಿದ್ದುಕೊಂಡೆ ಏಕಾಏಕಿ ದಾಳಿ ಮಾಡಿ ಭಾರತದ ಭೂಪ್ರದೇಶವನ್ನು ಅಕ್ರಮವಾಗಿ ವಶಪಡಿಸಿಕೊಂಡರು, ಈಗ ಭಾರತ ಕೋವಿಡ್-19 ದಿಂದ ತತ್ತರಿಸಿರುವುದನ್ನು ಕಂಡು ಇಷ್ಟು ದಿನ ಸುಮ್ಮನಿದ್ದವರುಈಗ ಒಂದು ಕೈ ನೋಡೋಣ ಎಂದು ಗಡಿಯಲ್ಲಿ ಸುಖಾಸುಮ್ಮನೆ ತಂಟೆ ತಕರಾರು ತೆಗೆದು ಪ್ರಚೋದಿಸುತ್ತಿದ್ದಾರೆಂದರೆ ಗಂಭೀರವಾಗಿ ಯೋಚಿಸಬೇಕಾದದ್ದೆ,ಅಂದು ನಿರ್ಮಿತವಾದಂತೆ ಈಗ ಮತ್ತೊಂದು ಅಕ್ಸಾಯ್ ಚಿನ್ ಹುಟ್ಟುವುದು ಬೇಡ. ಎಂತಹ ಸನ್ನಿವೇಶದಲ್ಲಿಯೂ ನಮ್ಮ ದೇಶದ ಸಾರ್ವಭೌಮತೆಗೆ ದಕ್ಕೆಯಾದಲ್ಲಿ ಸುಮ್ಮನೆ ಕೈಕಟ್ಟಿ ಕೂರುವ ಪ್ರಶ್ನೆ ಉದ್ಬವಿಸಬಾರದು. ನಮ್ಮ ದೇಶ ನಮ್ಮ ಹೆಮ್ಮೆ.. ಜೈ ಹಿಂದ್
ಜೈ ಕರ್ನಾಟಕ ರವಿಶಂಕರ್: ಚೀನಾ ತನ್ನ ಲ್ಯಾಬ್ ಲ್ಲಿ ವೈರಸ್ ತಯಾರಿಸಿ ಇಡೀ ಜಗತ್ತಿಗೆ ಹಬ್ಬಿಸಿ ಲಕ್ಷಾಂತರ ಜನರನ್ನು ಕೋಲೆ ಮಾಡಿದ್ದಾರೆ ಆದರೂ ಜಗತ್ತಿನ ಯಾವುದೇ ರಾಷ್ಟ್ರಗಳು ಅದರ ಬಗ್ಗೆ ಮಾತನಾಡುತ್ತಿಲ್ಲ. ಹಾಗೆ ನೋಡಿದರೆ ಜಗತ್ತಿನ ಎಲ್ಲಾ ರಾಷ್ಟ್ರಗಳು ಒಗ್ಗಟ್ಟು ಆಗಿ ಚೀನಾ ದೇಶದ ಮೇಲೆ ಯುದ್ದ ಮಾಡಿ ಚೀನಾ ರಾಷ್ಟ್ರದ ನಕಾಶೆ ಅಳಸಿ ಹಾಕಬೇಕು. ಇನ್ನೂ ಮುಂದೆ ಯಾವ ಯಾವ ವೈರಸ್ ಹಬ್ಬಸುತ್ತಾರೂ ಗೂತ್ತಿಲ್ಲ.
ಚಿ. ಮ. ವಿನೋದ್ ಕುಮಾರ್: ಸದ್ಯಕ್ಕೆ ದೇಶದ ಅರ್ಥಿಕ ಪರಿಸ್ಥಿತಿಯನ್ನು ಗಮನದ ಲ್ಲಿಟ್ಟುಕೊಂಡು ಯೋಚಿಸಿದರೆ ಯುದ್ಧ ಬೇಡವೇನಿಸುತ್ತದೆ. ನಾವು ಈಗ ಕೈಕಟ್ಟಿ ಕುಳಿತುಕೊಂಡರೆ ಚೀನಾದವರು ತಮ್ಮ ಕಿತಾಪತಿಯನ್ನು ಮುಂದುವರೆಸುತ್ತಾರೆ, ಯಾವುದಕ್ಕೂ ಕೇಂದ್ರ ಸರ್ಕಾರ ಯೋಚಿಸಿ ಒಂದು ಸರಿಯಾದ ನಿರ್ಧಾರವನ್ನು ತೆಗೆದುಕೊಂಡರೆ ಒಳ್ಳೆಯದು.
ವಾದಿರಾಜ ತಂತ್ರಿ ತಂತ್ರಿ: ಖಂಡಿತ ಮಾಡಲ್ಲ. ಮಾಡಿದರೆ ಅವರ ಮಾರುಕಟ್ಟೆ ಅವರೇ ನಾಶ ಮಾಡಿಕೊಂಡಂತೆ. ಯಾರಾದರೂ ತಮ್ಮ ಕಾಲಿಗೆ ಕೊಡಲಿ ಏಟು ಕೊಟ್ಟು ಕೊಳ್ಳುವ ಕೆಲಸ ಮಾಡಲ್ಲ. ಮತ್ತು ಭಾರತ ಕೂಡ ಶಕ್ತ ದೇಶವಾಗಿದೆ. ಅದು ವಿಶ್ವದ ಗಮನ ಬೇರೆ ಕಡೆ ಸೆಳೆಯಲು ಇಂತ ಕೃತ್ಯ ಮಾಡುತ್ತಾ ಇದೆ ಎಂದು ಅರ್ಥ ಆಗುತ್ತೆ.
ವಿಜಯ್ ಶೆಟ್ಟಿ: ಯುದ್ಧ ಅಂದ್ರೆ ಮನೆಯಲ್ಲಿ ಕೂತು ಆಡೊ ಪಬ್ಜಿ ಆಟ ಅಲ್ಲ ಯುದ್ಧ ನಡೆದರೆ ಎರಡು ದೇಶದಲ್ಲೂ ಸಾವು-ನೋವು ಕಷ್ಟ-ನಷ್ಟ ತೊಂದರೆ ಆಗುತ್ತೆ. ಚೀನಾ ಸುಮ್ಮನೆ ಹೆದರಿಸುತ್ತದೆ ಅಷ್ಟೇ