Advertisement
ಆದರೆ ಪ್ರಶಸ್ತಿ ವಿತರಣಾ ಸಮಾರಂಭದ ವೇಳೆ ಅಲನ್ ಬಾರ್ಡರ್ ಅವರನ್ನು ಮಾತ್ರ ಕರೆಯಲಾಗಿತ್ತು. ಸುನೀಲ್ ಗಾವಸ್ಕರ್ ಅವರು ಮೈದಾನದಲ್ಲಿ ಉಪಸ್ಥಿತರಿದ್ದರೂ ಅವರಿಗೆ ಕರೆಯಲಾಗಲಿಲ್ಲ. ಇದಕ್ಕೆ ಗಾವಸ್ಕರ್ ಬೇಸರ ವ್ಯಕ್ತಪಡಿಸಿದರು.
Related Articles
Advertisement
“ಅಂದರೆ, ನಾನು ಇಲ್ಲಿಯೇ ಮೈದಾನದಲ್ಲಿಯೇ ಇದ್ದೆ. ನನ್ನ ಪ್ರಕಾರ, ಪ್ರೆಸೆಂಟೇಶನ್ ವಿಷಯಕ್ಕೆ ಬಂದಾಗ ಆಸ್ಟ್ರೇಲಿಯಾ ಗೆದ್ದಿರುವುದು ಮುಖ್ಯವಲ್ಲ. ಅವರು ಉತ್ತಮ ಕ್ರಿಕೆಟ್ ಆಡಿದರು ಆದ್ದರಿಂದ ಅವರು ಗೆದ್ದರು. ನಾನು ಭಾರತೀಯ ಎಂಬ ಕಾರಣಕ್ಕೆ ನನಗೆ ಟ್ರೋಫಿ ಪ್ರೆಸೆಂಟೇಶನ್ ಗೆ ಕರೆಯಲಿಲ್ಲ. ನನ್ನ ಉತ್ತಮ ಸ್ನೇಹಿತ ಅಲನ್ ಬಾರ್ಡರ್ ಅವರೊಂದಿಗೆ ಟ್ರೋಫಿಯನ್ನು ನೀಡಲು ನಾನು ಸಂತೋಷಪಡುತ್ತಿದ್ದೆ” ಎಂದು ಗಾವಸ್ಕರ್ ಹೇಳಿದರು.
ಆಸ್ಟ್ರೇಲಿಯಾ ಸರಣಿಯನ್ನು ಗೆದ್ದು ಬಿಜಿಟಿ ಪಡೆದುಕೊಂಡರೆ ಟ್ರೋಫಿ ವಿತರಣೆಗೆ ನಿಮ್ಮ ಅಗತ್ಯವಿಲ್ಲ ಎಂದು ಸಂಘಟಕರು ಹೇಳಿದ್ದರು ಎಂದು ಗಾವಸ್ಕರ್ ಸ್ವತಃ ಉಲ್ಲೇಖಿಸಿದ್ದಾರೆ.