ಪಣಜಿ: ಗೋವಾ ರಾಜ್ಯ ಸರ್ಕಾರವು ರಾಜ್ಯದಲ್ಲಿ ಮುಂದಿನ 100 ವರ್ಷಗಳ ವಿಚಾರವನ್ನಿಟ್ಟುಕೊಂಡು ವಿವಿಧ ಬೃಹತ್ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಹೆಚ್ಚಿನ ಯುವಕ ಯುವತಿಯರು ಉದ್ಯೋಗಕ್ಕಾಗಿ ಹೊರ ದೇಶಕ್ಕೆ ಹೊರ ರಾಜ್ಯಕ್ಕೆ ತೆರಳುತ್ತಾರೆ. ಇವರೆಲ್ಲರಿಗೂ ರಾಜ್ಯದಲ್ಲಿಯೇ ಉದ್ಯೋಗ ಲಭಿಸುವಂತೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ. ಕೋವಿಡ್ ಸಂದರ್ಭದಲ್ಲಿಯೂ ಸರ್ಕಾರ ಯಾವುದೇ ಬೇಧಭಾವ ಮಾಡದೆಯೇ ಜನರಿಗೆ ವಿವಿಧ ಪ್ರಕಾರದ ಸಹಾಯ ಕಲ್ಪಿಸಿದೆ ಎಂದು ಮುಖ್ಯಮಂತ್ರಿ ಪ್ರಮೋದ ಸಾವಂತ್ ನುಡಿದರು.
ಕಾಸಾವಲಿಯಲ್ಲಿ ಸುಮಾರು 16 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆಸ್ಪತ್ರೆಯ ಉದ್ಘಾಟನೆ ನೆರವೇರಿಸಿ ಮುಖ್ಯಮಂತ್ರಿ ಪ್ರಮೋದ ಸಾವಂತ್ ಮಾತನಾಡುತ್ತಿದ್ದರು.
ಇದನ್ನೂ ಓದಿ:ದಾಖಲೆಗಳ ಕೊರತೆ : ಯಶಸ್ವಿಯಾಗದ ಬೇತಮಂಗಲ ಗುರ್ರಮ್ಮನ ಕುಂಟೆ ಸರ್ವೇ ಕಾರ್ಯ
ಈ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಆಸ್ಪತ್ರೆಯಿಂದಾಗಿ ಕಾಸಾವಲಿ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ಲಭಿಸಲಿದೆ ಎಂದು ಮುಖ್ಯಮಂತ್ರಿ ಸಾವಂತ್ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಆರೋಗ್ಯ ಮಂತ್ರಿ ವಿಶ್ವಜಿತ್ ರಾಣೆ, ಸಚಿವೆ ಎಲಿನಾ ಸಾಲ್ಡಾನಾ ಮತ್ತಿತರರು ಉಪಸ್ಥಿತರಿದ್ದರು.