ಗ್ರಾಮಸ್ಥರಿಗೆ ಮಾಸ್ಕ್, ಮಾತ್ರೆ ವಿತರಣೆ
ಚಾಮರಾಜನಗರ: ತಾಲೂಕಿನದೊಡ್ಡರಾಯಪೇಟೆ ಗ್ರಾಮದ 630 ಕುಟುಂಬಗಳಿಗೆ ತಲಾ 5 ಮಾಸ್ಕ್ ಹಾಗೂ ಮಿಟಮಿನ್ ಸಿಮಾತ್ರೆವುಳ್ಳ ಪ್ಯಾಕೆಟ್‌ಗಳನ್ನು ಎಆರ್‌ಎಸ್‌ಫೌಂಡೇಷನ್‌ನಿಂದ ವಿತರಣೆ ಮಾಡಲಾಯಿತು.
ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದಶಾಸಕ ಸಿ. ಪುಟ್ಟರಂಗಶೆಟ್ಟಿ, ನಿವೃತ್ತ ಉಪನ್ಯಾಸಕರಾಗಿದ್ದ ಜನಾನುರಾಗಿ ದಿ. ಎ.ರಂಗಸ್ವಾಮಿ ಹೆಸರಿನಲ್ಲಿ ಎಆರ್‌ಎಸ್‌ಫೌಂಡೇಷನ್ ಸ್ಥಾಪಿಸಿ, ಗ್ರಾಮದ ಜನರಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಅವರಪುತ್ರರಾದ ವಕೀಲ ಅರುಣ್‌ಕುಮಾರ್, ಅಜಿತ್‌ಕುಮಾರ್ ಅವರು 3500 ಮಾಸ್ಕ್ ಹಾಗೂ 6000ಮಿಟಮಿನ್ ಸಿ ಮಾತ್ರೆ ನೀಡುತ್ತಿರುವುದುಶ್ಲಾಘನೀಯ ಎಂದರು.
ರಾಮಸಮುದ್ರ ಪೂರ್ವಠಾಣೆ ಸಬ್ ಇನ್ಸ್‌ಪೆಕ್ಟರ್ ಆನಂದ್ ಮಾತನಾಡಿ,ಇದೊಂದು ಪವಿತ್ರ ಕಾರ್ಯವಾಗಿದೆ. ಎಆರ್‌ಎಸ್ ಫೌಂಡೇಷನ್ ವತಿಯಿಂದ ಪ್ರತಿ ಮನೆಗೂಮಾಸ್ಕ್ ಹಾಗೂ ಮಿಟಮಿನ್ ಸಿ ಮಾತ್ರೆ ವಿತರಣೆಯಶಸ್ವಿಯಾಗಲಿ. ಅರುಣ್‌ಕುಮಾರ್ ಮತ್ತುಅಜಿತ್ ಕುಮಾರ್ ಅವರ ಸೇವೆ ಗ್ರಾಮಕ್ಕೆ ಇನ್ನುಹೆಚ್ಚಿನ ರೀತಿಯಲ್ಲಿ ಲಭಿಸಲಿ. ಕೋವಿಡ್‌ನಂತ ಸಂಕಷ್ಟ ಪರಿಸ್ಥಿತಿಯಲ್ಲಿ ಸೇವಾ ಮನೋಭಾವ ರೂಢಿಸಿಕೊಂಡಿದ್ದಾರೆ.
ಇದು ಇತರರಿಗೂ ಸಹಮಾದರಿಯಾಗಲಿ ಎಂದು ಶುಭಕೋರಿದರು.ಕಾರ್ಯಕ್ರಮದಲ್ಲಿ ಎಆರ್‌ಎಸ್ ಫೌಂಡೇಷನ್‌ಮುಖ್ಯಸ್ಥರಾದ ವಕೀಲ ಅರುಣ್‌ಕುಮಾರ್, ಭೂವಿಜ್ಞಾನಿ ಅಜಿತ್‌ಕುಮಾರ್, ಗ್ರಾಪಂ ಸದಸ್ಯರಾದಸಿದ್ದರಾಜು, ಚಿಕ್ಕಸ್ವಾಮಿ, ನಾಗೇಂದ್ರ, ಮೂರ್ತಿ,ರವಿಗೌಡ, ಪುಟ್ಟಸ್ವಾಮಿ, ನಾಗರಾಜು, ಅಂಗಡಿರಾಜಣ್ಣ, ಮಲ್ಲಿಕಾರ್ಜುನ್, ರಾಜಣ್ಣ, ರಾಜುಮೊದಲಾದವರು ಉಪಸ್ಥಿತರಿದ್ದರು.