ಹೈದರಾಬಾದ್ : ಹೈದರಾಬಾದ್ ಪೊಲೀಸರು ಇಂದು ಬುಧವಾರ ಮದುವೆ ಜಾಲವೊಂದರಲ್ಲಿ ಶಾಮೀಲಾಗಿರುವ ಆರೋಪದ ಮೇಲೆ ಎಂಟು ಶೇಖ್‌ಗಳನ್ನು ಮತ್ತು ನಾಲ್ವರು ಮುಸ್ಲಿಂ ಮುಲ್ಲಾಗಳನ್ನು ಬಂಧಿಸಿದ್ದಾರೆ.
ಬಂಧಿತ ಶೇಖ್‌ಗಳು ಸೌದಿ ಅರೇಬಿಯ, ಒಮಾನ್ ಮತ್ತು ಕತಾರ್‌ನವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ ಸೌದಿ ಅರೇಬಿಯದ ಶೇಖ್‌ಗಳು ಫಲೂಕ್‌ನಾಮಾ ಮತ್ತು ಚಂದ್ರಾಯನ ಗುಟ್ಟ ಎಂಬಲ್ಲಿನ ಇಬ್ಬರು ಅಪ್ತಾಪ್ತ ವಯಸ್ಸಿನ ಬಾಲಕಿಯನ್ನು ಒಪ್ಪಂದದ ನೆಲೆಯಲ್ಲಿ ಮದುವೆಯಾಗಿದ್ದಾರೆ.
ಪೊಲೀಸರು ಇದೇ ವೇಳೆ ನಾಲ್ಕು ಲಾಡ್ಜ್ ಓನರ್‌ಗಳನ್ನು ಮತ್ತು ಐವರು ಮದುವೆ ಬ್ರೋಕರ್ ಗಳನ್ನು ಬಂಧಿಸಿದ್ದಾರೆ.
ಮೊನ್ನೆ ಸೋಮವಾರ ಮುಂಬಯಿ ಮುಖ್ಯ ಕಾಝಿ ಫರೀದ್ ಅಹ್ಮದ್ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದರು. ಫರೀದ್ ಅಹ್ಮದ್ ಖಾನ್ ಅವರು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದುವೆ ಸರ್ಟಿಫಿಕೇಟ್ ಕೊಟ್ಟದ್ದನ್ನು ಆಧರಿಸಿ ಓಮಾನೀ ಶೇಖ್ ವೀಸಾ ಪಡೆದುಕೊಂಡಿದ್ದ.
ಹೈದರಾಬಾದಿನಲ್ಲಿ ಈ ಹಿಂದೆಯೂ ಪೊಲೀಸರು ಹಲವಾರು ಮದುವೆ ಜಾಲಗಳನ್ನು ಬಯಲುಗೊಳಿಸಿದ್ದರು. ಈ ಜಾಲದವರು ಹುಡುಗಿಯರ ಹೆತ್ತವರಿಗೆ ಹೆಚ್ಚಿನ ಹಣದ ಆಮಿಷ ಒಡ್ಡಿ ತಮ್ಮ ಹೆಣ್ಣು ಮಕ್ಕಳನ್ನು ಶೇಖ್‌ಗಳಿಗೆ ಒಪ್ಪಂದದ ನೆಲೆಯಲ್ಲಿ ಮದುವೆ ಮಾಡಿಕೊಡುವಂತೆ ಮನವೊಲಿಸುತ್ತಿದ್ದರು.