Advertisement
ನಮ್ಮ ಸಮಾಜದ ಎಷ್ಟೋ ಪಾಲಕರು ಈ ರೀತಿ ಯೋಚಿಸುತ್ತಾರೆ. ಮದುವೆಯ ಬಂಧನಕ್ಕೆ ಒಳಗಾಗಬೇಕಾದ ಹುಡುಗ- ಹುಡುಗಿಯ ಇಷ್ಟ ಕಷ್ಟಗಳು ಇಲ್ಲಿ ಗಣನೆಗೆ ಬರುವುದೇ ಇಲ್ಲ. ಕೆಲವೊಮ್ಮೆ ಹುಡುಗ ಹುಡುಗಿಯ ಮಧ್ಯದಲ್ಲಿ ವಯಸ್ಸಿನ ಅಂತರ ಹದಿನೈದು ವರ್ಷಗಳಿಗಿಂತಲೂ ಹೆಚ್ಚಿರುತ್ತಿದೆ. ಹುಡುಗಿ ಅಕ್ಷರಸ್ಥಳಾಗಿದ್ದು ಹುಡುಗ ಅನಕ್ಷರಸ್ಥನೋ, ಅಥವಾ ಹೆಚ್ಚು ಓದಿದವನಾಗಿರುವುದಿಲ್ಲ. ಬಾಲ್ಯದಲ್ಲಿ ಇಬ್ಬರೂ ಒಟ್ಟಿಗೆ ಆಡಿ ಬೆಳೆದವರಾಗಿರಬಹುದು. ಇಲ್ಲವೇ ಅಕ್ಕನ ಮಗಳನ್ನು ಎತ್ತಿ ಆಡಿಸಿದ ಸಂದರ್ಭಗಳಂತೂ ಸಾಮಾನ್ಯ. ಮದುವೆ ಎಂಬುದು ಮನಸು ಮನಸು ಸೇರಿ ಆಗುವ ಭಾವ ಬಂಧನ. ಗಂಡು ಹೆಣ್ಣಿನ ಮಧ್ಯ ಪರಸ್ಪರ ಆಕರ್ಷಣೆ, ತುಡಿತವಿರದಿದ್ದಾಗ ಮದುವೆ ಎಂಬುದು ನೀರಸವಾಗಿ ಬಿಡುತ್ತದೆ. ಪಾಲಕರ ಒತ್ತಾಯಕ್ಕೆ ಕಟ್ಟು ಬಿದ್ದು ಆಗುವ ಮದುವೆಗಳು ಹೆಚ್ಚು ಕಾಲ ಬಾಳಲಾರವು.
Related Articles
Advertisement
ಪರಸ್ಪರ ಇಷ್ಟಪಟ್ಟಾಗ ಅಂತಹ ಒಳ ಸಂಬಂಧಗಳ ಮದುವೆಗಳು ಅನಿವಾರ್ಯವಾಗಬಹುದು. ಆದರೆ, ಬೇರಾವುದೋ ಅನುಕೂಲಕ್ಕಾಗಿ, ಸ್ವಾರ್ಥಕ್ಕಾಗಿ ಮಾಡುವ ರಕ್ತ ಸಂಬಂಧದ ಮದುವೆಗಳಿಂದ ಇಬ್ಬರೂ ಜೀವನವಿಡೀ ಪರದಾಡಬೇಕಾಗುತ್ತದೆ. ಜನಿಸುವ ಮಗು ಕೂಡ ಅಸಹನೀಯ ಬದುಕನ್ನು ಬದುಕಬೇಕಾಗುತ್ತದೆ.
ಆಸ್ತಿಯ ಆಸೆಗಾಗಿಯೋ, ಇನ್ನಾವುದೋ ಸ್ವಾರ್ಥಕ್ಕಾಗಿಯೋ ಮಾಡುವ ರಕ್ತ ಸಂಬಂಧದ ಮದುವೆಗಳು ಕೌಟುಂಬಿಕ ಸಮಸ್ಯೆಗಳಿಗೆ ಕಾರಣವಾಗುವುದಷ್ಟೇ ಅಲ್ಲದೆ ಪರೋಕ್ಷವಾಗಿ ಸಾಮಾಜಿಕ ಸಮಸ್ಯೆಗಳಿಗೂ ದಾರಿ ಮಾಡಿ ಕೊಡುತ್ತವೆ.
ಪ್ರತಿ ಕುಟುಂಬದ ತಲೆಮಾರಿನಲ್ಲಿ ಯಾರಿಗಾದರೂ ಏನೋ ಒಂದು ನ್ಯೂನತೆ ಇದ್ದೇ ಇರುತ್ತೆ. ಅದು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿದುಕೊಂಡು ಬಂದಿರುತ್ತದೆ. ಉದಾ: ತಾಯಿಯ ಜೀನ್‌ನಲ್ಲಿ ಕುಳ್ಳಗಿನ ಜೀನ್ ಇದ್ದರೆ ಅದು ಆಕೆಯ ಮಗಳಿಗೂ ಟ್ರಾನ್ಸ್‌ಫರ್ ಆಗಿರುತ್ತೆ. ಈ ಸಂದರ್ಭದಲ್ಲಿ ಮಗಳನ್ನು ತಾಯಿಯ ತಮ್ಮನಿಗೆ ಮದುವೆ ಮಾಡಿಕೊಡುವುದು ತುಂಬಾ ರಿಸ್ಕ್. ಏಕೆಂದರೆ, ಒಡಹುಟ್ಟಿದವರಾಗಿರುವುದರಿಂದ ಅದೇ ಕುಳ್ಳಗಿನ ಜೀನ್ಸ್ ತಮ್ಮನಲ್ಲೂ ಇರುತ್ತೆ. ಮಗಳು ಮತ್ತು ಸೋದರ ಮಾವ ಕೂಡುವುದರಿಂದ ಎರಡೆರಡು ದಾನಿಗಳಿಂದ ಕುಳ್ಳಗಿನ ಜೀನ್ ಪ್ರಾಬಲ್ಯ ಮೆರೆದು ಕುಬj ಮಗು ಹುಟ್ಟುವ ಸಾಧ್ಯತೆ ಹೆಚ್ಚು. ಇಲ್ಲಿ ಕುಬjತೆಯನ್ನು ಒಂದು ಉದಾಹರಣೆಯಾಗಿ ಮಾತ್ರ ಕೊಟ್ಟಿದ್ದು. ಇದೇ ರೀತಿ ಅನೇಕ ನ್ಯೂನತೆಗಳು, ಅಂಗವೈಕಲ್ಯಗಳು ಮಗುವನ್ನು ಕಾಡಬಹುದು.– ಡಾ. ಸುಹಾಸ್, ಲೈಂಗಿಕ ತಜ್ಞರು ಮಗಳು ಸೋದರ ಸಂಬಂಧದಲ್ಲೇ ಮದುವೆಯಾದರೆ ಕಣ್ಣ ಮುಂದೆಯೇ ಚೆನ್ನಾಗಿರುತ್ತಾಳೆ ಅಂತಲೋ, ಆಸ್ತಿ ಯಾಕೆ ಸುಮ್ಮನೆ ಬೇರೆಯವರ ಪಾಲಾಗಬೇಕು ಅಂತಲೋ ಸೋದರ ಸಂಬಂಧದಲ್ಲೇ ಮದುವೆ ಮಾಡಿಕೊಡುತ್ತಾರೆ. ಈ ರೀತಿ ಮಗಳು ಚೆನ್ನಾಗಿರಬೇಕು ಎನ್ನುವ ದೃಷ್ಟಿಯಿಂದ ನೋಡಿದರೆ, ಈ ನಿರ್ಧಾರದಲ್ಲಿ ಯಾವುದೇ ತಪ್ಪು ಕಾಣುವುದಿಲ್ಲ. ಆದರೆ, ವೈದ್ಯವಿಜ್ಞಾನ ಬೇರೆಯದೇ ಹೇಳುತ್ತೆ. ಸೋದರ ಸಂಬಂಧಗಳ ಮದುವೆಯಿಂದ ಅಂಗವಿಕಲ ಮಗು ಹುಟ್ಟೋ ಸಾಧ್ಯತೆ ಹೆಚ್ಚು. ಇಂಥ ಸಂದರ್ಭದಲ್ಲಿ ಮದುವೆ ನಂತರ ಕೌನ್ಸೆಲಿಂಗ್‌ಗೆ ಅಂತ ದಂಪತಿ ಬರುತ್ತಾರೆ. ಆ ಹಂತದಲ್ಲಿ ವೈದ್ಯಕೀಯ ಪರೀಕ್ಷೆಗಳು ಮತ್ತು ಧೈರ್ಯ ತುಂಬುವುದರ ಹೊರತಾಗಿ ಹೆಚ್ಚಿನದ್ದೇನನ್ನೂ ಮಾಡಲಾಗದು.
– ಡಾ. ಶುಭ್ರತಾ, ಮನಃಶಾಸ್ತ್ರಜ್ಞೆ ಗೌರಿ ಚಂದ್ರಕೇಸರಿ, ಶಿವಮೊಗ್ಗ