Advertisement

ಸೋಂಕಿತ ಪೇದೆ ವಾಸವಾಗಿದ್ದ ಪ್ರದೇಶ ಕಂಟೇನ್ಮೆಂಟ್‌

04:18 PM Jun 08, 2020 | Naveen |

ಮರಿಯಮ್ಮನಹಳ್ಳಿ: ಪಟ್ಟಣ ಠಾಣೆಯ ಮುಖ್ಯಪೇದೆಯೊಬ್ಬರಿಗೆ ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪಟ್ಟಣದ 7ನೇ ವಾರ್ಡ್‌ನಲ್ಲಿ ಮುಖ್ಯಪೇದೆ ವಾಸವಾಗಿದ್ದ ಮನೆಯ ಸುತ್ತ 100 ಮೀಟರ್‌ ಪ್ರದೇಶವನ್ನು ಕಂಟೇನ್ಮೆಂಟ್‌ ಏರಿಯಾ ಎಂದು ಗುರುತಿಸಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.

Advertisement

ನೂರು ಮೀಟರ್‌ ವ್ಯಾಪ್ತಿಯಲ್ಲಿ ಜನರ ಓಡಾಟವನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಪೊಲೀಸ್‌ ಸರ್ಪಗಾವಲಿನಲ್ಲಿಡಲಾಗಿದೆ. ಈ ಪ್ರದೇಶದಲ್ಲಿನ ಎಲ್ಲ ರಸ್ತೆಗಳಿಗೆ ಮುಳ್ಳು ಬೇಲಿ ಹಾಕಿ ಜನರ ಓಡಾಟವನ್ನು ಸಂಪೂರ್ಣ ಬಂದ್‌ ಮಾಡಲಾಗಿದೆ. ರವಿವಾರ ಬೆಳಗ್ಗೆ ಹೊಸಪೇಟೆ ತಾಲೂಕು ಆರೋಗ್ಯಾಧಿಕಾರಿ ಡಾ| ಭಾಸ್ಕರ್‌ ಮತ್ತು ವೈದ್ಯ ಡಾ| ವಿನೋದ್‌ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಂಕಿತ ಮುಖ್ಯಪೇದೆ ವಾಸವಾಗಿದ್ದ ಮನೆಯ ಸುತ್ತಲಿನ ಜನರ ಸಮೀಕ್ಷೆ ನಡೆಸಲಾಗುವುದು. ಇವರಲ್ಲಿ ಗರ್ಭಿಣಿಯರು, ವಯೋವೃದ್ಧರು, ರಕ್ತದೊತ್ತಡ, ಮಧುಮೇಹ ಇತರೆ ಕಾಯಿಲೆಯಿರುವವರ ಸಮೀಕ್ಷೆ ಮಾಡಲಾಗುವುದು. ಕೋವಿಡ್ ಸೋಂಕಿತ ಮುಖ್ಯಪೇದೆಯೊಂದಿಗೆ ಕನಿಷ್ಠ ಹತ್ತು ನಿಮಿಷ ಮಾಸ್ಕ್ ಧರಿಸದೇ ನೇರ ಸಂಪರ್ಕಕ್ಕೆ ಬಂದಂತಹವರ ಪತ್ತೆ ಹಚ್ಚಿ ಅವರಿಗೂ ಕ್ವಾರಂಟೈನ್ ಗೆ ಒಳಪಡಿಸಲಾಗುವುದು. 28 ದಿನಗಳ ಕಾಲ ಈ ಪ್ರದೇಶದಲ್ಲಿನ ಜನರ ಆರೋಗ್ಯ ತಪಾಸಣೆ ನಿರಂತರ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪೊಲೀಸ್‌ ಠಾಣೆಯ ಪಿಎಸ್‌ಐ ಎಂ.ಶಿವಕುಮಾರ್‌, ಕಂದಾಯ ಇಲಾಖೆಯ ಕಂದಾಯ ನಿರೀಕ್ಷಕ ಅಂದಾನಗೌಡ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಉದಯ್‌ ಸಿಂಗ್‌, ಆರೋಗ್ಯ ನಿರೀಕ್ಷಕಿ ಕೆ.ಎಚ್‌. ಗೀತಾ, ಪೇದೆಗಳಾದ ಕೊಟ್ರೇಶ್‌, ಅರುಣ ಸಿಂಗ್‌, ಸಮಾಜ ಸೇವಕ ಗರಗ ಪ್ರಕಾಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next