Advertisement
ಉಡುಪಿ ಜಿಲ್ಲೆಯಲ್ಲಿ ಆನ್‌ಲೈನ್ ಫಲಿತಾಂಶಕ್ಕೆ ಅನುಮತಿ ಸಿಗದ ಕಾರಣ ಕಾಲೇಜುಗಳಲ್ಲಿ ಫಲಿತಾಂಶ ಪಡೆದುಕೊಳ್ಳಬೇಕು. ಅನುತ್ತೀರ್ಣಗೊಂಡ ವಿದ್ಯಾರ್ಥಿ ಗಳಿಗೆ ಎ.28ರಿಂದ ಮೇ 10ರ ವರೆಗೆ ಪೂರಕ ಪರೀಕ್ಷೆಯನ್ನು ದ.ಕ. ಜಿಲ್ಲೆಯ 7 ಮತ್ತು ಉಡುಪಿ ಜಿಲ್ಲೆಯ 3 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುವುದು. ಪೂರಕ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಎಂಸಿಎ (ಮಾರ್ಕ್ಸ್ ಕಮ್ ಅಪ್ಲಿಕೇಶನ್) ಡೌನ್‌ಲೋಡ್ ಮಾಡಿಕೊಂಡು ಮಾ. 30ರೊಳಗಾಗಿ ನಿಗದಿತ ಶುಲ್ಕದೊಂದಿಗೆ ಸಂಬಂಧಪಟ್ಟ ಕಾಲೇಜಿಗೆ ಸಲ್ಲಿಸಬೇಕು. ಪೂರಕ ಪರೀಕ್ಷೆಯ ಫಲಿತಾಂಶವನ್ನು ಮೇ 15ರಂದು ಪ್ರಕಟಿಸಲು ಇಲಾಖೆಯು ಆದೇಶಿಸಿದೆ ಹಾಗೂ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ದ್ವಿತೀಯ ಪಿಯುಸಿಗೆ ದಾಖಲಾಗಲು ಅವಕಾಶವಿದೆ ಎಂದು ಡಿಡಿಪಿಯು ತಿಳಿಸಿದ್ದಾರೆ.
ಮಂಗಳೂರು/ಉಡುಪಿ: ದ್ವಿತೀಯ ಪಿಯುಸಿಗೆ ಶನಿವಾರ ಕನ್ನಡ ಪರೀಕ್ಷೆ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲೆಯ 23,226 ಮಂದಿ ವಿದ್ಯಾರ್ಥಿಗಳ ಪೈಕಿ 22,958 ಮಂದಿ ಹಾಜರಾಗಿದ್ದಾರೆ. 268 ಮಂದಿ ಗೈರು ಹಾಜರಾಗಿದ್ದಾರೆ. ಉಡುಪಿ ಜಿಲ್ಲೆಯಲ್ಲಿ 9,489 ವಿದ್ಯಾರ್ಥಿಗಳಲ್ಲಿ 106 ಮಂದಿ ಗೈರುಹಾಜರಾಗಿ 9,383 ಮಂದಿ ಹಾಜರಾಗಿದ್ದಾರೆ.