ಮುಂಬಯಿ: ಪ್ರಧಾನಿ ಮೋದಿ ಅವರು ಎರಡು ವರ್ಷಗಳ ಬಳಿಕ ನಡೆಯಲಿರುವ ಲೋಕಸಭೆಯ ಚುನಾವಣೆಗೆ ಈಗಾಗಲೇ ತಯಾರಿ ಆರಂಭಿಸಿದ್ದಾರೆ.ಇದೇ ದಿಶೆಯಲ್ಲಿ ಬಿಜೆಪಿ ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರು ಪ್ರತಿ ದಿನ ಒಂದಲ್ಲ ಒಂದು ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಇದರ ಹೊರತಾಗಿ ಪಕ್ಷ ಸಮೀಕ್ಷೆಯೊಂದನ್ನು ನಡೆಸುತ್ತಿದ್ದು, ಅದರ ಅಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ಕಾರ್ಯಶೈಲಿ ಹಾಗೂ ಸಂಸದರು ಮತ್ತು ಶಾಸಕರುಗಳ ಬಗ್ಗೆ ಜನರಿಂದ ಅಭಿಪ್ರಾಯಗಳನ್ನು ಸ್ವೀಕರಿಸಲಾಗುತ್ತಿದೆ.
ಮೋದಿ ಮತ್ತು ಅಮಿತ್ ಶಾ ಅವರ ಮಾನದಂಡದಲ್ಲಿ ಬಿಜೆಪಿಯಲೋಕಸಭೆ ಸದಸ್ಯರ ಪೈಕಿ ಹಲವು ಸಂಸದರ ವಿಫಲ ಸಾಬೀತಾಗಿದ್ದು, ಈ ಸಂಸದರ ವಿರುದ್ಧ ಜನರು ಆಕ್ರೋಶ ಹೊಂದಿದ್ದಾರೆ. ಇದರಿಂದಾಗಿ ಅವರ ಕ್ಷೇತ್ರಗಳಲ್ಲಿ ಜನರಿಗೆ ಬಿಜೆಪಿ ಬಗ್ಗೆ ಕೆಟ್ಟ ಅಭಿಪ್ರಾಯಗಳು ಮೂಡಿವೆ ಎಂದು ಪಕ್ಷ ಮೂಲಗಳು ತಿಳಿಸಿವೆ.
ಧಾನಮಂತ್ರಿ ಮೋದಿ ಮತ್ತು ರಾಷ್ಟ್ರಧ್ಯಕ್ಷ ಅಮಿತ್ ಶಾ ಅವರ ನ್ಯಾಯಾಲಯದಲ್ಲಿ ಇಂತಹ ಸಂಸದರಿಗೆ ಯಾವುದೇ ಪರಿಹಾರ ಸಿಗುವ ಸಾಧ್ಯತೆಯಿಲ್ಲ. ಇನ್ನೂ ಒಂದೂವರೆ ವರ್ಷದ ಸಮಯಾವಕಾಶವಿದ್ದು, ಒಂದೊಮ್ಮೆ ಈ ಅವಧಿಯಲ್ಲಿ ಅವರಲ್ಲಿ ಯಾವುದೇ ಸುಧಾರಣೆ ಆಗದಿದ್ದರೆ, ಅವರು ಟಿಕೆಟ್ ಕಳೆದುಕೊಳ್ಳುವುದು ನಿಶ್ಚಿತ.
ಪಕ್ಷವು ಇವರ ಸ್ಥಳದಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡಲಿದೆ ಎಂದು ಬಿಜೆಪಿ ನಾಯಕರೊಬ್ಬರು ತಿಳಿದ್ದಾರೆ.
ವಾಸ್ತವವಾಗಿ,ಚುನಾವಣೆಯ ಕಾರ್ಯತಂತ್ರ ವಿಚಾರದಲ್ಲಿ ಮೋದಿ ಅವರ ಗುಜರಾತ್ ಮಾದರಿಯು ಪ್ರತಿ ಬಾರಿಯೂ ಯಶಸ್ವಿ ಸಾಬೀತಾಗಿದೆ. ಮೋದಿ ಅವರು ಯಾರ ವರ್ಚಸ್ಸು ಜನರ ನಡುವೆ ಕಳಪೆ ಆಗಿದೆಯೋ, ಅಂತಹ ಶಾಸಕ ಮತ್ತು ಸಂಸದರ ಟಿಕೆಟ್ ಕತ್ತರಿಸುತ್ತಾರೆ.ಈ ರೀತಿ ಮಾಡಿ ಈಗಾಗಲೇ ಯಶಸ್ಸು ಪಡೆದಿದ್ದಾರೆ.
2014 ರಲ್ಲಿ ಬಿಜೆಪಿ 282 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿತ್ತು.