Advertisement

ಬ್ರಾಹ್ಮಣರ ವಿರುದ್ಧ ಕೀಳು ಹೇಳಿಕೆ: ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಿದ ಮಾಂಝಿ

07:59 PM Dec 19, 2021 | Team Udayavani |

ಪಾಟ್ನಾ: ಬಿಹಾರದ ಮಾಜಿ ಮುಖ್ಯಮಂತ್ರಿ, ಹಿಂದೂಸ್ಥಾನ್ ಅವಾಮ್ ಮೋರ್ಚಾದ ಸ್ಥಾಪಕ ಜಿತನ್ ರಾಮ್ ಮಾಂಝಿ ಅವರು ಬ್ರಾಹ್ಮಣರ ವಿರುದ್ಧ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿ ಆಡಳಿತಾರೂಢ ಎನ್‌ಡಿಎಗೆ ತೀವ್ರ ಮುಜುಗರವನ್ನುಂಟು ಮಾಡಿದ್ದಾರೆ.

Advertisement

70 ರ ಹರೆಯದ ನಾಯಕ, ಶನಿವಾರ ರಾತ್ರಿ ದಲಿತರಲ್ಲಿ ಅತ್ಯಂತ ಹಿಂದುಳಿದಿರುವ “ಭುಯಾನ್-ಮುಸಾಹರ್” ಸಮುದಾಯದ ಸಮಾರಂಭದಲ್ಲಿ ಮಾತನಾಡುತ್ತ ಬ್ರಾಹ್ಮಣರ ವಿರುದ್ಧ ಅವಾಚ್ಯ  ಶಬ್ದ ಬಳಸಿ ಅವರು ತಮ್ಮನ್ನು ಕೀಳಾಗಿ ಕಾಣುತ್ತಿದ್ದಾರೆಂದು  ಹೇಳಿ ವಿವಾದಕ್ಕೆ ಸಿಲುಕಿದ್ದಾರೆ.

ಕಾರ್ಯಕ್ರಮದ ವಿಡಿಯೋ ತುಣುಕು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮಾಂಝಿ ಅವರು ಪುರೋಹಿತ ವರ್ಗಕ್ಕೆ ಅವಾಚ್ಯ ಪದವನ್ನು ಉಚ್ಚರಿಸುವುದನ್ನು ಕೇಳಬಹುದು. ದಲಿತ ಗ್ರಾಹಕರು ನೀಡುವ ಆಹಾರವನ್ನು ತೆಗೆದುಕೊಳ್ಳಲು ಆಗುವುದಿಲ್ಲ ಆದರೆ ಅವರಿಂದ ನಗದು ಸ್ವೀಕರಿಸಲು ಯಾವುದೇ ಹಿಂಜರಿಕೆಯಿಲ್ಲ ಎಂದಿದ್ದಾರೆ.

ನಿತೀಶ್ ಕುಮಾರ್ ಸರ್ಕಾರದಲ್ಲಿ ಮಾಂಝಿ ಅವರ ಮಗ ಮಂತ್ರಿಯಾಗಿದ್ದು, ಅವರನ್ನು ಈ ಹೇಳಿಕೆ ಇಕ್ಕಟ್ಟಿಗೆ ಸಿಲುಕಿಸಿದೆ.ಬಿಜೆಪಿಗೂ ಇಕ್ಕಟ್ಟಿಗೆ ಸಿಲುಕಿಸುವಂತೆ ಮಾಡಿದೆ.

ವಿವಾದದ ಬೆನ್ನಲ್ಲೇ ಮಾಂಝಿ, ಹೇಳಿಕೆಯಿಂದ ಹೊರಬಂದಿದ್ದು, ನಾನು ನನ್ನ ಸಹವರ್ತಿ ದಲಿತರಲ್ಲಿ ಸ್ವಲ್ಪ ಸ್ವಾಭಿಮಾನವನ್ನು ತುಂಬಲು ಆ  ಪದವನ್ನು ಬಳಸಿದ್ದೇನೆ ಹೊರತು ಬ್ರಾಹ್ಮಣರಿಗೆ ಆ ಪದವನ್ನು ಬಳಸಲಿಲ್ಲ ಎಂದಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next