Advertisement

ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾಕರ ಅಭಿವೃದ್ಧಿಗೆ ಒತ್ತು: ಸಿದ್ದರಾಮಯ್ಯ

05:57 AM Feb 03, 2019 | Team Udayavani |

ಉಳ್ಳಾಲ : ಅಲ್ಪಸಂಖ್ಯಾಕರ ಅಭಿ ವೃದ್ಧಿಗೆ ಈ ಹಿಂದೆ ಇದ್ದ 400 ಕೋಟಿ ರೂ. ಅನುದಾನವನ್ನು 3 ಸಾವಿರ ಕೋ.ರೂ.ಗೆಏರಿಸಿದ್ದು ಕಾಂಗ್ರೆಸ್‌ ಸರಕಾರವಾಗಿದ್ದು, ನಾನು ಮುಖ್ಯಮಂತ್ರಿಯಾಗಿ ಮುಂದು ವರಿಯುತ್ತಿದ್ದರೆ 10 ಸಾವಿರ ಕೋಟಿ ರೂ. ಅನುದಾನ ಒದಗಿಸುವ ಯೋಜನೆ ಹಾಕಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

Advertisement

ಮಂಜನಾಡಿ ನರಿಂಗಾನದ ಅಲ್‌ ಮದೀನಾ ಸಂಸ್ಥೆಯ ಬೆಳ್ಳಿಹಬ್ಬ ಪ್ರಯುಕ್ತ ಶನಿವಾರ ನಡೆದ 25 ಜೋಡಿ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಲ್ಪಸಂಖ್ಯಾಕರು ಶಿಕ್ಷಣದಲ್ಲಿ ಬಹಳ ಹಿಂದೆ ಉಳಿದಿದ್ದಾರೆ. ಅದರಲ್ಲೂ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಮಕ್ಕಳನ್ನು ಗುರುತಿಸಿ ಅವರಿಗೆ ವಿವಾಹ ನೆರವೇರಿಸುವುದು ಪವಿತ್ರ ಕೆಲಸ. ಎಷ್ಟೋ ಜನ ಮದುವೆಗಾಗಿ ಸಾಲ ಮಾಡಿ ಇಡೀ ಜೀವನವನ್ನೇ ಕಳೆದುಕೊಳ್ಳುವಂತಹ ಸ್ಥಿತಿ ಇದೆ. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಅಲ್ಪಸಂಖ್ಯಾಕರ ಹೆಣ್ಮಕ್ಕಳಿಗೆ ಶಾದಿ ಭಾಗ್ಯ ಯೋಜನೆಯನ್ನು ಜಾರಿಗೆ ತರಲಾಯಿತು ಎಂದು ಅವರು ಹೇಳಿದರು.

ಬಡವರಿಗೆ ಶಕ್ತಿ ತುಂಬುವ ಕೆಲಸ ಸರಕಾರದ್ದು
ಬಡ ಅಲ್ಪಸಂಖ್ಯಾಕರ, ಪರಿಶಿಷ್ಟ ಜಾತಿ- ಪಂಗಡದವರ ಮತ್ತು ಹಿಂದುಳಿದವರ ಕೆಲಸ ಮಾಡುವಾಗ ನಾನು ಯಾರಿಗೂ ಹೆದರುವುದಿಲ್ಲ. ನನಗೆ ಶಕ್ತಿ ಕೊಟ್ಟವರು ಅವರೇ ಹಾಗಾಗಿ ದುರ್ಬಲ ಜನರಿಗೆ ಶಕ್ತಿ ತುಂಬುವ ಕೆಲಸ ಸರಕಾರದ ಜವಾ ಬ್ದಾರಿಯಾಗಿದೆ. ಹಿಂದಿನ ರಾಜ್ಯ ಸರಕಾರದ ಅವಧಿಯಲ್ಲಿ ನಾಡಿನ ಸಂಪತ್ತನ್ನು ಬಡವರಿಗೆ ವಿನಿಯೋಗಿಸುವ ಪ್ರಯತ್ನ ಆಗಿದೆ. ಸಂವಿಧಾನದ ಜವಾಬ್ದಾರಿಯನ್ನು ನಿರ್ವಹಿಸಿದ್ದೇನೆ ಎಂದ ಅವರು ಅಲ್‌ ಮದೀನಾ-ಬಡ ಮಕ್ಕಳನ್ನು ಗುರುತಿಸಿ ಶಿಕ್ಷಣ ನೀಡುತ್ತಿರುವ ಕಾರ್ಯ ಸಮಾಜ ಮುಖಿಯಾದ ಕಾರ್ಯ ಎಂದರು.

ಅನುದಾನಕ್ಕೆ ಅನುಮೋದನೆ
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಮಾತನಾಡಿ, ಅಲ್‌ ಮದೀನಾ ಸಂಸ್ಥೆ ಧಾರ್ಮಿಕ, ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಸುತ್ತಲಿನ ಮಕ್ಕಳನ್ನು ಹೆತ್ತವರ ಆಸ್ತಿ ಮಾತ್ರವಲ್ಲ, ಸಮಾಜದ ಆಸ್ತಿಯನ್ನಾಗಿ ಮಾರ್ಪಾಡು ಮಾಡಿದ್ದಾರೆ. ಹಿಂದೆ ಭೇಟಿ ನೀಡಿದ ಸಂದರ್ಭ ಸರಕಾರದಿಂದ 1ಕೋಟಿ ರೂ. ಅನುದಾನ ಒದಗಿಸಿಕೊಡುವ ಭರವಸೆಯಂತೆ ಅನುಮೋದನೆಯನ್ನು ರಾಜ್ಯ ಸರಕಾರ ಮಾಡಿತ್ತು ಎಂದರು.

Advertisement

ಯೇನಪೊಯ ಸಮೂಹ ಸಂಸ್ಥೆಗಳ ಅಧ್ಯಕ್ಷ ವೈ. ಅಬ್ದುಲ್ಲಾ ಕುಂಞಿ ಮತ್ತು ಮಮ್ತಾಝ್ ಅಲಿ ಖಾನ್‌ ಅವರನ್ನು ಸಿದ್ದರಾಮಯ್ಯ ಸಮ್ಮಾನಿಸಿದರು.

ಮಾಜಿ ಸಚಿವ ಬಿ. ರಮಾನಾಥ ರೈ, ಸಂಸ್ಥೆಯ ಮುಖ್ಯಸ್ಥ ಅಬ್ಟಾಸ್‌ ಮುಸ್ಲಿ ಯಾರ್‌, ಒಮನ್‌ ಪೊಲೀಸರ ಮುಖ್ಯಸ್ಥ ಸೈಯದ್‌ ರಸೂರಿ, ಅಲ್‌ ಹಝ್ರತ್‌, ಕಣ ಚೂರು ಸಮೂಹ ಸಂಸ್ಥೆಗಳ ಅಧ್ಯಕ್ಷ ಯು. ಕಣಚೂರು ಮೋನು, ಎ.ಎ. ಹೈದರ್‌ ಪರ್ತಿಪ್ಪಾಡಿ, ಇಬ್ರಾಹಿಂ ಕೋಡಿಜಾಲ್‌, ಉಳ್ಳಾಲ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಂತೋಷ್‌ ಶೆಟ್ಟಿ ಅಸೈಗೋಳಿ, ಶಾಫಿ ಸಅದಿ ಸಹಿತ ಪ್ರಮುಖರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next