Advertisement

Bengaluru: 7 ಮದುವೆ ಮುಚ್ಚಿಟ್ಟು 8ನೇ ಮದುವೆಯಾಗಿ ಪತಿಗೆ ವಂಚನೆ!

11:49 AM Jan 10, 2025 | Team Udayavani |

ಬೆಂಗಳೂರು: ಏಳು ಮದುವೆಯಾಗಿದ್ದ ವಿಚಾರ ಮುಚ್ಚಿಟ್ಟು ಬಳಿಕ 8ನೇ ಮದುವೆಯಾಗಿ ಪತಿಯ ಮನೆಯಲ್ಲಿದ್ದ ಚಿನ್ನಾಭರಣ, ನಗದು ದೋಚಿ ಸುಳ್ಳು ಪ್ರಕರಣ ದಾಖಲಿಸಿ ಕಿರುಕುಳ ನೀಡುತ್ತಿರುವ ಆರೋಪದಡಿ ಮಹಿಳೆ ಸೇರಿ ನಾಲ್ವರ ವಿರುದ್ಧ ಬಸವೇಶ್ವರನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮಹಾಗಣಪತಿ ನಗರ ನಿವಾಸಿ ರಾಮಕೃಷ್ಣ (62) ಎಂಬುವರು ನ್ಯಾಯಾಲಯಕ್ಕೆ ಖಾಸಗಿ ದೂರು ನೀಡಿದ್ದರು. ಇದೀಗ ನ್ಯಾಯಾಲಯದ ಸೂಚನೆ ಮೇರೆಗೆ ಮಂಡ್ಯ ಜಿಲ್ಲೆ ಮದ್ದೂರಿನ ಎಚ್‌. ಎಂ,ವಿಜಯಲಕ್ಷ್ಮೀ (54), ನಂದೀಶ (30), ಮಂಡ್ಯದ ರೇಖಾ (40) ಮತ್ತು ವನಜಾ(45) ಎಂಬುವರ ವಿರುದ್ಧ ಬಿಎನ್‌ಎಸ್‌ ಕಲಂ 314, 316(2) ಸೇರಿ ವಿವಿಧ ಆರೋಪಗಳ ಅಡಿಯಲ್ಲಿ ಎಫ್ಐಆರ್‌ ದಾಖಲಾಗಿದೆ.

ಏನಿದು ದೂರು?: ದೂರುದಾರ ರಾಮಕೃಷ್ಣ ಪತ್ನಿ ಮೃತರಾಗಿದ್ದಾರೆ. ರಾಮಕೃಷ್ಣಗೆ 2020ರ ನವೆಂಬರ್‌ನಲ್ಲಿ ಮ್ಯಾಟ್ರಿಮೋನಿ ವೆಬ್‌ಸೈಟ್‌ನಲ್ಲಿ ಎಚ್‌.ಎಂ.ವಿಜಯಲಕ್ಷ್ಮೀ ಪರಿಚಿತರಾಗಿದ್ದಾರೆ. ಬಳಿಕ ರಾಮನಗರದ ತಿಪ್ಪೇಗೌಡನ ದೊಡ್ಡಿಯ ರಾಮದೇವರ ಬೆಟ್ಟದಲ್ಲಿ ವಿಜಯಲಕ್ಷ್ಮೀಯನ್ನು ರಾಮಕೃಷ್ಣ 2ನೇ ಮದುವೆಯಾಗಿದ್ದಾರೆ.

ಈ ಮದುವೆಗೂ ಮುನ್ನ ವಿಜಯಲಕ್ಷ್ಮೀ ಈ ಹಿಂದೆ ನನಗೆ ಮದುವೆಯಾಗಿದ್ದು, ಪತ್ನಿ ಅನಾರೋ ಗ್ಯದಿಂದ ಮೃತಪಟ್ಟಿದ್ದಾರೆ ಎಂದು ಸುಳ್ಳು ಹೇಳಿ ದ್ದಳು. ಬಳಿಕ ರಾಮಕೃಷ್ಣ ಅವರನ್ನು ಮದುವೆ ಯಾದ ಕೆಲ ದಿನಗಳ ಬಳಿಕ ರಾಮಕೃಷ್ಣ ಅವರ ಪಿಎಫ್ ಹಣ ಕಬಳಿಸುವ ಉದ್ದೇಶದಿಂದ ವಿನಾ ಕಾರಣ ಮನೆಯಲ್ಲಿ ಜಗಳ ತೆಗೆಯುತ್ತಿದ್ದರು. ಪಿಎಫ್ ಹಣ ಕೊಡುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾರೆ. ಪಿಎಫ್ ಹಣ ನೀಡದಿದ್ದಲ್ಲಿ ನೇಣು ಹಾಕಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ರಾಮಕೃಷ್ಣ ದೂರಿನಲ್ಲಿ ಆರೋಪಿಸಿದ್ದಾರೆ.

ಆತ್ಮಹತ್ಯೆ ಬೆದರಿಕೆ: ವಿಜಯಲಕ್ಷ್ಮೀ ಈ ಹಿಂದೆ ತಾನು ಏಳು ಮದುವೆಯಾಗಿರುವ ವಿಚಾರವನ್ನು ರಾಮಕೃಷ್ಣ ಬಳಿ ಮುಚ್ಚಿಟ್ಟಿದ್ದಾರೆ. ಮದುವೆಯಾಗದ ವ್ಯಕ್ತಿಗಳ ಗಮನಕ್ಕೆ ಬಾರದಂತೆ ನಗದು ಹಣ ಹಾಗೂ ಚಿನ್ನಾಭರಣ ದೋಚಿದ್ದಾರೆ. ವಾಪಸ್‌ ಕೋಡುವಂತೆ ಅವರು ಕೇಳಿದರೆ ನೇಣು ಹಾಕಿಕೊಳ್ಳುವುದಾಗಿ ಬೆದರಿಸಿದ್ದಾರೆ. ರಾಮಕೃಷ್ಣ ವಿರುದ್ಧ ಮದ್ದೂರು ಹಾಗೂ ಮಂಡ್ಯ ನ್ಯಾಯಾಲ ಯದಲ್ಲಿ ವಿಜಯಲಕ್ಷ್ಮೀ ಚೆಕ್‌ ಬೌನ್ಸ್‌ ಕೇಸ್‌ ಗಳನ್ನು ದಾಖಲಿಸಿದ್ದಾರೆ ಎಂಬುದು ಗೊತ್ತಾಗಿದೆ.

Advertisement

ಅಲ್ಲದೆ, ರಾಮಕೃಷ್ಣ ಮನೆಯಲ್ಲಿ ಇಲ್ಲದಾಗ ಆರೋಪಿಗಳಾದ ನಂದೀಶ್‌, ವನಜಾ, ರೇಖಾಳನ್ನು ಮನೆಗೆ ಕರೆಸಿಕೊಂಡು ಮದ್ಯದ ಪಾರ್ಟಿ ಮಾಡುತ್ತಿದ್ದಳು. ಈ ಬಗ್ಗೆ ಪ್ರಶ್ನಿಸಿದರೆ, ನೇಣು ಹಾಕಿಕೊಳ್ಳುವುದಾಗಿ ವಿಜಯಲಕ್ಷ್ಮೀ ಬೆದರಿಸಿದ್ದಾರೆ. ಅಂತೆಯೆ ರಾಮಕೃಷ್ಣ ಅವರ ಮೊದಲ ಹೆಂಡತಿಯ ಮಗಳು ಹಾಗೂ ಅಳಿಯನ ವಿರುದ್ಧ ಪ್ರಕರಣ ದಾಖಲಿಸುವುದಾಗಿ ಬೆದರಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಮನೆಯಲ್ಲಿದ್ದ ಚಿನ್ನಾಭರಣ, 25 ಲಕ್ಷ ರೂ. ಕಳವು

ಈ ಮಧ್ಯೆ ಪತಿ ರಾಮಕೃಷ್ಣಗೆ ಗೊತ್ತಾಗದಂತೆ ಮನೆಯಲ್ಲಿದ್ದ ಚಿನ್ನ, ಬೆಳ್ಳಿ ಆಭರಣಗಳು ಮತ್ತು 25 ಲಕ್ಷ ರೂ. ನಗದು ಕಳವು ಮಾಡಿದ್ದಾರೆ. ವಿಜ ಯಲಕ್ಷ್ಮೀ ಮೋಸ ಮಾಡುವ ಉದ್ದೇಶದಿಂದ ಸುಳ್ಳು ಹೇಳಿ ರಾಮಕೃಷ್ಣ ಅವರನ್ನು ಮದುವೆಯಾಗಿ ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿದ್ದಾರೆ ಎಂದು ಪೊಲೀಸರು ಹೇಳಿದರು.

ಸಂಬಂಧಿಕರ ಬಳಿ ವಿಚಾರಿಸಿದಾಗ 7 ವಿವಾಹ ಆಗಿರುವುದು ಪತ್ತೆ!

ಪತ್ನಿ ವಿಜಯಲಕ್ಷ್ಮೀ ಕಿರುಕುಳಕ್ಕೆ ಬೇಸತ್ತ ರಾಮಕೃಷ್ಣ ಅವರು ಆಕೆಯ ಸಂಬಂಧಿಕರು ಹಾಗೂ ಸ್ನೇಹಿತರ ಬಳಿ ವಿಚಾರಿಸಿದ್ದಾರೆ. ಆಗ ವಿಜಯಲಕ್ಷ್ಮೀಗೆ ಈಗಾಗಲೇ 7 ಮದುವೆಯಾಗಿರುವುದು ಗೊತ್ತಾಗಿದೆ. ಮಂಡ್ಯ, ಮದ್ದೂರು ಮತ್ತಿತರ ಕಡೆ ಆಕೆ ಹಲವರನ್ನು ವಿವಾಹವಾಗಿರುವುದು ಕಂಡು ಬಂದಿದೆ ಎಂದು ಪತಿ ರಾಮಕೃಷ್ಣ ಅವರು ನೀಡಿರುವ ದೂರಿನಲ್ಲಿ ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next