Advertisement

ಮರ್ಕ್ ಮತ್ತು ಮಾಹೆ ಒಡಂಬಡಿಕೆ; ಏನಿದು ಎಂಬ್ರಿಯಾಲಜಿಸ್ಟ್ ತರಬೇತಿ?

03:15 PM Apr 18, 2018 | Sharanya Alva |

ಮಣಿಪಾಲ:ಭಾರತದಲ್ಲಿ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಅನ್ನು ಆಫ್ರಿಕಾ ಮತ್ತು ಏಷ್ಯಾಗಳಲ್ಲಿನ ಎಂಬ್ರಿಯಾಲಜಿಸ್ಟ್ ಗಳ ಪ್ಲಾಟ್ ಫಾರಂಗೆ ಅತ್ಯಾಧುನಿಕ ತರಬೇತಿ ನೀಡಲು ಸಹಯೋಗ ಹೊಂದಿರುವುದು ಮತ್ತು ಆಫ್ರಿಕಾ ಮತ್ತು ಏಷ್ಯಾಗಳಲ್ಲಿ ಪ್ರಮುಖ ಸವಾಲಾಗಿರುವ ತರಬೇತಿ ಮತ್ತು ಕುಶಲ ವೃತ್ತಿಪರರ ಕೊರತೆ ನಿವಾರಿಸಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಕಡಿಮೆ ವೆಚ್ಚದ ಗರ್ಭಧಾರಣೆಯ ಚಿಕಿತ್ಸೆ ಲಭ್ಯವಾಗುವಂತೆ ಮಾಡಲು ನಮಗೆ ಬಹಳ ಸಂತೋಷ ತಂದಿದೆ ಎಂದು ಮರ್ಕ್ ಫೌಂಡೇಶನ್ ಸಿಇಒ ಡಾ.ರಶಾ ಕೆಲೆಜ್ ಹೇಳಿದರು.

Advertisement

ಅವರು ಬುಧವಾರ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಮಣಿಪಾಲ ಯೂನಿರ್ವಸಿಟಿ ಆಫ್ ಹೈಯರ್ ಎಜುಕೇಶನ್ ಮತ್ತು ಮರ್ಕ್ ಫೌಂಡೇಶನ್ ಸಹಭಾಗಿತ್ವದ ಎಂಬ್ರಿಯಾಲಜಿಸ್ಟ್ ಗಳ ತರಬೇತಿಯ ಒಡಂಬಡಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮರ್ಕ್ ಫೌಂಡೇಶನ್ ಮಾಹೆ ಸಹಯೋಗದಲ್ಲಿ ಮರ್ಕ್ ಎಂಬ್ರಿಯಾಲಜಿ ಟ್ರೈನಿಂಗ್ ಪ್ರೋಗ್ರಾಂ ಎಂಬ ಅಸಿಸ್ಟಿವ್ ರೀಪ್ರೊಡಕ್ಷನ್ ಮತ್ತು ಎಂಬ್ರಿಯಾಲಜಿ ಸರ್ಟಿಫಿಕೇಟ್ ಕೋರ್ಸ್ ಅನ್ನು ತನ್ನ ಮರ್ಕ್ ಮೋರ್ ದ್ಯಾನ್ ಎ ಮದರ್ ಅಭಿಯಾನದ ಮೂಲಕ ಆರಂಭಿಸಿದೆ.

ಏನಿದು ಮರ್ಕ್:

Advertisement

ಮರ್ಕ್ ಆರೋಗ್ಯಸೇವೆ, ಲೈಫ್ ಸೈನ್ಸ್ ಮತ್ತು ಪರ್ಫಾರ್ಮೆನ್ಸ್ ಮೆಟೀರಿಯಲ್ಸ್ ನಲ್ಲಿ ಮುಂಚೂಣಿಯ ವಿಜ್ಞಾನ ಮತ್ತು ತಂತ್ರಜ್ಞಾನ ಕಂಪನಿಯಾಗಿದೆ. 50,000ಕ್ಕೂ ಹೆಚ್ಚು ಮಂದಿ ಜೀವನ ಸುಧಾರಿಸುವ ಬಯೋಫಾರ್ಮಸ್ಯುಟಿಕಲ್ ಥರಪಿಗಳಿಂದ ಕ್ಯಾನ್ಸರ್ ಚಿಕಿತ್ಸೆ ಅಥವಾ ಮಲ್ಟಿಪಲ್ ಸ್ಲೆರೋಸಿಸ್ ವರೆಗೆ ನಿರ್ವಹಿಸುತ್ತದೆ. ವೈಜ್ಞಾನಿಕ ಸಂಶೋಧನೆ ಮತ್ತು ಉತ್ಪಾದನೆಗೆ ಅತ್ಯಾಧುನಿಕ ಸಿಸ್ಟಮ್ಸ್, ಸ್ಮಾರ್ಟ್ ಫೋನ್ ಗಳು ಮತ್ತು ಎಲ್ ಸಿಡಿ ಟೆಲಿವಿಷನ್ ಗಳಿಗೆ ಲಿಕ್ವಿಡ್ ಕ್ರಿಸ್ಟಲ್ ಗಳನ್ನು ಪೂರೈಸುತ್ತದೆ.

2017ರಲ್ಲಿ ಮರ್ಕ್ 66 ದೇಶಗಳಲ್ಲಿ 1.3 ಬಿಲಿಯನ್ ಯೂರೋ ಮಾರಾಟ ಹೊಂದಿದೆ. 1668ರಲ್ಲಿ ಪ್ರಾರಂಭವಾದ ಮರ್ಕ್ ವಿಶ್ವದ ಅತ್ಯಂತ ಹಳೆಯ ಫಾರ್ಮಸ್ಯುಟಿಕಲ್ ಮತ್ತು ಕೆಮಿಕಲ್ ಕಂಪನಿಯಾಗಿದೆ. ಈ ಕಂಪನಿಯ ಸಂಸ್ಥಾಕರು ಸಾರ್ವಜನಿಕವಾಗಿ ಪಟ್ಟಿಯಾದ ಕಾರ್ಪೊರೇಟ್ ಸಮೂಹದ ಬಹುಪಾಲು ಹೊಂದಿದೆ. ಮರ್ಕ್ ತನ್ನ ಹೆಸರಿಗೆ ಮತ್ತು ಬ್ರಾಂಡ್ ನ ಜಾಗತಿಕ ಹಕ್ಕುಗಳನ್ನು ಹೊಂದಿದೆ. ಅಮೆರಿಕಾ ಮತ್ತು ಕೆನಡಾಗಳಲ್ಲಿ ಕಂಪನಿ ಇಎಂಡಿ ಸೆರೊನೊ, ಮಿಲಿಪೋರ್ ಸಿಗ್ಮಾ ಮತ್ತು ಇಎಂಡಿ ಪರ್ಫಾರ್ಮೆನ್ಸ್ ಮೆಟಿರೀಯಲ್ಸ್ ನ ಕಾರ್ಯ ನಿರ್ವಹಿಸುತ್ತದೆ.

ಏನಿದು ಮರ್ಕ್ ಮೋರ್ ದ್ಯಾನ್ ಎ ಮದರ್ ಅಭಿಯಾನ?

ಮರ್ಕ್ ಫೌಂಡೇಷನ್ ಹೆಚ್ಚು ಆಫ್ರಿಕಾ ಮತ್ತು ಏಷ್ಯಾದ ದೇಶಗಳನ್ನು ಇತರೆ ಅಭಿವೃದ್ಧಿ ಶೀಲ ರಾಷ್ಟ್ರಗಳೊಂದಿಗೆ ವಿಸ್ತರಿಸುವ ಯೋಜನೆ ಹೊಂದಿದೆ. ಸ್ಪಷ್ಟ ಅನುಕೂಲಗಳ ಮೂಲಕ ಬಂಜೆತನವನ್ನು ಕಳಂಕರಹಿತವಾಗಿರುವ ಸಾಂಸ್ಕೃತಿಕ ಬದಲಾವಣೆಯನ್ನು ತರುವ ಉದ್ದೇಶ ಹೊಂದಿದ್ದು ಮರ್ಕ್ ತಾಯಿಗಿಂತಲೂ ಹೆಚ್ಚು ಸುಸ್ಥಿರ ಸಕ್ರಿಯ ಭಾಗವಹಿಸುವಿಕೆಯನ್ನು 2015ರಿಂದಲೂ ವಿವಿಧ ದೇಶಗಳಲ್ಲಿ ಹೊಂದಿದೆ.

ಹಲವು ಸಂಸ್ಕೃತಿಗಳಲ್ಲಿ ಮಕ್ಕಳಿಲ್ಲದ ಮಹಿಳೆ ತಾರತಮ್ಯ, ಕಳಂಕ ಮತ್ತು ಬಹಿಷ್ಕಾರ ಎದುರಿಸುತ್ತಾರೆ. ಮಕ್ಕಳನ್ನು ಹೆರಲಾಗದ ಅಸಾಮರ್ಥ್ಯ ಅವರನ್ನು ಪ್ರತ್ಯೇಕತೆ ಮತ್ತು ಹಲ್ಲೆಗಳಿಗೆ ಕಾರಣವಾಗುತ್ತದೆ. ಮರ್ಕ್ ಮೋರ್ ದ್ಯಾನ್ ಎ ಮದರ್ ಅಂತಹ ಮಹಿಳೆಯರಿಗೆ ಮಾಹಿತಿಯ ಲಭ್ಯತೆ, ಆರೋಗ್ಯ, ಮನಸ್ಥಿತಿ ಬದಲಾವಣೆ ಮತ್ತು ಆರ್ಥಿಕ ಸಬಲೀಕರಣಕ್ಕೆ ಅವಕಾಶ ಕಲ್ಪಿಸುತ್ತದೆ.

ಮರ್ಕ್ ಫೌಂಡೇಶನ್ 50ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಮೂರು ತಿಂಗಳಿಂದ ಆರು ತಿಂಗಳವರೆಗೆ ಕ್ಲಿನಿಕಲ್ ಮತ್ತು ಪ್ರಾಯೋಗಿಕ ತರಬೇತಿಯನ್ನು ಫರ್ಟಿಲಿಟಿ ಸ್ಪೆಷಲಿಸ್ಟ್ ಗಳು ಮತ್ತು ಎಂಬ್ರಿಯಾಜಲಿಸ್ಟ್ ಗಳಿಗೆ ಆಫ್ರಿಕಾ ಮತ್ತು ಏಷ್ಯಾದ 17ಕ್ಕೂ ಹೆಚ್ಚು ದೇಶಗಳಲ್ಲಿ ನೀಡುತ್ತಿದೆ.

ಕಾರ್ಯಕ್ರಮದಲ್ಲಿ ಮಾಹೆಯ ಸಮ ಕುಲಪತಿ ಪ್ರೊ.ಪೂರ್ಣಿಮಾ ಬಾಳಿಗಾ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಉಪ ಕುಲಪತಿ ಪ್ರೊ.ವಿನೋದ್ ಭಟ್, ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡೀನ್ ಪ್ರೊ.ಪ್ರಜ್ಞಾ ರಾವ್, , ಪ್ರೊ.ಸತೀಶ್ ಅಡಿಗ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next