Advertisement

Chikkaballapur: ಮಾನಸಿಕ ಆರೋಗ್ಯಕ್ಕೆ “ಈಶಾ’ ಮಿರಾಕಲ್‌ ಆ್ಯಪ್‌: ಸದ್ಗುರು

12:16 AM Dec 23, 2024 | Team Udayavani |

ಚಿಕ್ಕಬಳ್ಳಾಪುರ: ಮಾನಸಿಕ ಆರೋಗ್ಯ ಇತ್ತೀಚಿನ ದಿನಗಳಲ್ಲಿ ದೊಡ್ಡ ಸವಾಲಾಗಿದೆ. ಆ ನಿಟ್ಟಿನಲ್ಲಿ ಈಶಾ ಫೌಂಡೇಶನ್‌ ವತಿಯಿಂದ ಮಿರಾಕಲ್‌ ಹೆಸರಲ್ಲಿ ಹೊಸ ಆ್ಯಪ್‌ ಸಿದ್ಧಪಡಿಸಲಾಗುತ್ತಿದೆ. 2025 ಜನವರಿ ತಿಂಗಳಲ್ಲಿ ಆ್ಯಪ್‌ ಬಿಡುಗಡೆಗೊಳ್ಳಲಿದೆ ಎಂದು ಸದ್ಗುರು ಜಗ್ಗಿ ವಾಸುದೇವ್‌ ಪ್ರತಿಪಾದಿಸಿದರು.

Advertisement

ಮೆದುಳು ಶಸ್ತ್ರಚಿಕಿತ್ಸೆಯ 9 ತಿಂಗಳ ಅನಂತರ ನಗರದ ಅವಲಗುರ್ಕಿ ಸಮೀಪದ ಈಶಾ ಕೇಂದ್ರಕ್ಕೆ ರವಿವಾರ ಭೇಟಿ ನೀಡಿದ್ದ ವೇಳೆ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಜಗತ್ತಿನಲ್ಲಿ ಕನಿಷ್ಠ 10, 12 ಕೋಟಿ ಜನರಿಗೆ ತಲುಪುವ ನಿಟ್ಟಿನಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದೆಂದು ಹೇಳಿದರು.

ಕ್ರೀಡೆಗಳಲ್ಲಿ ಹೆಚ್ಚು ಹೆಚ್ಚು ಯುವ ಜನರನ್ನು ತೊಡಗಿಸಿ ಉತ್ತೇಜಿಸಿದಷ್ಟು ಸಮಾಜದಲ್ಲಿ ಬೇರೂರಿರುವ ಕುಡಿತದ ಚಟ ಹಾಗೂ ಜಾತಿ ವಿನಾಶ ಮಾಡಬಹುದು. ಈಶಾ ಫೌಂಡೇಶನ್‌ ನಡೆಸುತ್ತಿರುವ ಈಶಾ ಗ್ರಾಮೋತ್ಸವ ಕ್ರೀಡೆಗಳಿಂದ ಸಮಾಜದಲ್ಲಿ ದೊಡ್ಡ ಬದಲಾವಣೆ ಕಂಡಿದೆ ಎಂದರು.

ದೇಹದ, ಮನಸ್ಸಿನ ಹಾಗೂ ಆರ್ಥಿಕ ಆರೋಗ್ಯಕ್ಕೆ ಮನುಷ್ಯ ನಿಗೆ ಕ್ರೀಡೆ ತುಂಬ ಆವಶ್ಯಕ. ಸದ್ಯ 5 ರಾಜ್ಯ, ಒಂದು ದೇಶದಲ್ಲಿ ಈಶಾ ಗ್ರಾಮೋತ್ಸವ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ದೇಶ ಪೂರ್ತಿ ಆಚರಿಸಬೇಕೆಂಬ ಆಸೆ ಇದೆ ಎಂದರು.

ಎಲೆಕ್ಟ್ರಿಕಲ್‌ ವಾಹನಗಳಿಗೆ
ಸದ್ಗುರು ವಿರೋಧ
ನಾನು ಹೇಳುವ ಮಾತು ವಿವಾದ ಆಗಬಹುದು ಎಂದು ಹೇಳುವ ಮೂಲಕ ವಿದ್ಯುತ್‌ ಶಕ್ತಿ ಬಳಸಿ ಚಲಿಸುವ ಎಲೆಕ್ಟ್ರಿಕಲ್‌ ವಾಹನಗಳಿಗೆ ಸದ್ಗುರುಗಳು ತಮ್ಮ ವಿರೋಧ ವ್ಯಕ್ತಪಡಿಸಿದರು. ನಗರ ಪ್ರದೇಶದಲ್ಲಿ ಎಲೆಕ್ಟ್ರಿಕಲ್‌ ವಾಹನಗಳು ಹೊಗೆ ರಹಿತವಾಗಿ ಚಲಿಸಬಹುದು ಅಷ್ಟೇ. ಅದು ನಗರಕ್ಕೆ, ನಗರ ಪರಿಸರಕ್ಕೆ ಒಳ್ಳೆಯದು. ಆದರೆ ಒಟ್ಟಾರೆ ಭೂಮಿ ಪರಿಸರಕ್ಕೆ ಅದರಿಂದ ಅನುಕೂಲವಿಲ್ಲ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next