Advertisement

ಮಣಿಪಾಲ: ಸಾಗರದ ಮಹಿಳೆಗೆ ಕೊರೊನಾ ಇಲ್ಲ; ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ

10:26 AM Mar 13, 2020 | Mithun PG |

ಶಿವಮೊಗ್ಗ:  ಜಿಲ್ಲೆಯ ಸಾಗರ ತಾಲೂಕಿನ ಆಚಾಪುರ ಗ್ರಾಮದ ಮಹಿಳೆಗೆ ಕೊರೊನಾ  ಸೋಂಕು ತಗುಲಿಲ್ಲ ಎಂದು ವರದಿಯಾಗಿದೆ.

Advertisement

ಬುಧವಾರ  ಸಾಮಾಜಿಕ ಜಾಲತಾಣದಲ್ಲಿ ಸಾಗರದ ಮಹಿಳೆ ಕೊರೊನಾಗೆ ತುತ್ತಾಗಿದ್ದಾರೆ ಎಂಬ  ಸುದ್ದಿ ವ್ಯಾಪಕ ವೈರಲ್ ಗೆ ಕಾರಣವಾಗಿತ್ತು.

ಈ ಮಹಿಳೆ ಫೆಬ್ರವರಿ ಕೊನೆಯಲ್ಲಿ ಮೆಕ್ಕಾ ಮದೀನಾಕ್ಕೆ ತೆರಳಿದ್ದರು. ಈ ವೇಳೆ ಅವರಿಗೆ ಉಸಿರಾಟದ ಸಮಸ್ಯೆ ಎದುರಾಗಿತ್ತು.  ಹಿಂದಿರುಗಿ ಬಂದ ನಂತರ  ಕಫ ಹಾಗೂ ಉಸಿರಾಟದ ತೊಂದರೆ ಉಲ್ಬಣಿಸಿದ ಪರಿಣಾಮ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.

ನಿನ್ನೆ ಅವರ ರಕ್ತದ ಮಾದರಿಯನ್ನು ತೆಗೆದು ಶಿವಮೊಗ್ಗ ಮೆಡಿಕಲ್ ಕಾಲೇಜ್ ನ ವಿಡಿಆರ್ ಎಲ್ ಲ್ಯಾಬ್  ನಲ್ಲಿ ಪರೀಕ್ಷೆ ಮಾಡಲಾಗಿತ್ತು. ಇದರ ವರದಿ ಇಂದು ಬೆಳಗ್ಗೆ ಬಂದಿದ್ದು, ಮಹಿಳೆಗೆ ಕರೋನ ವೈರಸ್ ಇಲ್ಲದಿರುವುದು ದೃಢಪಟ್ಟಿದೆ. ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜೇಶ್ ಸುರಗಿಹಳ್ಳಿ ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next