ಉಡುಪಿ: ಮಾರುಕಟ್ಟೆ ಸಂಶೋಧನೆಯು ಯಾವುದೇ ಒಂದು ಉದ್ಯಮದ ಆತ್ಮ ಅಥವಾ ಬೆನ್ನೆಲು ಬಿದ್ದಂತೆ. ಅಷ್ಟಕ್ಕೂ ಮಾರು ಕಟ್ಟೆ ಸಂಶೋಧನೆ ಎನ್ನುವುದು ಯಾವಾಗಲೊ ಒಂದು ಬಾರಿ ನೆರವೇರಿಸು ವಂತಹ ಸಂಗತಿಯಾಗಬಾರದು. ಅದೊಂದು ನಿರಂತರ ಪ್ರಕ್ರಿಯೆಯಾಗಿ ಬೆಳೆಯಬೇಕು ಎಂದು ಜಾಕಿ ಇಂಡಿಯಾ ಮಾರ್ಕೆಟಿಂಗ್ ಹೆಡ್ ಪ್ರತೀಕ್ ಕುಮಾರ್ ಅಭಿಪ್ರಾಯ ಪಟ್ಟರು.
ಮಣಿಪಾಲದ ಟಿ.ಎ. ಪೈ ಮ್ಯಾನೇಜ್‌ಮೆಂಟ್ ಇನ್‌ಸ್ಟಿಟ್ಯೂಟ್ (ಟ್ಯಾಪ್ಮಿ) ವಿದ್ಯಾರ್ಥಿಗಳು ನಡೆಸುವ ಅತಿ ದೊಡ್ಡ ಮಾರುಕಟ್ಟೆ ಸಂಶೋಧನಾ ಉತ್ಸವ ಬ್ರ್ಯಾಂಡ್‌ಸ್ಕ್ಯಾನ್‌ನ 25ನೇ ವರ್ಷದ ಮೊದಲ ಭಾಗವನ್ನು ರವಿವಾರ ಮಣಿಪಾಲದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
ಬ್ರ್ಯಾಂಡ್‌ಸ್ಕ್ಯಾನ್ 25ನೇ ವರ್ಷ ದಲ್ಲಿ ರುವಾಗ ಆ್ಯಪ್ ಹೊಂದಿದ್ದೇವೆ. ಮುಂದೆ ಇನ್ನಷ್ಟು ಸಾಧನೆಗಳನ್ನು ಮಾಡಲಿದ್ದೇವೆ ಎಂದು ಬ್ರ್ಯಾಂಡ್‌ಸ್ಕ್ಯಾನ್ ಅಧ್ಯಕ್ಷ ಶೀರ್ಷೇಂದು ಗಂಗುಲಿ ಹೇಳಿದರು.
ಬ್ರ್ಯಾಂಡ್‌ಸ್ಕ್ಯಾನ್ ವಿದ್ಯಾರ್ಥಿಗಳ ಪ್ರಾಯೋಗಿಕ ಕಲಿಕೆಗೆ ಉತ್ತೇಜನ ನೀಡುವ ಜತೆಗೆ ಉದ್ಯಮದೊಂದಿಗೆ ನೇರ ಸಂಪರ್ಕ ಸಾಧಿಸುತ್ತಿದೆ ಮತ್ತುಉದ್ಯಮದಲ್ಲಿ ಮಹತ್ವದ ಬದ ಲಾವಣೆಗೆ ಬದ್ಧವಾಗಿದೆ ಎಂದು ನಿರ್ದೇಶಕ ಪ್ರೊ| ಮಧು ವೀರ ರಾಘವನ್ ತಿಳಿಸಿ ದರು. ಟ್ಯಾಪ್ಮಿ ಡೀನ್ (ಶೈಕ್ಷಣಿಕ) ಡಾ| ಸೈಮನ್ ಜಾರ್ಜ್, ಬ್ರ್ಯಾಂಡ್‌ಸ್ಕ್ಯಾನ್ ಸಂಚಾಲಕ ಸಿದ್ಧಾಂತ ಚಾವ್ಲಾ, ಸಹಸಂಚಾಲಕ ರಾಮ್ ಪಂಚಾರಿಯ ಉಪಸ್ಥಿತರಿದ್ದರು.
ಬ್ರ್ಯಾಂಡ್‌ಸ್ಕ್ಯಾನ್ ನೇರ ಯೋಜನೆ ಗಳ ಸಂಶೋಧನೆಗೆ ಇರುವ ಒಂದು ವೃತ್ತಿಪರ ವೇದಿಕೆಯಾಗಿದೆ. ಗ್ರಾಹಕರಿಂದ ನೇರವಾಗಿ ಡೇಟಾವನ್ನು ಸಂಗ್ರಹಿಸಿ, ಅದನ್ನು ವಿಶ್ಲೇಷಿಸುವ, ಅರ್ಥೈಸುವ ಮತ್ತು ಡೇಟಾ ಆಧರಿಸಿ ಕಂಪೆನಿಗಳಿಗೆ ಒಳನೋಟಗಳನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿಷ್ಠಿತ ಕಂಪೆನಿಗಳು, ಸಂಸ್ಥೆಗಳು ಇದರಲ್ಲಿ ಪಾಲ್ಗೊಳ್ಳುತ್ತಿವೆ. ಕಾರ್ಯಕ್ರಮದ ಮುಂದಿನ ಭಾಗ ನ. 18-19ರಂದು ಬೆಂಗಳೂರಿನಲ್ಲಿ ಯಶವಂತಪುರದ ಒರಾಯನ್ ಮಾಲ್‌ನಲ್ಲಿ ನಡೆಯಲಿದೆ.