Advertisement
ಪ್ರತಿ ವರ್ಷದ ಶಿವರಾತ್ರಿಯಂತೆ ಈ ವರ್ಷವೂ ಅಮ್ಮನವರು ಮಧ್ಯಾಹ್ನ 2:15ಕ್ಕೆ ಭಕ್ತರಿಗೆ ದರ್ಶನ ನೀಡಿದರು. ತಾಲೂಕಿನ ಯಾನಾಗುಂದಿ ಸುಕ್ಷೇತ್ರ ಮಾಣಿಕ್ಯ ಗಿರಿಯಲ್ಲಿ ನಿರಂತರ ಓಂಕಾರ, ಜೈಕಾರಗಳು ಮೊಳಗಿದವು. ಬೆಳಗ್ಗೆಯಿಂದಲೇ ಬೆಟ್ಟದ ತುಂಬೆಲ್ಲ ಭಕ್ತರು ಜಮಾಯಿಸಿದ್ದರು. ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಸೇರಿ ರಾಜ್ಯದ ವಿವಿಧ ಭಾಗಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು. ಭಕ್ತರು ನಿರಂತರ ಪೂಜೆ ಮತ್ತು ಓಂಕಾರ ಜಪ ಮಾಡುತ್ತಿದ್ದರು. ಇಡೀ ಬೆಟ್ಟದ ತುಂಬೆಲ್ಲ ಗಂಟಾನಾದರಿಂಗಣಿಸುತ್ತಿತ್ತು. ನಿರಂತರ ಒಂದು ಗಂಟೆಕಾಲ ಗುಹೆ ಹೊರಗಡೆ ಇರುವ ಗ್ಯಾಲರಿಯಲ್ಲಿ ಕುಳಿತು ಭಕ್ತರಿಗೆ ಮೌನ ದರ್ಶನ ನೀಡಿದರು.