ಹುಬ್ಬಳ್ಳಿ: ಮಹಾರಾಷ್ಟ್ರ ಸರ್ಕಾರ ದೇಸಿ ಗೋವಿಗೆ “ರಾಜ್ಯಮಾತಾ’ ಸ್ಥಾನ ನೀಡಿ ರೈತರಿಗೆ ಪ್ರೋತ್ಸಾಹ ಧನ ಘೋಷಣೆ ಮಾಡಿರುವ ಬೆನ್ನಲ್ಲೇ ಕರ್ನಾಟಕದಲ್ಲೂ ಇಂತಹ ಘೋಷಣೆ ಆಗಲಿ ಎಂಬ ಕೂಗು ಕೇಳಿಬಂದಿದೆ. ದೇಶದಲ್ಲಿ ಈ ಹಿಂದೆ ನೂರಾರು ದೇಸಿ ತಳಿಗಳ ಹಸುಗಳಿದ್ದವು. ಈಗ ಸುಮಾರು 31 ದೇಸಿ ಹಸುಗಳ ತಳಿಗಳಷ್ಟೇ ಉಳಿದಿವೆ. ಅವುಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಈ ಕ್ರಮ ಪೂರಕವಾಗಲಿದೆ ಎನ್ನಲಾಗಿದೆ.
Advertisement
ದೇಸಿ ಗೋವಿಗೆ “ರಾಷ್ಟ್ರಮಾತಾ’ ಸ್ಥಾನ ನೀಡಬೇಕೆಂಬ ಬೇಡಿಕೆ ದಶಕಗಳಷ್ಟು ಹಳೆಯದ್ದು. ಇದುವರೆಗೂ ಅದು ಸಾಧ್ಯವಾಗಿಲ್ಲ. ಆದರೆ, ಮಹಾರಾಷ್ಟ್ರ ಸರ್ಕಾರ “ರಾಜ್ಯಮಾತಾ’ ಸ್ಥಾನ ನೀಡಿರುವುದು ದೇಸಿ ಗೋವುಗಳ ಸಾಕಣೆದಾರರಿಗೆ ಖುಷಿ ತರಿಸಿದೆ. ಅಲ್ಲದೇ ಜರ್ಸಿ ಹಾಗೂ ಎಚ್‌ಎಫ್ ಹಸುಗಳ ಅಬ್ಬರದಲ್ಲಿ ತೆರೆ-ಮರೆಗೆ ಸರಿದಂತಿದ್ದ ದೇಸಿ ಹಸುಗಳಿಗೆ ಮತ್ತೆ ಮಹತ್ವ ಸಿಗಲಿದೆ.
Related Articles
ಇಲಾಖೆ ನಡೆಸಿದ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
Advertisement
ರಾಜ್ಯದಲ್ಲೂ ಜಾರಿಯಾಗಲಿ: ಕರ್ನಾಟಕದಲ್ಲಿ ಸಂಘ ಪರಿವಾರ, ಅನೇಕ ಮಠಗಳು, ಸಂಘ-ಸಂಸ್ಥೆಗಳು ಗೋಶಾಲೆಗಳ ಮೂಲಕ ದೇಸಿ ಹಸುಗಳ ಸಾಕಣೆ ಮಾಡುತ್ತಿದ್ದು, ಹಳ್ಳಿಗಳಲ್ಲಿಯೂ ರೈತರು ನಿಧಾನಕ್ಕೆ ದೇಸಿ ಹಸುಗಳ ಸಾಕಣೆಗೆ ಮುಂದಾಗುತ್ತಿದ್ದಾರೆ. ದೇಸಿ ಹಸುಗಳ ಸಂರಕ್ಷಣೆ ನಿಟ್ಟಿನಲ್ಲಿ ಕರ್ನಾಟಕದಲ್ಲಿಯೂ ರಾಜ್ಯ ಸರ್ಕಾರ ಮಹಾರಾಷ್ಟ್ರ ಮಾದರಿಯಲ್ಲಿ ದೇಸಿಯ ಗೋವಿಗೆ “ರಾಜ್ಯಮಾತಾ’ ಪಟ್ಟ ನೀಡಿ ಅವುಗಳನ್ನು ಪೋಷಿಸುವ ರೈತರಿಗೆ ಸಹಾಯಧನ ನೀಡುವಂತಾಗಬೇಕು ಎಂಬ ಒತ್ತಾಯವೂ ಕೇಳಿಬಂದಿದೆ.
ದೇಸಿ ಗೋವುಗಳ ಸಂರಕ್ಷಣೆ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರ ಕೈಗೊಂಡಿರುವ ಕ್ರಮ ಪ್ರೇರಣಾದಾಯಕವಾಗಿದೆ. ರಾಷ್ಟ್ರಮಟ್ಟದಲ್ಲಿಯೂ ದೇಸಿ ಗೋವಿಗೆ “ರಾಷ್ಟ್ರಮಾತಾ’ ಘೋಷಣೆ ಬೇಡಿಕೆ-ಒತ್ತಾಯವಿದೆ. ಕೇಂದ್ರ ಸರ್ಕಾರ ಅದನ್ನುಕೈಗೊಂಡರೆ ಇನ್ನಷ್ಟು ಖುಷಿ ತರಲಿದೆ. ಆರೋಗ್ಯ, ಪರಿಸರ, ಸಾವಯವ ಕೃಷಿ ದೃಷ್ಟಿಯಿಂದ ದೇಸಿಗಳು ಮತಹ್ವದ ಪಾತ್ರ ಬೀರುತ್ತವೆ.
*ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ, ಕನೇರಿಮಠ. ಮಹಾರಾಷ್ಟ್ರ ಸರ್ಕಾರ ದೇಸಿ ಹಸುಗಳಿಗೆ “ರಾಜ್ಯಮಾತಾ’ ಪಟ್ಟ ನೀಡಿರುವುದು ಒಳ್ಳೆಯ ಬೆಳವಣಿಗೆ. ಕರ್ನಾಟಕದಲ್ಲಿಯೂ ಇಂತಹ ಘೋಷಣೆ ಆಗಲಿ ಎಂದು ವಿಶ್ವಹಿಂದೂ ಪರಿಷತ್‌ನ ಗೋರಕ್ಷಾ ವಿಭಾಗದಿಂದ ಸರ್ಕಾರವನ್ನು ಒತ್ತಾಯಿಸಲಾಗುವುದು.
ಉತ್ತರ ಕರ್ನಾಟಕದಲ್ಲಿ ನಾಲ್ಕೈದು ಕಡೆ ಗೋಶಾಲೆಗಳನ್ನು ನಿರ್ವಹಿಸಲಾಗುತ್ತಿದ್ದು, ದೇಸಿ ಹಸುಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
*ಗೋವರ್ಧನರಾವ್,
ವಿಎಚ್‌ಪಿ ಉತ್ತರ ಪ್ರಾಂತ ಮುಖ್ಯಸ್ಥ. ■ ಅಮರೇಗೌಡ ಗೋನವಾರ