Advertisement
ವಿಕಾಸಸೌಧದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರತಿ ಆಸ್ತಿ ನೋಂದಣಿಗೆ ಮಧ್ಯವರ್ತಿಗಳು 30-40 ಲಕ್ಷ ರೂ. ಲಂಚ ತೆಗೆದು ಕೊಳ್ಳುತ್ತಿದ್ದರು. ಸ್ಥಳೀಯ ಆಡಳಿತ ಸಂಸ್ಥೆಗೂ ಆದಾಯ ಬರುವುದಿಲ್ಲ. ತೆರಿಗೆ ಕಟ್ಟಿದವರ ದುಡ್ಡಿನಲ್ಲಿ ಇವರಿಗೆ ಸವಲತ್ತು ಸಿಗುತ್ತದೆ. ಕಾನೂನು ಪಾಲನೆ ಮಾಡುವುದು ಮೂರ್ಖತನವಾ? ಬೆಂಗಳೂರಲ್ಲಿ 600-1000 ಕೋಟಿ ರೂ. ಆದಾಯ ಸೋರಿಕೆ ಆಗುತ್ತಿದೆ. ಇದಕ್ಕೆ ಈಗ ಕಡಿವಾಣ ಹಾಕಿದ್ದೇವೆ ಎಂದು ಹೇಳಿದರು.
ಹಿಂಗಾರಿನಲ್ಲಿ 1.58 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದ್ದು, ಕೃಷಿ ಮತ್ತು ಕಂದಾಯ ಇಲಾಖೆಗಳಿಂದ ಜಂಟಿ ಸಮೀಕ್ಷೆ ಮಾಡಲಾಗಿದೆ. 120 ಕೋಟಿ ರೂ. ಪರಿಹಾರಕ್ಕೆ ಬೇಕಾಗಬಹುದು ಎಂದು ಅಂದಾಜಿಸಿದ್ದು, ಸೋಮವಾರ ಸ್ಪಷ್ಟ ಚಿತ್ರಣ ಸಿಗಲಿದೆ. ಮುಂದಿನ ಒಂದು ವಾರದಲ್ಲಿ ಪರಿಹಾರ ಪಾವತಿ ಆಗಬೇಕು ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇನ್ನು ಮುಂಗಾರು
ಹಂಗಾಮಿನಲ್ಲಿ ಹಾನಿಯಾಗಿದ್ದ 77 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ, ಮನೆ ಹಾನಿ, ಪ್ರಾಣಿ ಹಾನಿಗೆ ಸಂಬಂಧಿಸಿದ 162 ಕೋಟಿ ರೂ. ಪರಿಹಾರ ಪಾವತಿ ಆಗಿದೆ ಎಂದು ಕೃಷ್ಣ ಬೈರೇಗೌಡ ತಿಳಿಸಿದರು.