ಮಂಗಳೂರು:ಇಂದಿನ ಕಾಲದಲ್ಲಿ ಜಗತ್ತಿಗೆ ಸಹಿಷ್ಣುತೆ ಮತ್ತು ಸ್ನೇಹದ ಸಂದೇಶದ ಅಗತ್ಯವಿದೆ ಎಂದು ಸುನ್ನಿ ಸಂಘಟನೆಗಳ ನೇತಾರ ಡಾ| ಎಂ.ಎಸ್.ಎಂ. ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಹೇಳಿದ್ದಾರೆ.
ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸ್ಸೆಸ್ಸೆಫ್ ದ.ಕ. ಜಿಲ್ಲೆ ವೆಸ್ಟ್ ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಸೋಮವಾರ ನಡೆದ “ಇಲಲ್ ಹಬೀಬ್’ ಮಿಲಾದ್ ಬೃಹತ್ ರ‍್ಯಾಲಿಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರವಾದಿ ಮುಹಮ್ಮದ್ ಪೈಗಂಬರ್ ಬಲವಂತದಿಂದ ಯಾರನ್ನೂ ಗೆದ್ದಿರಲಿಲ್ಲ. ಬದಲಾಗಿ ನಿಸ್ವಾರ್ಥ ಪ್ರೀತಿ, ಕರುಣೆ, ದಯೆಯ ಮೂಲಕ ಸಾಧಿಸಿ ತೋರಿಸಿದರು. ಅವರ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಮನ್ಸೂರ್ ಹಿಮಮಿ ಮೊಂಟೆಪದವು ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ದ.ಕ. ಜಿಲ್ಲೆ ವಕ್ಫ್ ಬೋರ್ಡ್ ಅಧ್ಯಕ್ಷ ಬಿ.ಎ. ನಾಸಿರ್ ಲಕ್ಕಿಸ್ಟಾರ್ ಜಾಥಾದ ನಾಯಕರಿಗೆ ಧ್ವಜ ಹಸ್ತಾಂತರಿಸುವ ಮೂಲಕ ರ‍್ಯಾಲಿಗೆ ಚಾಲನೆ ನೀಡಿದರು. ಸುನ್ನಿ ಸಂಘಟನೆಗಳ ನಾಯಕ ವಳವೂರು ಮುಹಮ್ಮದ್ ಸಅದಿ ದುಆಗೈದರು. ದ.ಕ.ಜಿಲ್ಲಾ ಮುಸ್ಲಿಂ ಜಮಾಅತ್ ಅಧ್ಯಕ್ಷ ಬಿ.ಎಂ. ಮುಮ್ತಾಝ ಅಲಿ ಅಧ್ಯಕ್ಷತೆ ವಹಿಸಿದ್ದರು.
ಇಲಲ್ ಹಬೀಬ್ ಮೀಲಾದ್ ಸಮಿತಿಯ ಅಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಎಸ್‌ವೈಎಸ್ ಜಿಲ್ಲಾಧ್ಯಕ್ಷ ವಿ.ಯು. ಝುಹ್ರಿ, ಎಸ್‌ಎಂಎ ಜಿಲ್ಲಾಧ್ಯಕ್ಷ ಎ.ಪಿ. ಇಸ್ಮಾಯೀಲ್ ಅಡ್ಯಾರ್, ಉಳ್ಳಾಲ ದರ್ಗಾ ಅಧ್ಯಕ್ಷ ಮುಹಮ್ಮದ್ ಹನೀಫ್ ಹಾಜಿ, ಕೆಎಂ ಅಬೂಬಕರ್ ಸಿದ್ದೀಕ್ ಮೋಂಟುಗೋಳಿ, ಅಶ್ರಫ್ ಸಅದಿ ಮಲ್ಲೂರು, ಕೆಕೆಎಂ ಕಾಮಿಲ್ ಸಖಾಫಿ, ಬಶೀರ್ ಮದನಿ ಕೂಳೂರು, ಇಸ್ಮಾಯೀಲ್ ಸಅದಿ ಕಿನ್ಯ, ಕೆಎಂ ಮುಸ್ತಫಾ ನಯೀಮಿ, ಎಸ್‌ಕೆ ಖಾದರ್ ಹಾಜಿ ಮುಡಿಪು, ಹಮೀದ್ ಬಜಪೆ, ಮುಹಮ್ಮದ್ ಸುಹೈಲ್ ಫರಂಗಿಪೇಟೆ, ಶಾಕಿರ್ ಎಂಎಸ್ಸಿ ಬಜಪೆ, ಮುತ್ತಲಿಬ್ ಮೂಡುಬಿದಿರೆ, ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಇಲಲ್ ಹಬೀಬ್ ಮೀಲಾದ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಶ್ರಫ್ ಕಿನಾರ, ಕರ್ನಾಟಕ ಮುಸ್ಲಿಮ್ ಜಮಾಅತ್‌ನ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹೀಂ ಸಅದಿ ಕತರ್, ಎಸ್‌ವೈಎಸ್ ದ.ಕ. ಜಿಲ್ಲಾ ವೆಸ್ಟ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಪ್ರಿಂಟೆಕ್, ಎಸ್ಸೆಸ್ಸೆಫ್ ಕೋಶಾಧಿಕಾರಿ ಇರ್ಷಾದ್ ಹಾಜಿ ಗೂಡಿನಬಳಿ, ಸಮಿತಿಯ ಕೋಶಾಧಿಕಾರಿ ಮುಹಮ್ಮದ್ ಕಾವೂರು ಪಾಲ್ಗೊಂಡಿದ್ದರು.
ಬೃಹತ್ ರ‍್ಯಾಲಿ
ಬಾವುಟಗುಡ್ಡೆ ಈದ್ಗಾ ಮಸ್ಜಿದ್ ಬಳಿಯಿಂದ ಆರಂಭಗೊಂಡ ಬೃಹತ್ ರ‍್ಯಾಲಿ ಹಂಪನಕಟ್ಟೆ ಮಾರ್ಗವಾಗಿ ಸಾಗಿಬಂದು ಮಂಗಳೂರು ಮಿನಿ ವಿಧಾನಸೌಧದ ಬಳಿ ಸಮಾಪನಗೊಂಡಿತು.