Advertisement
ರಾಷ್ಟ್ರ ವಿರೋಧಿ ಭಾವನೆ ಹೊಂದಿದ ವರು, ಭಯೋತ್ಪಾದಕರಿಗೆ ಇದುವರೆಗೆ ಹೆದರಿಕೆ ಇತ್ತು. ಈಗ ತಮ್ಮ ಬಗ್ಗೆ ಕಾಂಗ್ರೆಸ್ ಸರಕಾರ ಸಹಾನುಭೂತಿ ಹೊಂದಿದೆ. ಸರಕಾರ ನಮ್ಮನ್ನು ಮುಟ್ಟುವುದಿಲ್ಲ ಎಂಬ ವಿಶ್ವಾಸ ಅವರಲ್ಲಿ ಮೂಡಿದೆ. ವಿಧಾನಸೌಧದ ಒಳಗೆ ಪಾಕ್ ಪರ ಘೋಷಣೆ ಮಾಡಲಾಗಿದೆ. ರಾಜಾರೋಷವಾಗಿ ಹೊಟೇಲ್‌ನಲ್ಲಿ ಬಾಂಬ್ ಇಟ್ಟವರನ್ನು ಕೂಡ ಬಂಧಿಸಿಲ್ಲ. ರಾಜ್ಯದ ಜನರಲ್ಲಿ ಭಯ ಮೂಡಿದೆ. ಅಂಥವರ ಬಗ್ಗೆ ಸರಕಾರ ಮೃದು ಧೋರಣೆ ತಾಳಿದೆ ಎಂದು ಅವರು ಸೋಮವಾರ ದ.ಕ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
Related Articles
Advertisement
ಸರಕಾರ 10ರಿಂದ 20 ಕೋ. ರೂ. ಖರ್ಚು ಮಾಡಿ “ಸಂವಿಧಾನ ಉಳಿಸಿ’ ಕಾರ್ಯಕ್ರಮ ನಡೆಸಿತು. ಅದಕ್ಕೆ ರಾಷ್ಟ್ರವಿರೋಧಿ ಲೇಖಕಿಯನ್ನು ಕರೆಯಿಸಿ ಭಾಷಣ ಮಾಡಿಸಿದೆ. ಕಾಂಗ್ರೆಸ್ ಸರಕಾರದ ಯೋಚನೆ ಹೇಗಿರಬಹುದು ಎಂಬುದನ್ನು ಇದರ ಮೂಲಕ ಜನ ತಿಳಿದುಕೊಂಡಿದ್ದಾರೆ. ಸಂವಿಧಾನ, ಅಂಬೇಡ್ಕರ್ ಹೆಸರಿನಲ್ಲಿ ಪ್ರಚಾರ ಪಡೆಯಲು ಸರಕಾರ ಮುಂದಾಗಿದೆ. ಬಿಜೆಪಿ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದೆ. ಸಂವಿಧಾನಕ್ಕೆ ತೊಂದರೆಯಾದದ್ದು ತುರ್ತುಪರಿಸ್ಥಿತಿಯಿಂದ. ಆ ತುರ್ತು ಪರಿಸ್ಥಿತಿಗೆ ಕಾರಣ ಯಾರು ಎಂಬುದನ್ನು ಕಾಂಗ್ರೆಸ್‌ನವರು ಹೇಳಬೇಕು. ಹೊಸದಿಲ್ಲಿಯಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ನೆಹರೂ ಅವರ ಸ್ಮಾರಕಕ್ಕೆ 5 0ರಿಂದ 100 ಎಕರೆ ಜಾಗ ನೀಡಿದ್ದ ಕಾಂಗ್ರೆಸ್ ಸರಕಾರ ಅಂಬೇಡ್ಕರ್ ಸಂಸ್ಕಾರಕ್ಕೆ 10 ಅಡಿ ಜಾಗವನ್ನು ನೀಡದೆ ಅವರ ಪಾರ್ಥಿವ ಶರೀರವನ್ನು ಮುಂಬೈಗೆ ಕೊಂಡೊಯ್ಯುವಂತಾಗಿತ್ತು. ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿಯಿಂದ ಭಯೋತ್ಪಾದನೆ ನಿಂತಿರುವುದು ಮಾತ್ರವಲ್ಲದೆ ಅಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾತಿಯನ್ನು ಕೂಡ ನೀಡಿದೆ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.
ಪಕ್ಷದ ತೀರ್ಮಾನ ಅಂತಿಮ
ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಗೋ ಬ್ಯಾಕ್ ಚಳವಳಿ ನಡೆದ ಕುರಿತು ಪ್ರತಿಕ್ರಿಯಿಸಿದ ಅವರು, ಇದೆಲ್ಲ ಪಕ್ಷದಲ್ಲಿ ಸಹಜ. ಕಾರ್ಯಕರ್ತರು ಅವರ ಅಭಿಪ್ರಾಯ ಹೇಳುವುದರಲ್ಲಿ ತಪ್ಪಿಲ್ಲ. ಆದರೆ ಪಕ್ಷ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರು.
ಹೆಗ್ಡೆ ಬಿಜೆಪಿಯಲ್ಲಿದ್ದಾರೆ
ಜಯಪ್ರಕಾಶ್ ಹೆಗ್ಡೆ ನಮ್ಮ ಪಕ್ಷಕ್ಕೆ ಬಂದಿದ್ದರು. ಅವರನ್ನು ಸಿಎಂ ಮೂರು ವರ್ಷದವರೆಗೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ನೇಮಕ ಮಾಡಿದರು. ಅವರು ಸರಕಾರಕ್ಕೆ ವರದಿ ಸಲ್ಲಿಸಿದ್ದಾರೆ. ಅವರದ್ದು ಪಕ್ಷಾತೀತ ಹುದ್ದೆಯಾಗಿತ್ತು. ವರದಿ ನೀಡಿದ ಅನಂತರ ಅವರು ಆಯೋಗದಿಂದ ಮುಕ್ತರಾಗಿದ್ದಾರೆ. ಬಿಜೆಪಿಯಲ್ಲಿದ್ದಾರೆ. ಬೇರೆ ಪಕ್ಷಕ್ಕೆ ಹೋಗುವ ವಿಚಾರದ ಬಗ್ಗೆ ಏನೂ ಗೊತ್ತಿಲ್ಲ. ಅವರು ಬಿಜೆಪಿ ತೊರೆಯುವುದಿಲ್ಲ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.
ಪಕ್ಷದ ಮುಖಂಡರಾದ ಮಂಜುಳಾ ರಾವ್, ಮನೋಹರ್ ಕದ್ರಿ, ವಸಂತ್ ಜೆ. ಪೂಜಾರಿ ಉಪಸ್ಥಿತರಿದ್ದರು.