Advertisement

Mangaluru ಪಾರ್ಟ್‌ಟೈಂ ಉದ್ಯೋಗ: ವಂಚನೆ

11:51 PM Nov 01, 2023 | Team Udayavani |

ಮಂಗಳೂರು: ಪಾರ್ಟ್‌ ಟೈಂ ಉದ್ಯೋಗ ನೆಪದಲ್ಲಿ ವ್ಯಕ್ತಿಯೋರ್ವರಿಂದ 6.50 ಲ.ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವ ಬಗ್ಗೆ ಮಂಗಳೂರಿನ ಸೆನ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ದೂರುದಾರ ವ್ಯಕ್ತಿಗೆ ಅ. 16ರಂದು ವ್ಯಕ್ತಿಯೋರ್ವ ಟೆಲಿಗ್ರಾಂ ಖಾತೆಯ ಮೂಲಕ ಪಾರ್ಟ್‌ ಟೈಂ ಉದ್ಯೋಗಕ್ಕೆ ಸಂಬಂಧಿಸಿ ಸಂದೇಶ ಕಳುಹಿಸಿದ್ದ. ಟ್ಯೂನ್‌ ಕಂಪೆನಿಯ ಉತ್ಪನ್ನಗಳಿಗೆ ರೇಟಿಂಗ್ಸ್‌ ನೀಡುವ ಕೆಲಸವನ್ನು ಮಾಡಿದರೆ ಅದಕ್ಕೆ ಪ್ರತಿಯಾಗಿ ಕಮಿಷನ್‌ ಮತ್ತು ಬೋನ್‌ ನೀಡುವುದಾಗಿಯೂ ಕೆಲಸವನ್ನು ಆರಂಭಿಸಲು ಮೂಲದರವನ್ನು ನೀಡುವಂತೆಯೂ ತಿಳಿಸಿದ್ದ. ಇದನ್ನು ನಂಬಿದ ದೂರುದಾರರು ಆರಂಭದಲ್ಲಿ 10,077 ರೂ. ಪಾವತಿಸಿ ಕೆಲಸ ಆರಂಭಿಸಿದರು. ಅನಂತರ ಅವರಿಂದ ಲಕ್ಸುರಿ ಪ್ರಾಡಕ್ಟ್ ನೆಪದಲ್ಲಿ ಅ. 18ರಿಂದ 26ರ ವರೆಗೆ ಹಂತ ಹಂತವಾಗಿ 6.50 ಲ.ರೂ.ಗಳನ್ನು ವರ್ಗಾಯಿಸಿಕೊಂಡು ಯಾವುದೇ ಹಣ ಮರುಪಾವತಿ ಮಾಡದೆ ಮೋಸ ಮಾಡಿದ್ದಾಗಿ ದೂರಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next