Advertisement

Mangaluru: “ಮಚೋಯ್‌’ ಏರಿದ ಸುರತ್ಕಲ್‌ ಯುವಕ

12:47 AM Dec 05, 2024 | Team Udayavani |

ಮಂಗಳೂರು: ಹಿಮಾಲಯದ ಲಡಾಕ್‌ನ ದ್ರಾಸ್‌ ಪ್ರದೇಶದಲ್ಲಿರುವ “ಮಚೋಯ್‌’ ಪರ್ವತವನ್ನು ಸುರತ್ಕಲ್‌ನ ಸುಹಾನ್‌ ಸುಧಾಕರ್‌ ಏರುವ ಮೂಲಕ ಸಾಧನೆ ಮಾಡಿದ್ದಾರೆ. ಇವರು ಮೂಡಿಗೆರೆಯಲ್ಲಿರುವ ಬೌಲೈನ್‌ ಸ್ಫೋರ್ಟ್ಸ್ ಆ್ಯಂಡ್‌ ಅಡ್ವೆಂಚರ್‌ ಸಂಸ್ಥಾಪಕ.

Advertisement

16,863 ಅಡಿ ಎತ್ತರದ ಪರ್ವತವು ಅಮರನಾಥ ಗುಹೆ ಹಾಗೂ ಜೊಜಿಲಾ ನಡುವೆ ಇದೆ. ಇಲ್ಲಿ ಆಮ್ಲಜನಕ ಮಟ್ಟವು ಗಮನಾರ್ಹವಾಗಿ ಕಡಿಮೆ ಇದೆ. ಇದನ್ನು ಅಪಾಯಕಾರಿ ಹಾಗೂ ಬಹಳಷ್ಟು ಸವಾಲಿನ ಪರ್ವತಾರೋಹಣ ಎಂದೇ ಪರಿಗಣಿಸಲಾಗಿದೆ.

42 ಮಂದಿಯ ಪರ್ವತಾರೋಹಿ ಆಸಕ್ತಿಯ ಬಳಗ ಈ ಪ್ರಯತ್ನ ನಡೆಸಿದ್ದು, ಇದರಲ್ಲಿ ಕರ್ನಾಟಕದಿಂದ ಸುಹಾನ್‌ ಸುಧಾಕರ್‌ ಮಾತ್ರ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next