Advertisement

Mangaluru ಜಂಕ್ಷನ್‌ ರೈಲು ನಿಲ್ದಾಣ: ಸಂಪರ್ಕ ರಸ್ತೆ ಅಭಿವೃದ್ಧಿ

06:24 PM Oct 11, 2024 | Team Udayavani |

ಕಂಕನಾಡಿ: ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಈಗಾಗಲೇ ನಾಗುರಿ ಕಡೆಯಿಂದ ಇರುವ ರಸ್ತೆಯ ಅಂತ್ಯದ ಸುಮಾರು 100 ಮೀ. ರಸ್ತೆ ಇಕ್ಕಟ್ಟಾಗಿರುವ ಹಿನ್ನೆಲೆಯಲ್ಲಿ ಅಲ್ಲಿಯೇ ಇನ್ನೊಂದು ಕಡೆಯಿಂದ ರಸ್ತೆ ನಿರ್ಮಾಣ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

Advertisement

ಅಮೃತ್‌ ಭಾರತ್‌ ಸ್ಟೇಷನ್‌ ಯೋಜನೆಯಡಿ ಅಭಿವೃದ್ಧಿ ಹಂತದಲ್ಲಿ ರುವ ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಕ್ಕೆ ನಾಗುರಿಯಿಂದ ಕೆಲವು ವರ್ಷಗಳ ಹಿಂದೆಯೇ ರಸ್ತೆ ನಿರ್ಮಿ ಸಲಾಗಿದೆ. ನಾಗುರಿ ಭಾಗದಲ್ಲಿ ಅಗಲವಾ ಗಿರುವ ಈ ರಸ್ತೆಯು ನಿಲ್ದಾಣಕ್ಕೆ ಪ್ರವೇಶ ಪಡೆಯುವಲ್ಲಿ ತುಂಬಾ ಕಿರಿದಾಗಿದ್ದು, ಇದರಿಂದ ಘನ ವಾಹನಗಳಿಗೆ ಸಂಚರಿ ಸುವುದು ಕಷ್ಟವಾಗಿದೆ. ಕೇವಲ ದ್ವಿಚಕ್ರ ವಾಹನ, ಆಟೋಗಳು ಮತ್ತು ಕಾರು ಸಂಚರಿಸಬಹುದಾಗಿದೆ.

ರಸ್ತೆ ವಿಸ್ತರಣೆಗೆ ರೈಲ್ವೇ ಹೋರಾಟಗಾರ ರಿಂದ ಬೇಡಿಕೆ ಇತ್ತಾದರೂ ಸ್ಥಳಾವಕಾಶದ ಕೊರತೆಯ ಕಾರಣ ರಸ್ತೆ ವಿಸ್ತರಿಸಲು ಸಾಧ್ಯವಾಗಿರಲಿಲ್ಲ. ಇದೀಗ 100 ಮೀ. ಮೊದಲೇ ಎಡಕ್ಕೆ ಇನ್ನೊಂದು ರಸ್ತೆಯನ್ನು ನಿರ್ಮಾಣ ಮಾಡಲು ಯೋಜನೆ ರೂಪಿ ಸಲಾಗಿದೆ. ಸ್ಥಳೀಯರ ಮನವೊಲಿಸಿ ರಸ್ತೆ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ.

ಇದಕ್ಕಾಗಿ ಸುಮಾರು 30 ಸೆಂಟ್ಸ್‌ನಷ್ಟು ಜಾಗವನ್ನು ಟಿಡಿಆರ್‌ ಮೂಲಕ ಸ್ಥಳೀಯ ರಿಂದ ಪಡೆದು ಕೊಳ್ಳಲಾಗಿದ್ದು, ಈಗಾಗಲೇ ರಸ್ತೆ ಗಾಗಿ ನೆಲ ಸಮತಟ್ಟುಗೊಳಿಸುವ ಕೆಲಸ ಆಗಿದೆ. ಕಾಂಕ್ರೀಟ್‌ ಕಾಮಗಾರಿ ಬಾಕಿ ಇದೆ.

ಬಜಾಲ್‌ ಕಡೆಯಿಂದ ರಸ್ತೆ
ಪ್ರಸ್ತುತ ನಿಲ್ದಾಣಕ್ಕೆ ಬಜಾಲ್‌ ಕಡೆ ಯಿಂದ ಸುಸಜ್ಜಿತ ಕಾಂಕ್ರೀಟ್‌ ರಸ್ತೆ ನಿರ್ಮಾಣ ಮಾಡಲಾಗಿದ್ದು, ಬಹುತೇಕ ವಾಹನಗಳು ಇದೇ ರಸ್ತೆಯಾಗಿ ರೈಲು ನಿಲ್ದಾಣದ ಆವರಣಕ್ಕೆ ಪ್ರವೇಶಿಸುತ್ತವೆ. ಬಸ್‌ ಕೂಡ ಇದೇ ರಸ್ತೆಯಲ್ಲಿ ನಿಲ್ದಾಣದ ವರೆಗೆ ಬರುತ್ತದೆ. ನಾಗುರಿ ಕಡೆಯಿಂದಲೂ ನಿಲ್ದಾಣಕ್ಕೆ ಸಂಪರ್ಕ ಸಾಧ್ಯವಾದರೆ ನಿಲ್ದಾಣ ಪ್ರವೇಶ ಇನ್ನಷ್ಟು ಸುಲಭವಾಗಲಿದೆ.

Advertisement

ನಿಲ್ದಾಣ ಅಭಿವೃದ್ಧಿ
ನಿಲ್ದಾಣ ಅಭಿವೃದ್ಧಿ ಕಾರ್ಯಕವೂ ವೇಗವಾಗಿ ನಡೆಯುತ್ತಿದೆ. ಪಾರ್ಕಿಂಗ್‌ ಸ್ಥಳ, ಪ್ರವೇಶ ದ್ವಾರ, ಪ್ರಯಾಣಿಕರು ರೈಲಿ ಗಾಗಿ ಕಾಯುವ ಕೊಠಡಿ ಸಹಿತ ವಿವಿಧ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ವರ್ಷಾಂತ್ಯದೊಳಗೆ ಪೂರ್ಣಗೊಳ್ಳುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next