Advertisement

ರಾಜ್ಯದ ಅನುಮೋದನೆ ದೊರೆತ ಕೂಡಲೇ ಕಾರ್ಯಾರಂಭ: ರಾಧಾಕೃಷ್ಣ

12:35 PM Mar 17, 2017 | |

ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಸಂಬಂಧಿಸಿದ ಪ್ರಸ್ತಾವನೆಯನ್ನು ಜಿಲ್ಲಾಡಳಿತದ ಮೂಲಕ ಈಗಾಗಲೇ ಸರಕಾರಕ್ಕೆ ಕಳುಹಿಸಲಾಗಿದ್ದು, ರಾಜ್ಯ ಸರಕಾರದಿಂದ ಅನುಮೋದನೆ ದೊರೆತ ಕೂಡಲೇ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ. 

Advertisement

ವಿಮಾನ ನಿಲ್ದಾಣದಲ್ಲಿ ಪ್ರಥಮ ಹಂತ ಹಾಗೂ ದ್ವಿತೀಯ ಹಂತ ಸೇರಿ ಒಟ್ಟು 199 ಕೋ. ರೂ. ವೆಚ್ಚದಲ್ಲಿ 190 ಎಕರೆ ಜಾಗ ಅಗತ್ಯವಿರುವ ಕುರಿತ ಪ್ರಸ್ತಾವನೆಯನ್ನು ಜಿಲ್ಲಾಡಳಿತದ ಮೂಲಕ ಮಾ. 7ರಂದು ಸರಕಾರಕ್ಕೆ ಕಳುಹಿಸಲಾಗಿತ್ತು. ಇದಕ್ಕೆ ಸಂಬಂಧಿಸಿ ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‌ ಮಂಡನೆ ವೇಳೆ ತಿಳಿಸಿದ್ದರು. 

ವಿಮಾನ ನಿಲ್ದಾಣದ ರನ್‌ವೇ ವಿಸ್ತರಣೆಗೆ ಸಂಬಂಧ ಪಟ್ಟ ದಾಖಲೆಗಳನ್ನು ಕೂಡ ಸಲ್ಲಿಸಲಾಗಿದ್ದು, ವಿಮಾನ ನಿಲ್ದಾಣದ ಅಭಿವೃದ್ಧಿ ದೃಷ್ಟಿಯಿಂದ ರಾಜ್ಯ ಸರಕಾರ ಶೀಘ್ರದಲ್ಲಿ ಅನುಮೋದನೆ ನೀಡಬೇಕಿದೆ. ಭೂಸ್ವಾಧೀನ ಪ್ರಕ್ರಿಯೆ ನಡೆದ ಬಳಿಕ ರನ್‌ವೇ ವಿಸ್ತರಣೆಗೆ ಸಂಬಂಧಿಸಿ ಪೂರಕ ಪ್ರಕ್ರಿಯೆಗಳು ನಡೆಯಲಿವೆ.

ಬೃಹತ್‌ ವಿಮಾನಗಳ ಆಗಮನ ಸಾಧ್ಯ 
ಪ್ರಸ್ತುತ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 50 ವಿಮಾನಗಳ ಆಗಮನ- ನಿರ್ಗಮನ ನಡೆಯುತ್ತಿದೆ. ಇಲ್ಲಿನ ರನ್‌ವೇ ವಿಸ್ತರಣೆಗೊಂಡಲ್ಲಿ  ವಿದೇಶೀಯರು ಹೆಚ್ಚು   ಅವಲಂಬಿಧಿಸುವ ಬೃಹತ್‌ ವಿಮಾನಗಳಾದ ಬೋಯಿಂಗ್‌ 777, ಏರ್‌ಬಸ್‌ ಎ330 ಮುಂತಾದ ವಿಮಾನಗಳು ಕೂಡ ಇಲ್ಲಿ ಇಳಿಯಬಹುದು.

ಅಲ್ಲದೇ ನಿಲ್ದಾಣಕ್ಕೆ ಬರುವ ವಿಮಾನಗಳ ಸಂಖ್ಯೆಯೂ ಹೆಚ್ಚಾಗಲಿದೆ. ಕಾರ್ಗೋಗಳ ಆಮದು, ರಫ್ತು ಕೂಡ ಹೆಚ್ಚಾಗಧಿಲಿದೆ ಎಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ಅವರು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next