Advertisement
ಒಂದೊಂದು ಮಾರುಕಟ್ಟೆ ಒಂದೊಂದು ಸ್ವರೂಪದಲ್ಲಿ ಬಾಕಿಯಾಗಿದ್ದು, ಬಳಕೆಗೆ ಸಿಗಲು ಸಾಧ್ಯವಾಗಿಲ್ಲ. ಒಂದೊಂದು ಮಾರುಕಟ್ಟೆಯಲ್ಲಿ ತರಹೇವಾರಿ ದೂರುಗಳು ಇದ್ದು ಬಳಕೆಗೆ ಸಿಗಲು ಇನ್ನೆಷ್ಟು ಸಮಯ ಎಂಬುದು ತಿಳಿಯುತ್ತಿಲ್ಲ.
ಕದ್ರಿ ಮಾರುಕಟ್ಟೆ ಎರಡು ವರ್ಷ ಮೊದಲೇ ಸಿದ್ಧಗೊಂಡಿದೆ. ಹಿಂದಿನ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಉದ್ಘಾಟಿಸಲು ಒಮ್ಮೆ ಸಿದ್ಧತೆ ನಡೆದಿತ್ತು. ಅನಂತರ ಎರಡು ಬಾರಿ ಉದ್ಘಾಟನೆಗೆಂದು ನಿರ್ವಹಣೆ, ಪೈಂಟಿಂಗ್ ಮಾಡಿಸಲಾಗಿತ್ತು. 2023ರ ನ.24ರಂದು ಸಿಎಂ ಸಿದ್ದರಾಮಯ್ಯ ಉದ್ಘಾಟನೆ ಮಾಡಲು ನಿರ್ಧರಿಸಿದ್ದರೂ, ಕೊನೆಗೆ ಕಾರ್ಯಕ್ರಮ ರದ್ದಾಗಿತ್ತು. ಉದ್ಘಾಟನೆಗೆ ಕಾಲ ಕೂಡಿ ಬಾರದೆ, ಮಾರುಕಟ್ಟೆ ಖಾಲಿ ಬೀಳುವಂತಾಗಿದೆ.
Related Articles
ಉರ್ವ ಮಾರುಕಟ್ಟೆ ವಾಣಿಜ್ಯ ಸಂಕೀರ್ಣವನ್ನು ಮುಡಾದಿಂದ ಪಾಲಿಕೆಗೆ ಹಸ್ತಾಂತರ ಮಾಡಲಾಗಿದೆ. ಈ ಪ್ರಕ್ರಿಯೆ ನಡೆಸಲು ಕೆಲವು ವರ್ಷವೇ ಕಾಯ ಬೇಕಾಗಿತ್ತು. ಸದ್ಯ ಈ ಮಾರುಕಟ್ಟೆಯಲ್ಲಿ ಕೆಲವು ಸರಕಾರಿ ಇಲಾಖೆ, ಸೊಸೈಟಿಗಳಷ್ಟೇ ಇದೆ. ಆದರೆ ವರ್ತಕರು ಸ್ಥಳಾಂತರ ಆಗಿಲ್ಲ. ಗ್ರಾಹಕರು ಬರುವುದಿಲ್ಲ ಎಂಬ ಸಬೂಬು ನೀಡಿ ವರ್ತಕರು ಈ ಕಡೆ ಬರಲು ಮನಸ್ಸು ಮಾಡಿಲ್ಲ. ಜತೆಗೆ ಬೇಕಾದ ವ್ಯವಸ್ಥೆಗಳನ್ನು ಇಲ್ಲಿ ಮಾಡಿಕೊಟ್ಟಿಲ್ಲ ಎಂಬುದು ದೂರು. ಹೀಗಾಗಿ, ಕೋಟ್ಯಾಂತರ ರೂ. ವೆಚ್ಚ ಮಾಡಿ ನಿರ್ಮಿಸಿದ ಉರ್ವ ಮಾರುಕಟ್ಟೆ ಬೇಕಾದ ಉದ್ದೇಶಕ್ಕೆ ದೊರಕುತ್ತಿಲ್ಲ.
Advertisement
ಅಳಕೆ: ವಾಹನ ಪಾರ್ಕಿಂಗ್‌ಗೆ ಮೀಸಲು!ಅಳಕೆ ಮಾರುಕಟ್ಟೆ ತೆರೆದಿದೆಯಾದರೂ ಅದು ಪೂರ್ಣ ಮಟ್ಟದಲ್ಲಿ ಬಳಕೆಗೆ ದೊರಕಿಲ್ಲ. ಮಾರುಕಟ್ಟೆ ಮುಂಭಾಗ ಪೂರ್ಣ ವಾಹನ ಪಾರ್ಕಿಂಗ್ ಜಾಗ ವಾಗಿ ಬದಲಾಗಿದೆ. ಗ್ರಾಹಕರು ಇಲ್ಲಿಗೆ ಬರಲು ಹೆಚ್ಚು ಮನಸ್ಸು ಮಾಡುತ್ತಿಲ್ಲ. ಕೆಲವರು ಮಾರುಕಟ್ಟೆ ಹೊರಗಡೆಯೇ ವ್ಯಾಪಾರ ನಡೆಸುವ ಪ್ರಮೇಯ ಬಂದಿದೆ. ಕುಂಟುತ್ತಿದೆ ಕಂಕನಾಡಿ ಮಾರುಕಟ್ಟೆ
ಕಂಕನಾಡಿ ಮಾರುಕಟ್ಟೆ ನೆಲ ಮಹಡಿ ಹಾಗೂ ಮೊದಲ ಮಹಡಿಯ ಕಾಮಗಾರಿಯನ್ನು ಬೇಗನೆ ಮುಗಿಸಿ ಡಿಸೆಂಬರ್ ವೇಳೆಗೆ ಬಿಟ್ಟುಕೊಡುವ ಬಗ್ಗೆ ಮಾತುಕತೆ ನಡೆಯುತ್ತಿದೆ. ಉಳಿದಂತೆ ಕಂಕನಾಡಿ ಮಾರು ಕಟ್ಟೆ ಕಾಮಗಾರಿಯೂ ಕುಂಟುತ್ತಾ ಸಾಗು ತ್ತಿದೆ. ಕಂಕನಾಡಿ ಭಾಗದ ಬಹು ಮಹತ್ವದ ಮಾರುಕಟ್ಟೆಯನ್ನು ತುರ್ತಾಗಿ ಹಸ್ತಾಂತರ ಮಾಡುವ ಅಗತ್ಯತೆ ಇದೆ.
ತ್ವರಿತವಾಗಿದೆ ‘ಸೆಂಟ್ರಲ್’ ಮಾರುಕಟ್ಟೆ
ಸೆಂಟ್ರಲ್ ಮಾರುಕಟ್ಟೆ ಕಾಮಗಾರಿಗೆ ಸದ್ಯ ವೇಗ ದೊರಕಿದ್ದು 6 ತಿಂಗಳ ಒಳಗೆ ಕಾಮಗಾರಿ ಪೂರ್ಣ ವಾಗುವ ನಿರೀಕ್ಷೆಯಿದೆ. 3.61 ಎಕರೆ ಸ್ಥಳದಲ್ಲಿ ಸರಕಾರಿ ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಸ್ಮಾರ್ಟ್‌ಸಿಟಿಯು ಒಟ್ಟು 114 ಕೋ. ರೂ. ವೆಚ್ಚದಲ್ಲಿ ಸೆಂಟ್ರಲ್ ಮಾರುಕಟ್ಟೆಯನ್ನು ನಿರ್ಮಿಸಲಾಗುತ್ತಿದೆ. ಸುಮಾರು 5 ಲಕ್ಷ ಚ.ಅಡಿ ವಿಸ್ತೀರ್ಣ. ನೆಲ ಅಂತಸ್ತು ಹಾಗೂ 5 ಮಹಡಿಗಳಿರುತ್ತವೆ. ತಳ ಭಾಗದ ಎರಡು ಅಂತಸ್ತುಗಳು ವಾಹನ ಪಾರ್ಕಿಂಗ್‌ಗೆ ಮೀಸಲು. ಮಾರುಕಟ್ಟೆಯ 1.50 ಲಕ್ಷ ಚ.ಅಡಿ ಪಾಲಿಕೆಗೆ, ಉಳಿದ 3.50 ಲಕ್ಷ ಚ.ಅಡಿ ಜಾಗದಲ್ಲಿ ಇತರೇ ವಾಣಿಜ್ಯ ಚಟುವಟಿಕೆ ಇರಲಿದೆ. ಮೂಲಸೌಕರ್ಯಗಳ ಕೊರತೆ
ನಗರದ ಉಳಿದ ಕಡೆಯ ಮಾರುಕಟ್ಟೆಗಳಾದ ಜಪ್ಪು, ದೇರೆಬೈಲ್-ಉರ್ವಸ್ಟೋರ್, ಕಾರ್‌ಸ್ಟ್ರೀಟ್, ಬಿಜೈ, ಕರಂಗಲ್ಪಾಡಿ, ಕಾವೂರು ಸಹಿತ ಹಲವು ಮಾರುಕಟ್ಟೆಗಳು ಇತರ ಸಮಸ್ಯೆಗಳಿಂದ ನಲುಗುತ್ತಿದೆ. ಕೆಲವೆಡೆ ಮೂಲಸೌಕ ರ್ಯ ವಿಲ್ಲ, ಅಭಿವೃದ್ಧಿ ಭಾಗ್ಯವಿಲ್ಲ. ಕಾವೂರಿನಲ್ಲಿ ವರ್ತಕರೇ ಬರುತ್ತಿಲ್ಲ! ‘ಪರಿಶೀಲನೆ’
ಕಂಕನಾಡಿ ಸಹಿತ ನಗರದ ಕೆಲವು ಮಾರುಕಟ್ಟೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಜತೆಗೆ ಕೆಲವು ಮಾರುಕಟ್ಟೆಗಳ ನಿರ್ಮಾಣ ಪೂರ್ಣವಾಗಿದೆ. ಇದೆಲ್ಲದರ ಬಳಕೆ ಸಂಬಂಧಿಸಿ ಮುಂದಿನ ಹಂತದ ಬಗ್ಗೆ ಪರಿಶೀಲನೆ ನಡೆಸಲಾಗುವುದು.
– ಆನಂದ್ ಸಿ.ಎಲ್., ಆಯುಕ್ತರು, ಮಂಗಳೂರು ಪಾಲಿಕೆ -ದಿನೇಶ್ ಇರಾ