Advertisement
ಇದಕ್ಕೆ ಮುನ್ನ ಮಂಗಳಾದೇವಿ ಕ್ಷೇತ್ರ, ಕದ್ರಿ ಕ್ಷೇತ್ರ, ಬಿಕರ್ನಕಟ್ಟೆ ಇನ್‌ಫೆಂಟ್ ಜೀಸಸ್ ದೇಗುಲ, ಬಿಷಪ್ ಹೌಸ್, ರಥಬೀದಿ ವೆಂಕಟರಮಣ ದೇವಸ್ಥಾನ, ಬಂದರಿನ ಝೀನತ್ ಭಕ್Ò ಮಸೀದಿಯಲ್ಲಿ ಪ್ರಾರ್ಥಿಸಿದರು. ಕುದ್ರೋಳಿ ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿದರು.
Related Articles
Advertisement
ಸುಮಾರು 3 ಕಿ.ಮೀ. ಪಾದಯಾತ್ರೆ ನಡೆಸಿದ ಜೆ.ಆರ್. ಲೋಬೋ ಹಿರಿಯ ಮುಖಂಡ ಸುರೇಶ್ ಬಲ್ಲಾಳ್ ಮನೆಗೆ ತೆರಳಿ ಆಶೀರ್ವಾದ ಪಡೆದರು. ಅಲ್ಲಿಂದ ಮಂಗಳೂರು ದಕ್ಷಿಣ ಚುನಾವಣ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಮುಖಂಡರಾದ ಐವನ್ ಡಿ’ಸೋಜಾ, ನವೀನ್ ಡಿ’ಸೋಜಾ, ಶಶಿಧರ್ ಹೆಗ್ಡೆ, ವಿಶ್ವಾಸ್ ದಾಸ್, ಅಬ್ದುಲ್ ಸಲಿಂ, ಪ್ರಕಾಶ್ ಸಾಲ್ಯಾನ್, ಪ್ರವೀಣ್ ಆಳ್ವ, ಕೇಶವ ಮರೋಳಿ, ಶಾಲೆಟ್ ಪಿಂಟೋ, ಸುರೇಶ ಬಲ್ಲಾಳ್, ಶಂಸುದೀªನ್, ಅಬ್ದುಲ್ ರವೂಫ್, ಭಾಸ್ಕರ್ ಕೆ., ಜಾಸಿಂತ ಅಲ್ಫೆಡ್, ಬಾಲಕೃಷ್ಣ ಶೆಟ್ಟಿ, ನಾಗೇಂದ್ರ ಕುಮಾರ್, ದಿನೇಶ್ ಆಳ್ವ, ಟಿ.ಕೆ. ಸು ಧೀರ್, ಮನೋರಾಜ್ ರಾಜೀವ, ಶುಭೋದಯ ಆಳ್ವ, ನಮಿತಾ ರಾವ್, ಮೋಹನ್ ಶೆಟ್ಟಿ, ಕರುಣಾಕರ ಶೆಟ್ಟಿ, ಗಣೇಶ್ ಪೂಜಾರಿ, ಶಾಂತಲಾ ಗಟ್ಟಿ, ಚಂದ್ರಕಲಾ ಜೋಗಿ, ವಾಹಾಬ್ ಕುದ್ರೋಳಿ, ತೇಜಸ್ವಿ ರಾಜ್, ಗಿರೀಶ್ ಶೆಟ್ಟಿ, ಸುನಿಲ್ ಪೂಜಾರಿ, ರಾಕೇಶ್ ದೇವಾಡಿಗ, ರಮಾನಂದ ಪೂಜಾರಿ, ಪದ್ಮನಾಭ ಅಮೀನ್, ಪ್ರೇಮ್ ನಾಥ್, ಸಂತೋಷ ಶೆಟ್ಟಿ, ಸದಾಶಿವ ಅಮೀನ್, ಹೊನ್ನಯ್ಯ ಮೊದಲಾದವರು ಉಪಸ್ಥಿತರಿದ್ದರು.
“ಸಭ್ಯರ ಊರಿಗೆ ಸಜ್ಜನ ನಾಯಕ‘ ಘೋಷಣೆ
ಪಕ್ಷದ ಪತಾಕೆಗಳನ್ನು ಹಿಡಿದ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ ಬಲ್ಲಾಳ್‌ಬಾಗ್ ಎದುರು ಜಮಾಯಿಸಿದರು. “ಸಭ್ಯರ ಊರಿಗೆ ಸಜ್ಜನ ನಾಯಕ’ ಎಂದು ಜೆ.ಆರ್. ಲೋಬೊ ಪರ ಘೋಷಣೆ ಕೂಗುತ್ತಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ನಾಮಪತ್ರ ಸಲ್ಲಿಸಿದ ಅನಂತರ ಲೋಬೋ ಅವರು, ಚಿಲಿಂಬಿಯ ಶಿರಡಿ ಸಾಯಿಬಾಬಾ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.
ಕೀಲುಗೊಂಬೆ- ಪಿಲಿನಲಿಕೆ ಮೆರುಗು! ಕುದ್ರೋಳಿ ಕ್ಷೇತ್ರದ ಹೊರ ಆವರಣದಲ್ಲಿ ಸೇರಿದ್ದ ಜನಸ್ತೋಮದ ಎದುರಲ್ಲಿ ಹುಲಿ ವೇಷಧಾರಿಗಳು ಕಸರಸತ್ತು ಪ್ರದರ್ಶಿಸುವ ಮೂಲಕ ಮೆರವಣಿಗೆಗೆ ಮೆರುಗು ನೀಡಿದರು. ಕೀಲುಗೊಂಬೆ, ಚೆಂಡೆವಾದನ, ನಾಸಿಕ್ ಬ್ಯಾಂಡ್ ಸಾಥ್ ನೀಡಿದರು. ಧ್ವನಿವರ್ಧಕದ ಮೂಲಕ ಘೋಷಣೆಗಳು ಮೊಳಗಿದವು.