Advertisement

ಮನಪಾ ತ್ಯಾಜ್ಯ ನಿರ್ವಹಣೆ: ಡಿಪಿಆರ್‌ ತಯಾರಿ

08:33 PM Sep 27, 2021 | Team Udayavani |

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ತ್ಯಾಜ್ಯ ನಿರ್ವಹಣೆ ಕುರಿತಂತೆ ವಾರದೊಳಗೆ ವಿಸ್ತೃತ ಯೋಜನ ವರದಿ (ಡಿಪಿಆರ್‌) ತಯಾರಿಸಿ ಒದಗಿಸುವಂತೆ ನಗರದ ರಾಮಕೃಷ್ಣ ಮಠದ ಮಾರ್ಗದರ್ಶದಲ್ಲಿ ನಡೆಯುತ್ತಿರುವ ಮಂಗಳಾ ರಿಸೋರ್ಸ್‌ ಮ್ಯಾನೇಜ್‌ಮೆಂಟ್‌ ಸ್ಟಾರ್ಟ್‌ಅಪ್‌ಗೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸೂಚಿಸಿದ್ದಾರೆ.

Advertisement

ನಗರದ ಘನ ತ್ಯಾಜ್ಯ ನಿರ್ವಹಣೆ, ಸಂಗ್ರಹ ಮತ್ತು ಸಾಗಾಟ ಕುರಿತು ಆ್ಯಂಟಿ ಪೊಲ್ಯೂಶನ್‌ ಡ್ರೈವ್‌ ಸಂಸ್ಥೆ ಸಿದ್ಧ ಪಡಿಸಿದ ಡಿಪಿಆರ್‌ ಕುರಿತು ಸೋಮವಾರ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ನಡೆದ ಚರ್ಚೆಯಲ್ಲಿ ಅವರು ಮಾತನಾಡಿದರು.

ಮಂಗಳೂರು ರಾಮಕೃಷ್ಣ ಮಠದ ಶ್ರೀ ಏಕ ಗಮ್ಯಾನಂದ ಸ್ವಾಮೀಜಿ ಮತ್ತು ದಿಲ್‌ರಾಜ್‌ ಆಳ್ವ ಅವರು ಯೋಜನೆ ಕುರಿತು ವಿವರಿಸಿದರು. ಮೇಯರ್‌ ಪ್ರೇಮಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಶಾಸಕರಾದ ಡಿ. ವೇದವ್ಯಾಸ ಕಾಮತ್‌ ಮತ್ತು ಡಾ| ಭರತ್‌ ಶೆಟ್ಟಿ ವೈ., ಉಪ ಮೇಯರ್‌ ಸುಮಂಗಲಾ ರಾವ್‌, ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌ ಉಪಸ್ಥಿತರಿದ್ದರು.

ಸ್ವತ್ಛ ಭಾರತ್‌ ಮಿಷನ್‌ ಯೋಜನೆಯಡಿ ಮಂಗಳೂರು ಮಹಾನಗರ ಪಾಲಿಕೆಯ ಸಮಗ್ರ ಪೌರ ಘನ ತ್ಯಾಜ್ಯ ವಸ್ತುಗಳ ನಿರ್ವಹಣೆಗಾಗಿ ತ್ಯಾಜ್ಯ ಸಂಸ್ಕರಣೆ ಮತ್ತು ಸಾಗಾಟಕ್ಕೆ ಸಂಬಂಧ ಪಟ್ಟ ಯೋಜನ ವರದಿಯನ್ನು ಈಗಾಗಲೇ ತಯಾರಿಸಿದ್ದು, ಈ ವಿಸ್ತೃತ ಯೋಜನ ವರದಿಯ ಬಗ್ಗೆ ಚರ್ಚಿಸಲು ಈ ಸಭೆಯನ್ನು ಏರ್ಪಡಿಸಲಾಗಿತ್ತು.

ಇದನ್ನೂ ಓದಿ:ತಾಳಿಕೋಟೆ ಬಳಿ ಡೋಣಿ ಸೇತುವೆ ಕುಸಿತ : ಸಂಚಾರ ಬಂದ್, ಪ್ರಯಾಣಿಕರ ಪರದಾಟ

Advertisement

ಈಗ ತಯಾರಿಸಲಾಗಿರುವ ಡಿಪಿಆರ್‌ ಅಂತಿಮವಲ್ಲ; ಇನ್ನೂ ಚರ್ಚೆಗೆ ಅವಕಾಶವಿದೆ. ಚರ್ಚೆ ನಡೆಸಿದ ಬಳಿಕ ಅಂತಿಮ ನಿರ್ಧಾರಕ್ಕೆ ಬಂದು ದೃಢೀಕರಣ ಮಾಡಲಾಗುವುದು ಎಂದು ಮೇಯರ್‌ ಪ್ರೇಮಾನಂದ ಶೆಟ್ಟಿ ತಿಳಿಸಿದರು.ವಿಪಕ್ಷದ ಸದಸ್ಯ ಎ.ಸಿ. ವಿನಯರಾಜ್‌ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.

10 ದಿನಗಳ ಕಾಲಾವಕಾಶ
ರಾಮಕೃಷ್ಣ ಮಠದವರು ತಾವೂ ಡಿಪಿಆರ್‌ ತಯಾರಿಸುವುದಾಗಿ ತಿಳಿಸಿದ್ದರಿಂದ ಅವರಿಗೆ ಡಿಪಿಆರ್‌ ತಯಾರಿಸಿ ಪ್ರಸ್ತುತ ಪಡಿಸಲು 10 ದಿನಗಳ ಕಾಲಾವಕಾಶ ನೀಡಲಾಯಿತು. ಅವರ ಡಿಪಿಆರ್‌ ಬರುವ ತನಕ ಈಗಾಗಲೇ ಆ್ಯಂಟಿ ಪೊಲ್ಯೂಶನ್‌ ಡ್ರೈವ್‌ ತಯಾರಿಸಿದ ಡಿಪಿಆರ್‌ ಅನ್ನು ತಡೆ ಹಿಡಿಯಲು ಹಾಗೂ ಹೊಸ ವ್ಯವಸ್ಥೆ ಆಗುವ ತನಕ ಈಗಿರುವ ಆ್ಯಂಟನಿ ವೇಸ್ಟ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಗುತ್ತಿಗೆಯನ್ನು ಮುಂದುವರಿಸಲು ಸರಕಾರದ ಅನುಮತಿ ಕೋರಲು ಸಭೆ ನಿರ್ಧರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next