Advertisement
ಏರುಜಾಗದಲ್ಲಿ ಕಾಂಕ್ರೀಟ್ ನಡುವೆ ಇರುವ ಅಂತರದಿಂದಾಗಿ ಏರುತಗ್ಗು ಉಂಟಾಗಿದೆ. ಇದರಿಂದಾಗಿ ಇಲ್ಲಿ ಬಸ್‌ಗಳು ಸರಾಗವಾಗಿ ಮೇಲೇರಲು ಸಾಧ್ಯವಾಗುತ್ತಿಲ್ಲ. ರಸ್ತೆಯಲ್ಲಿ ಮೇಲೇರಲು ಬಸ್‌ನ ವೇಗ ಹೆಚ್ಚಿಸಬೇಕಾದ ಅನಿವಾರ್ಯತೆ ಚಾಲಕರದ್ದು. ಆದರೆ ಧುತ್ತನೆ ಎದುರಾಗುವ ಉಬ್ಬು ತಡೆಯೊಡ್ಡುತ್ತದೆ. ಮಾತ್ರವಲ್ಲದೆ ಬಸ್‌ನಲ್ಲಿರುವ ಪ್ರಯಾಣಿಕರು ಮೇಲಕ್ಕೆ ಹಾರಿ ಬೀಳುವಂತೆ ಮಾಡುತ್ತದೆ. ಕೆಲವೊಮ್ಮೆ ಚಾಲಕರು ಕೂಡ ನಿಯಂತ್ರಣ ಕಳೆದು ಕೊಳ್ಳುವಂತಹ ಸ್ಥಿತಿ ಉಂಟಾಗುತ್ತದೆ.
ಕೆಎಸ್‌ಆರ್‌ಟಿಸಿ ಜಂಕ್ಷನ್‌ನಲ್ಲಿ ವಾಹನ ದಟ್ಟಣೆ, ರಸ್ತೆ ಬದಿ ವಾಹನ ಪಾರ್ಕಿಂಗ್‌ನಿಂದಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳು ನಿಲ್ದಾಣದಿಂದ ಮುಖ್ಯ ರಸ್ತೆ ಪ್ರವೇಶಿಸುವುದೇ ದೊಡ್ಡ ಸವಾಲು. ಮುಖ್ಯರಸ್ತೆ ಪ್ರವೇಶಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳು ಸುಗಮವಾಗಿ ಸಂಚರಿಸದಿರುವುದು ಕೂಡ ಇಲ್ಲಿನ ಟ್ರಾಫಿಕ್ ಸಮಸ್ಯೆಗೆ ಒಂದು ಕಾರಣ. ಹಲವು ವರ್ಷಗಳಿಂದ ಚಾಲಕರು ಇದರಿಂದ ತೊಂದರೆ ಅನುಭವಿಸುತ್ತಿದ್ದರೂ ರಸ್ತೆ ಉಬ್ಬನ್ನು ಸರಿಪಡಿಸಿಲ್ಲ.