Advertisement

ಬಾರ್ಜ್‌ನಲ್ಲಿ ಅಪಾಯಕ್ಕೆ ಸಿಲುಕಿದ್ದ 27 ಕಾರ್ಮಿಕರ ರಕ್ಷಣೆ

10:01 AM Jun 05, 2017 | Team Udayavani |

ಉಳ್ಳಾಲ/ ಮಂಗಳೂರು: ಉಳ್ಳಾಲದ ಮೊಗವೀರಪಟ್ಣ ಬಳಿ ಅಪಾಯಕ್ಕೆ ಸಿಲುಕಿದ್ದ ಬಾರ್ಜ್‌ನಲ್ಲಿದ್ದ ಎಲ್ಲ 27 ಮಂದಿ ಯನ್ನು ಕರಾವಳಿ ತಟ ರಕ್ಷಣಾ ಪಡೆ (ಕೋಸ್ಟ್‌ ಗಾರ್ಡ್‌) ಮತ್ತು ಕರಾವಳಿ ಕಾವಲು ಪೊಲೀಸ್‌ ಪಡೆ ಜಂಟಿ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಯಶಸ್ವಿಯಾಗಿವೆ. ಮುಳುಗು ತಜ್ಞರಾದ ತಣ್ಣೀರುಬಾವಿಯ ಜಾವೇದ್‌ ತಂಡ ನೆರವು ನೀಡಿದೆ.

Advertisement

ಆದರೆ ಬಾರ್ಜ್‌ ಇನ್ನೂ ಕೂಡ ಸಮುದ್ರದ ಮಧ್ಯೆ ಸಿಲುಕಿಕೊಂಡಿದ್ದು, ಅದನ್ನು ತೆರವು ಗೊಳಿಸುವ ಬಗ್ಗೆ ತೀರ್ಮಾನವಾಗಿಲ್ಲ. ಈ ನಡುವೆ ಜಿಲ್ಲಾಡಳಿತವು ಘಟನೆಗೆ ಸಂಬಂಧಿಸಿ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ಒಂದು ವೇಳೆ ಬಾರ್ಜ್‌ ಕಂಪೆನಿಯ ನಿರ್ಲಕ್ಷ é ಕಂಡು ಬಂದಲ್ಲಿ ಕಾನೂನು ಕ್ರಮ ಜರಗಿಸುವುದಾಗಿ ಜಿಲ್ಲಾಧಿಕಾರಿ ಕೆ.ಜಿ. ಜಗದೀಶ್‌ ತಿಳಿಸಿದ್ದಾರೆ.

ಕಡಲ್ಕೊರೆತ ತಡೆಗೋಡೆ ಕಾಮಗಾರಿಗಾಗಿ ಬಂದಿದ್ದ ಬಾರ್ಜ್‌ ಶನಿವಾರ ಮಧ್ಯಾಹ್ನ ಅಪಾಯಕ್ಕೆ ಸಿಲುಕಿ ಮುಳುಗಡೆಯಾಗುವ ಭೀತಿ ಯಲ್ಲಿತ್ತು. ಈ ಬಾರ್ಜ್‌ನಲ್ಲಿದ್ದ ಒಟ್ಟು 27 ಮಂದಿಯ ಪೈಕಿ ನಾಲ್ವರನ್ನು ಶನಿವಾರ ರಾತ್ರಿಯೇ ರಕ್ಷಿಸಲಾಗಿತ್ತು. ಸಮುದ್ರದಲ್ಲಿನ ಪ್ರತಿಕೂಲ ಹವಾಮಾನದಿಂದಾಗಿ ಬಾಕಿ ಉಳಿ ದವರನ್ನು ರಕ್ಷಿಸಲು ಸಾಧ್ಯವಾಗಿರಲಿಲ್ಲ. ಅವರೆಲ್ಲ ರಾತ್ರಿಯಿಡೀ ತಮ್ಮ ಜೀವ ಕೈಯಲ್ಲಿ ಹಿಡಿದುಕೊಂಡು ಭಯಭೀತರಾಗಿ ಬಾರ್ಜ್‌ ನಲ್ಲಿಯೇ ಕಳೆದಿದ್ದರು. ಬಾರ್ಜ್‌ ಮುಳುಗಡೆ ಯಾದರೆ ತುರ್ತು ಕಾರ್ಯಾಚರಣೆಗಿಳಿ ಯುವ ನಿಟ್ಟಿನಲ್ಲಿ ಸ್ಥಳೀಯ ಪೊಲೀಸರು ಮತ್ತು ಕೋಸ್ಟ್‌ಗಾರ್ಡ್‌ ತಂಡದವರು ಈ ಕಾರಣಕ್ಕೆ ಶನಿವಾರ ರಾತ್ರಿಯಿಡೀ ಉಳ್ಳಾಲದ ಕೋಟೆಪುರದಲ್ಲಿ ಮೊಕ್ಕಾಂ ಹೂಡಿದ್ದರು.

ಯಶಸ್ವೀ ಕಾರ್ಯಾಚರಣೆ
ಸಮುದ್ರ ದಡದಿಂದ 700 ಮೀ. ದೂರ ದಲ್ಲಿ ತಡೆಗೋಡೆ ಕಾಮಗಾರಿ ನಿರತ ಬಾರ್ಜ್‌  ಶನಿವಾರ ಮಧ್ಯಾಹ್ನ ನಿಯಂತ್ರಣ ಕಳೆದು ಕೊಂಡು ಅಪಾಯಕ್ಕೆ ಸಿಲುಕಿತ್ತು. ಬಾರ್ಜ್‌ ನಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರು ಹಾಗೂ ತಾಂತ್ರಿಕ ಸಿಬಂದಿಯನ್ನು ರವಿ ವಾರ ಬೆಳಗ್ಗೆ ಹೆಲಿಕಾಪ್ಟರ್‌ ಮೂಲಕ ರಕ್ಷಿಸಲು ಯೋಚಿಸ ಲಾಗಿತ್ತು. ಅದರಂತೆ ಕಾರ್ಯಾಚರಣೆಗೆ ಬೇಕಾಗಿ ಹೆಲಿಕಾಪ್ಟರನ್ನು ಕೂಡ ಸನ್ನದ್ಧ ಇಡ ಲಾಗಿತ್ತು. ಆದರೆ ರವಿವಾರ ಬೆಳಗ್ಗೆ ಕಡಲು ಶಾಂತವಾಗಿದ್ದು, ಅಪಾಯಕಾರಿ ಅಲೆ ಗಳ ಅಬ್ಬರ ಇರಲಿಲ್ಲ. ಈ ಹಿನ್ನೆಲೆಯಲ್ಲಿ ಹೆಲಿ ಕಾಪ್ಟರ್‌ ಬದಲು ಕೋಸ್ಟ್‌ಗಾರ್ಡ್‌ನ ಡಿಂಗಿ (ರಬ್ಬರ್‌ ಬೋಟ್‌) ಹಾಗೂ ಕರಾ ವಳಿ ಕಾವಲು ಪೊಲೀಸ್‌ ಪಡೆಯ ಸಣ್ಣ ಬೋಟ್‌ ಬಳಸಿ ಕೊಂಡು ಬಾರ್ಜ್‌ನಲ್ಲಿದ್ದ ಎಲ್ಲ ರನ್ನೂ ರಕ್ಷಿಸಿ ಘಟನಾ ಸ್ಥಳದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಪಣಂಬೂರು ನವಮಂಗಳೂರು ಬಂದರಿಗೆ ಕರೆತರಲಾಯಿತು.

ಬಾರ್ಜ್‌ನಲ್ಲಿ ಸಿಲುಕಿದ್ದವರನ್ನು ಪ್ರಥಮ ಹಂತದಲ್ಲಿ ಬೋಟ್‌ಗಳಲ್ಲಿ ರಕ್ಷಿಸುವ ಕಾರ್ಯಾ ಚರಣೆಗೆ ಕರಾವಳಿ ತಟರಕ್ಷಣಾ ಪಡೆ ಮತ್ತು ಕರಾವಳಿ ಕಾವಲು ಪೊಲೀಸ್‌ ಪಡೆ ಸಿದ್ಧಗೊಂಡು ರವಿವಾರ ಬೆಳಗ್ಗೆ 6.30ಕ್ಕೆ ಕಾರ್ಯಾಚರಣೆ ಆರಂಭಿಸಿತು.

Advertisement

ಕಾರ್ಯಾಚರಣೆ ಹೀಗೆ ನಡೆಯಿತು…
ಕರಾವಳಿ ತಟ ರಕ್ಷಣಾ ಪಡೆಯ “ಅಮರ್ತ್ಯ’ ಹಡಗು ಅಪಘಾತ ಸಂಭವಿಸಿದ ಬಾರ್ಜ್‌ನಿಂದ ಸುಮಾರು 1,000 ಮೀಟರ್‌ ದೂರದ ಆಳ ಸಮುದ್ರದಲ್ಲಿ ನಿಂತಿದ್ದು, ಡಿಂಗಿ (ರಬ್ಬರ್‌ ಬೋಟ್‌) ಮೂಲಕ ಬಾರ್ಜ್‌ ಬಳಿ ತೆರಳಿದ ಕೋಸ್ಟ್‌ ಗಾರ್ಡ್‌ ಸಿಬಂದಿ ಮೊದಲಿಗೆ ಬಾರ್ಜ್‌ನಲ್ಲಿದ್ದ 15 ಜನರನ್ನು ರಕ್ಷಿಸಿತು. ಇದೇ ವೇಳೆ ಕರವಾಳಿ ಕಾವಲು ಪೊಲೀಸ್‌ ಪಡೆಯ ಸಿಬಂದಿ ತಮ್ಮ ಬೋಟ್‌ನಲ್ಲಿ ಬಾರ್ಜ್‌ನಲ್ಲಿ ಉಳಿದಿದ್ದ 8 ಮಂದಿಯನ್ನು ರಕ್ಷಿಸಿದರು. ಈ ರೀತಿ ಏಕಕಾಲಕ್ಕೆ ಅಪಾಯದಲ್ಲಿದ್ದ ಎಲ್ಲ 23 ಮಂದಿಯನ್ನು ರಕ್ಷಿಸಿ ಕೋಸ್ಟ್‌ ಗಾರ್ಡ್‌ನ “ಅಮರ್ತ್ಯ’ ಹಡಗಿಗೆ ಸ್ಥಳಾಂತರಿಸಲಾಯಿತು. ಬಳಿಕ “ಅಮರ್ತ್ಯ’ ಹಡಗು ಎಲ್ಲ 23 ಮಂದಿಯನ್ನು ನವಮಂಗಳೂರು ಬಂದರಿಗೆ ಕರೆ ತಂದು ಬಿಡುವಲ್ಲಿ ಯಶಸ್ವಿಯಾಯಿತು. ಅಲ್ಲಿಂದ ಅವರನ್ನು ಕೋಸ್ಟ್‌ಗಾರ್ಡ್‌ ಕಚೇರಿಗೆ ಕರೆತಂದು ಅಗತ್ಯವಿದ್ದವರಿಗೆ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಯಿತು. ಯಾರಾ ದರೂ ಅಸ್ವಸ್ಥರಾಗಿದ್ದರೆ ಅಂಥವರನ್ನ ತತ್‌ಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಎರಡು ಆ್ಯಂಬುಲೆನ್ಸ್‌ ಗಳನ್ನು ಕೂಡ ಎನ್‌ಎಂಪಿಟಿ ಯಲ್ಲಿ ಸಿದ್ಧಗೊಳಿಸಲಾಗಿತ್ತು. ಒಟ್ಟಾರೆ ಐದು ಗಂಟೆಗಳ ಕಾಲ ಈ ರಕ್ಷಣಾ ಕಾರ್ಯಾಚರಣೆ ನಡೆಯಿತು.

ಸಂಸ್ಥೆಯ ನಿರ್ಲಕ್ಷ  é ಕಾರಣವಾಯಿತೇ?
ಉಳ್ಳಾಲ ಕೋಟೆಪುರದಲ್ಲಿ ಕಡಲಕೊರೆತ ಹಿನ್ನೆಲೆಯಲ್ಲಿ ಬಾರ್ಜ್‌ ಸಹಾಯದಿಂದ ಸಮುದ್ರದಲ್ಲಿ ರೀಫ್‌ (ಸಮುದ್ರದ ಆಳದಲ್ಲಿ ತಡೆಗೋಡೆ) ನಿರ್ಮಾಣ ಕಾರ್ಯ ಸುಮಾರು 2 ವರ್ಷಗಳಿಂದ ನಡೆಯುತ್ತಿತ್ತು. ಅದರಂತೆ ಮೇ 26ರಂದು ತಡೆಗೋಡೆ ನಿರ್ಮಾಣ ಕಾರ್ಯ ಪೂರ್ಣಗೊಂಡಿತ್ತು. ಆದರೆ ಕಾಮಗಾರಿಯ ಗುತ್ತಿಗೆ ಪಡೆದು ಕೊಂಡಿದ್ದ ಖಾಸಗಿ ಕಂಪೆನಿಯು ಬಾರ್ಜನ್ನು ಕಾಮಗಾರಿ ಸ್ಥಳದಲ್ಲೇ ನಿಲ್ಲಿಸಿ ನಿರ್ಲಕ್ಷ  ತೋರಿತ್ತು. ಜೂನ್‌ ತಿಂಗಳಲ್ಲಿ ಸಮುದ್ರದ ಅಲೆಗಳ ಅಬ್ಬರದಿಂದ ಬಾರ್ಜ್‌ ಸ್ಥಳಾಂತರವಾಗಬೇಕಿತ್ತು. ಜೂ. 4ರಂದು ಮುಂಬಯಿಯಿಂದ ಟಗ್‌ ಬಂದು ಬಾರ್ಜನ್ನು ಮುಂಬಯಿಗೆ ಸಾಗಿಸುವ ನಿಟ್ಟಿ ನಲ್ಲಿ ಏಳು ದಿನಗಳ ಕಾಲ ಬಾರ್ಜ್‌ನ ಸಿಬಂದಿ ಯನ್ನು ಸಮುದ್ರದಲ್ಲಿಯೇ ಉಳಿಸಿ ಕೊಂಡಿದ್ದರು. ಆದರೆ ಕಳೆದ ಎರಡು ದಿನಗಳಿಂದ ಕರಾ ವಳಿ ಯಲ್ಲಿ ಉತ್ತಮ ಮಳೆಯಾಗುತ್ತಿದ್ದ ಕಾರಣ ಸಮುದ್ರದಲ್ಲಿ ಅಲೆಗಳ ಅಬ್ಬರ ಏಕಾಏಕಿ ಜಾಸ್ತಿಯಾಗಿತ್ತು. ಜತೆಗೆ ತಾಂತ್ರಿಕ ತೊಂದರೆಯೂ ತಲೆದೋರಿತು. ಸಿಬಂದಿ ಕೂಡಲೇ ಕಂಪೆನಿಯ ಪ್ರಮುಖರಿಗೆ ಮಾಹಿತಿ ನೀಡಿದ್ದರು. ಆದರೆ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಹೊಸ ತಾಗಿ ನಿರ್ಮಾಣ  ಗೊಂಡಿದ್ದ ರೀಫ್‌ನ ಮೇಲೆ ಬಾರ್ಜ್‌ನ ಹಿಂಬದಿಯ ಸಿಲುಕಿ ಕೊಂಡಿ ದ್ದರಿಂದ ಹಿಂಬದಿಯಲ್ಲಿದ್ದ ಮೋಟಾರ್‌ಗೆ ಹಾನಿ ಯಾಗಿ ಬೋಟ್‌ನ ಒಂದು ಪಾರ್ಶ್ವ ತೂತಾಗಿ ಬಾರ್ಜ್‌ನೊಳಗೆ ನೀರು ಕೂಡ ಒಳನುಗ್ಗಲು ಪ್ರಾರಂಭವಾಯಿತು. ಇಷ್ಟಾ ದರೂ  ಕಂಪೆನಿಯಿಂದ ಬಾರ್ಜ್‌ ಸಹಜ ಸ್ಥಿತಿಗೆ ತರುವಂತೆ ಸೂಚನೆ ನೀಡಲಾಯಿತೇ ಹೊರತು ಶನಿವಾರ ಸಂಜೆವರೆಗೆ ರಕ್ಷಣೆ ಬಗ್ಗೆ ಕಂಪೆನಿ ಚಿಂತಿಸಲಿಲ್ಲ. ಸಂಜೆಯಾಗುತ್ತಿದ್ದಂತೆ ಅಪಾಯದ ಭೀತಿ ಹೆಚ್ಚತೊಡಗಿದಾಗ ಸಂಸ್ಥೆಯು ಕರಾವಳಿ ರಕ್ಷಣಾ ಪಡೆಗೆ, ಪೊಲೀಸರಿಗೆ ರಕ್ಷಣೆಗಾಗಿ ಮೊರೆಯಿಟ್ಟಿತು.

ಅಪಾಯದಲ್ಲಿ  ಶಾಶ್ವತ ರೀಫ್‌
ಕಡಲ್ಕೊರೆತದ ಶಾಶ್ವತ ಕಾಮಗಾರಿಯ ಮೂರು ಹಂತದ ಕಾಮಗಾರಿಯಲ್ಲಿ ಕೊನೆಯ ಕಾಮಗಾರಿ ಸಮುದ್ರ ತಟದಿಂದ 700 ಮೀ. ದೂರದ ಸಮುದ್ರದ ನಡುವೆ 110 ಕೋಟಿ ರೂ. ವೆಚ್ಚದಲ್ಲಿ ಎರಡು ರೀಫ್‌ ನಿರ್ಮಾಣ ಕಾಮಗಾರಿ ನಡೆದಿದ್ದು ಇದರಲ್ಲಿ ಬಾರ್ಜ್‌ ಒಂದು ರೀಫ್‌ ಮೇಲೆ ಸಿಲುಕಿದ್ದರಿಂದ ರೀಫ್‌ ಅಪಾಯದ ಸ್ಥಿತಿಯಲ್ಲಿದೆ. ಸಮುದ್ರದ ಅಲೆಗಳಿಂದ ಬಾರ್ಜ್‌ ನೂತನವಾಗಿ ನಿರ್ಮಾಣ ಗೊಂಡಿರುವ ರೀಫ್‌ಗೆ ಬಡಿಯುತ್ತಿದ್ದು, ಬಾರ್ಜ್‌ ಸ್ಥಳಾಂತರಿಸ ದಿದ್ದರೆ ರೀಫ್‌ಗೆ ಹಾನಿಯಾಗಿ ಶಾಶ್ವತ ತಡೆ ಗೋಡೆ ಕುಸಿಯುವ ಸಾಧ್ಯತೆ ಇದೆ.

ಏನಿದು ರೀಫ್‌?
ಸಮುದ್ರದ ಮಧ್ಯದಿಂದ ಬರುವ ದೊಡ್ಡ ಅಲೆಗಳು ದಡವನ್ನು ಅಪ್ಪಳಿಸುವ ಮೊದಲು ಅಲೆಗಳ ವೇಗವನ್ನು ತಡೆಯುವ ನಿಟ್ಟಿನಲ್ಲಿ ಸಮುದ್ರದ ಆಳದಲ್ಲಿ ಎರಡು ತಡೆಗೋಡೆಗಳನ್ನು ರಚಿಸಲಾಗಿದೆ. ಇದು ರೀಫ್‌ ಮಾದರಿಯಲ್ಲಿ ನಿರ್ಮಿಸಿದ್ದು, ಕಲ್ಲುಗಳನ್ನು ಗೋಡೆಯ ಹಾಗೆ ಸಮುದ್ರದ ಆಳದಲ್ಲಿ ಕಟ್ಟುವ ಕಾರ್ಯ ಕಳೆದ ಒಂದು ವರ್ಷದಿಂದ ನಡೆಯುತ್ತಿತ್ತು. ಕಡಲ್ಕೊರೆತ ಕಾಮಗಾರಿಯಲ್ಲಿ ಅತ್ಯಂತ ಮಹತ್ವದ ಮತ್ತು ದೊಡ್ಡ ಮೊತ್ತದ ಕಾಮಗಾರಿ ಇದಾಗಿದ್ದು, ಸಮುದ್ರದಲ್ಲಿ ಅಡ್ಡಲಾಗಿ 310 ಮೀಟರ್‌ ಮತ್ತು 360 ಮೀಟರ್‌ನ ಎರಡು ತಡೆಗೋಡೆ ನಿರ್ಮಾಣಗೊಂಡಿದ್ದು ಇದಕ್ಕೆ 110 ಕೋಟಿ ರೂ. ವೆಚ್ಚವಾಗಿದೆ.

ಬದುಕಿನ ಕೊನೆಯ ಕ್ಷಣಗಳೆಂದುಕೊಂಡಿದ್ದೆವು …
ಮಂಗಳೂರು:
 “ನಾವು ಇದ್ದ  ಬಾರ್ಜ್‌ನ ಆ್ಯಂಕರ್‌ ತುಂಡಾಗಿ ಕಲ್ಲುಗಳೆಡೆ ಸಿಲುಕಿ ಗಾಳಿ ಮತ್ತು ಅಲೆಗಳ ಅಬ್ಬರಕ್ಕೆ ಜೋರಾಗಿ ಅಲುಗಾಡುತ್ತಿತ್ತು. ಮತ್ತೂಂದೆಡೆ ಬಾರ್ಜ್‌  ನಲ್ಲಿ  ರಂಧ್ರವುಂಟಾಗಿ ನೀರು ಒಳಬರುತ್ತಿತ್ತು. 

ಇದು ನಮ್ಮ ಪಾಲಿಗೆ ಬದುಕಿನ ಕೊನೆಯ ಕ್ಷಣಗಳೆಂದು ಕೊಂಡಿದ್ದೆವು. ಬಹುಶಃ ನಿನ್ನೆಯ ಆ ರಾತ್ರಿಯನ್ನು ಜೀವಮಾನ ದಲ್ಲಿ  ಎಂದೆಂದಿಗೂ ಮರೆಯಲು ಸಾಧ್ಯವಿಲ್ಲ’.ಉಳ್ಳಾಲದ ಮೊಗವೀರಪಟ್ಣ ಸಮೀಪ ಸಮುದ್ರ ತೀರಕ್ಕಿಂತ ಸುಮಾರು 700 ಮೀಟರ್‌ ದೂರದಲ್ಲಿ ಶನಿವಾರ ಮಧ್ಯಾಹ್ನ ಅಪಾಯಕ್ಕೆ ಸಿಲುಕಿದ್ದ ಬಾರ್ಜ್‌ನಿಂದ ರಕ್ಷಿಸಲ್ಪಟ್ಟ ಸಿಬಂದಿ ಅಭಯ್‌ಸಿಂಗ್‌ ಅವರು ತನ್ನ ಕಹಿ ಅನುಭವಗಳನ್ನು ಉದಯವಾಣಿಯ ಜತೆ ಹಂಚಿಕೊಂಡದ್ದು ಹೀಗೆ.

“ಅಪಾಯದ ಬಗ್ಗೆ ಹಿರಿಯ ಅಧಿಕಾರಿಗಳು ತಿಳಿಸಿದಾಗ ನಿಜವಾಗಿಯೂ ಹೆದರಿಕೆ ಯುಂಟಾ ಗಿತ್ತು. ಗಾಳಿ ಹಾಗೂ ಅಲೆಗಳ ಅಬ್ಬರಕ್ಕೆ ಬಾರ್ಜ್‌ ಕೂಡ ಅಲುಗಾಡುತ್ತಿತ್ತು. ಶನಿವಾರ ನಾಲ್ವರನ್ನು ಮಾತ್ರ ರಕ್ಷಿಸಲಾಗಿತ್ತು. ಬಳಿಕ ರವಿವಾರ ಬೆಳಗ್ಗಿನಿಂದ ಹಂತ-ಹಂತ ವಾಗಿ ಉಳಿದವರನ್ನು ರಕ್ಷಿಸಲಾಯಿತು. ಕೊನೆಯಲ್ಲಿ ಉಳಿದ ನಾವು 8 ಮಂದಿಯನ್ನು ತಣ್ಣೀರುಬಾವಿಯ ಜಾವೇದ್‌ ತಂಡ ಟ್ಯೂಬ್‌ ಮೂಲಕ ರಕ್ಷಿಸಿದೆ. ನಾನು ಮತ್ತು ಸ್ಥಳೀಯರಾದ ಶೋಭಿತ್‌ ಅವರು ಕೊನೆಯಲ್ಲಿ ಬಂದೆವು’ ಎನ್ನುತ್ತಾರೆ ಅಭಯ್‌ಸಿಂಗ್‌.

ನಗಿಸಲು ಪ್ರಯತ್ನಿಸುತ್ತಿದ್ದೆ
ಬಾರ್ಜ್‌ನೊಳಗೆ ನೀರು ನುಗ್ಗುತ್ತಿರುವ ವಿಷಯ ನಮಗೆ ತಿಳಿಸುತ್ತಿದ್ದಂತೆ ಲೈಫ್‌ ಜಾಕೆಟ್‌ಗಳನ್ನು ಧರಿಸಿ ಮೇಲೇರಲು ತಿಳಿಸಿದ್ದರು. ಸಮುದ್ರದಲ್ಲಿ ಅಲೆಗಳ ತೀವ್ರತೆ ಜಾಸ್ತಿಯಾದಾಗ ಬಾರ್ಜ್‌ ಮಗುಚುವ ಅನುಭವವಾಗುತ್ತಿತ್ತು. ಆ್ಯಂಕರ್‌ ತುಂಡಾಗಿರುವುದಲ್ಲದೇ ಒಳಗೆ ನೀರು ನುಗ್ಗುತ್ತಿರುವ ಬಗ್ಗೆ ನಮ್ಮ ಜತೆಗಿದ್ದ ಹಿರಿಯ ಅಧಿಕಾರಿಗಳು ಕಂಪೆನಿಯ ಅಧಿಕಾರಿಗಳನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದರು. ಕಂಪೆನಿಯ 3 ಬೋಟ್‌ಗಳು ಬಂದಿದ್ದವಾದರೂ ರಕ್ಷಣೆ ಕಾರ್ಯ ನಡೆಸಲಾಗುವುದಿಲ್ಲವೆಂದು ಹಿಂದಿರುಗಿದ್ದರು. ಸಮುದ್ರದ ಮಧ್ಯದಲ್ಲಿ ಬಾಕಿಯಾದಾಗ ಹೆದರಿಕೆಯಾಗಿತ್ತಾದರೂ ಪ್ರಾಣಾಪಾಯದಿಂದ ಬಚಾವು ಆಗುವ ಬಗ್ಗೆ ಭರವಸೆ ಕಳೆದುಕೊಂಡಿರಲಿಲ್ಲ. ಉಳಿದವರೊಂದಿಗೆ ಒಟ್ಟುಗೂಡಿ ಮಾತಾಡಿಕೊಂಡು ಆದಷ್ಟು ಅವರನ್ನು ನಗಿಸಲು ಪ್ರಯತ್ನಿಸುತ್ತಿದ್ದೆ ಎನ್ನುತ್ತಾರೆ ಬಾರ್ಜ್‌ನಲ್ಲಿ ಅಡುಗೆ ವ್ಯವಸ್ಥೆ ನೋಡಿಕೊಳ್ಳುತ್ತಿದ್ದ ಲಕ್ನೋದ ಸಂಜಯ್‌ ಮೋಹನ್‌.

ತುಂಬಾ ಹೆದರಿದ್ದೆವು
ಬಾರ್ಜ್‌ ಅಪಾಯಕ್ಕೆ ಸಿಲುಕಿ ವಾಲಿದ್ದ ಸಂದರ್ಭದಲ್ಲಿ ಮೊದಲು ಕೆವಿ3, ಕೆವಿ15 ಹಾಗೂ ಶೌರ್ಯಶಕ್ತಿ ಟಗ್‌ ಬೋಟ್‌ಗಳು ಬಂದಿದ್ದವು. ಆದರೆ ನಮ್ಮನ್ನು ರಕ್ಷಣೆ ಮಾಡ ಲಾಗದೆ ಹಿಂದಿರು ಗಿದ್ದವು. ಮುಂದೇನಾಗುತ್ತೋ ಎಂಬ ಭಯವೂ ನಮ್ಮಲ್ಲಿತ್ತು. ಮೊದಲ ದಿನ 4 ಮಂದಿಯನ್ನು ರಕ್ಷಿಸಲಾಗಿತ್ತು. ಅನಂತರ ಸಮುದ್ರದ ಪ್ರಕ್ಷುಬ್ಧ ವಾತಾವರಣದಿಂದಾಗಿ ತೀರಾ ಹೆದರಿದ್ದೆವು. ರವಿವಾರ ಬೆಳಗ್ಗೆ ಕೋಸ್ಟ್‌ಗಾರ್ಡ್‌, ಕೋಸ್ಟಲ್‌ ಸೆಕ್ಯೂರಿಟಿ ಪೊಲೀಸ್‌ ಮೂಲಕ ನಮ್ಮನ್ನು ರಕ್ಷಿಸಲಾಗಿದೆ. ಜೀವನದಲ್ಲಿ ಈ ಭಯಾನಕ ಘಟನೆ ಎದುರಿಸಿದ್ದೇವೆಯಾದರೂ ನಮ್ಮ ಕೆಲಸವನ್ನು ಮಾತ್ರ ಮುಂದುವರಿಸುತ್ತೇವೆ ಎನ್ನುತ್ತಾರೆ ಶಿಮ್ಲಾದ ಬಲ್ವಿàಂದರ್‌ ಸಿಂಗ್‌ ಹಾಗೂ ಪಂಜಾಬ್‌ನ ಭೂಪೇಂದರ್‌.

ಮಾನವೀಯತೆ ಮೆರೆದ ಕುಡ್ಲದ ಹೀರೋ
ಅಪಾಯವಿದ್ದರೂ ನಾನೊಬ್ಬನೇ ಮೊದಲು ರಕ್ಷಣೆ ಗೊಳಗಾಗಬೇಕೆನ್ನುವುದು ಸರಿಯಲ್ಲ. ಅದಕ್ಕಾಗಿ ಎಲ್ಲರನ್ನು ಮೊದಲು ರಕ್ಷಣೆ ಮಾಡಲು ಸಹಾಯ ಮಾಡಿ ಕೊನೆಗೆ ಬಂದೆ. ಸಮುದ್ರದಲ್ಲಿ ಗಾಳಿ ಹಾಗೂ ನೀರಿನ ರಭಸ ತೀವ್ರವಾಗಿತ್ತು. ದೊಡ್ಡ- ದೊಡ್ಡ ಅಲೆಗಳು ಬಂದಾಗ ಬಾರ್ಜ್‌ ಪಲ್ಟಿಯಾಗುವಂತಾಗುತ್ತಿತ್ತು. ಹೆದರಿಕೆಯೊಂದಿಗೆ ಮಾನಸಿಕ ಒತ್ತಡಗಳೂ ನಮ್ಮಲ್ಲಿತ್ತು. ನೀರು ಕುಡಿದೇ ಒಂದು ರಾತ್ರಿಯನ್ನು ದೂಡಿದೆವು. 

43 ದಿನಗಳಿಂದ ನಾನು ಬಾರ್ಜ್‌ ನಲ್ಲಿ ಕೆಲಸ ಮಾಡುತ್ತಿದ್ದೇನೆ. ಆ್ಯಂಕರ್‌ ತುಂಡಾದ ಕ್ಷಣದಲ್ಲಿ ಗಂಭೀರ ಸ್ಥಿತಿಯುಂಟಾದಾಗ ಉಳ್ಳಾಲದ ಜನರು ಸಾಕಷ್ಟು ಧೈರ್ಯ ತುಂಬು ತ್ತಿದ್ದರು. ಪ್ರತೀ ಗಂಟೆಗೊಮ್ಮೆ ಕರೆ ಮಾಡಿ ನಮ್ಮ ಸ್ಥಿತಿಯ ಬಗ್ಗೆ ವಿಚಾರಿಸುತ್ತಿದ್ದರಲ್ಲದೇ ಯಾರೇ ಕೈಬಿಟ್ಟರೂ ನಾವು ನಿಮ್ಮನ್ನು ರಕ್ಷಿಸುತ್ತೇವೆ ಎಂದು ಹೇಳುತ್ತಿದ್ದರು. ಈ ವಿಷಯವನ್ನು ಉಳಿದವರಿಗೂ ತಿಳಿಸುತ್ತಿದ್ದೆ. ನನ್ನ ತಂದೆಯೂ ಆಗಾಗ ಕರೆ ಮಾಡಿ ನನಗೆ ಧೈರ್ಯ ತುಂಬುತ್ತಿದ್ದುದ್ದರಿಂದ ನನ್ನಲ್ಲಿ ಹೆಚ್ಚಿನ ಧೈರ್ಯ ತುಂಬಿತ್ತು. ಉಳಿದವರನ್ನು ಕೋಸ್ಟ್‌ಗಾರ್ಡ್‌, ಕೋಸ್ಟಲ್‌ ಸೆಕ್ಯೂರಿಟಿ ಪೊಲೀಸರು ರಕ್ಷಣೆ ಮಾಡಿದ ಬಳಿಕ ನಾವು 8 ಜನರ ಸಹಾಯಕ್ಕೆ ಬಂದದ್ದು ಜಾವೇದ್‌ ತಂಡ. ರೆಸ್ಕೂ ಬೋಟ್‌ ಬಂದಾಗ ಬಾರ್ಜ್‌ ನಲ್ಲಿ ಸ್ಥಿತಿ ಇನ್ನಷ್ಟು ಗಂಭೀರವಾಗುವಾಗ ಲೈಫ್‌ ಜಾಕೆಟ್‌ ಬಳಸಿಕೊಂಡು ನೀರಿಗೆ ಧುಮುಕಿದೆವು. ನನಗೂ ಈಜು ತಿಳಿದಿತ್ತು. ಅವರು ಟ್ಯೂಬ್‌ನ ಸಹಾಯದಿಂದ ಬಂದು ನಮ್ಮ ರಕ್ಷಣೆಗೆ ಸಹಾಯ ಮಾಡಿದರು ಎನ್ನುತ್ತಾರೆ  ಬೆಂಗರೆ ನಿವಾಸಿ ಶಾಂತಾರಾಮ ಕರ್ಕೇರ ಬೆಂಗರೆ ಅವರ ಪುತ್ರ ಬಾರ್ಜ್‌ನ ಡೆಕ್‌ ಇನ್‌ಚಾರ್ಜ್‌ ಶೋಭಿತ್‌.

Advertisement

Udayavani is now on Telegram. Click here to join our channel and stay updated with the latest news.

Next