Advertisement
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮೂರು ತಿಂಗಳಿನಿಂದ ಮಂಗಳೂರಿನಿಂದ ಮಣಿಪಾಲ ನಡುವಣ ಯಾವುದೇ ಎಸಿ ಬಸ್ ಸಂಚರಿಸಲಿಲ್ಲ. ಪ್ರತೀ ಬಸ್ ನಿಗದಿತ ಕಿ.ಮೀ.ಗಿಂತ ಹೆಚ್ಚು ಸಂಚರಿಸಿರುವ ಹಿನ್ನೆಲೆಯಲ್ಲಿ ಆಗಾಗ ತಾಂತ್ರಿಕ ಸಮಸ್ಯೆಯೂ ಕಾಣಿಸಿಕೊಳ್ಳುತ್ತಿತ್ತು. ಈ ಎಲ್ಲ ವಿಚಾರವನ್ನು ಕೆಎಸ್ಸಾರ್ಟಿಸಿ ಇದೀಗ ಗಂಭೀರವಾಗಿ ಪರಿಗಣಿಸಿದೆ.
ಪ್ರಯಾಣಿಕರನ್ನು ಸೆಳೆಯಲು ಕೆಎಸ್ಸಾರ್ಟಿಸಿಯು ದೈನಂದಿನ ಪಾಸ್ ವ್ಯವಸ್ಥೆಯನ್ನು ಆರಂಭದಲ್ಲಿ ಜಾರಿಗೆ ತಂದಿತ್ತು. ಆದರೆ ಕೆಲವೇ ದಿನಗಳಲ್ಲಿ ಸ್ಥಗಿತಗೊಂಡಿತ್ತು. 2017ನೇ ಸೆ. 2ರಿಂದ ಮತ್ತೆ ಇದೇ ವ್ಯವಸ್ಥೆ ಜಾರಿಗೆ ತಂದು ದಿನದ ಪಾಸ್‌ಗೆ 150 ರೂ. ನಿಗದಿಗೊಳಿಸಿತ್ತು. ಪಾಸ್ ಪಡೆಯದೆ ಪ್ರಯಾಣಿಸಿದರೆ ಎರಡೂ ಕಡೆ ಸಂಚಾರಕ್ಕೆ 180 ರೂ. ತಗಲುತ್ತದೆ. ಪಾಸ್ ಖರೀದಿಸಿದರೆ 30 ರೂ. ಉಳಿತಾಯವಾಗುತ್ತದೆ. ಇದರಿಂದಾಗಿ ಪ್ರಯಾಣಿಕರು ವೋಲ್ವೋ ಬಸ್ ನೆಚ್ಚಬಹುದು ಎಂಬ ಯೋಚನೆ ನಿಗಮದ್ದಾಗಿತ್ತು. ಆದರೆ ಈ ಯೋಜನೆ ಅಂದುಕೊಂಡಷ್ಟು ಪರಿಣಾಮಕಾರಿಯಾಗಲಿಲ್ಲ.
Related Articles
– ರಾಮಮೂರ್ತಿ,
ಚೀಫ್ ಮೆಕ್ಯಾನಿಕಲ್ ಎಂಜಿನಿಯರ್ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿ
Advertisement
ಮಂಗಳೂರಿನಿಂದ ಮಣಿಪಾಲಕ್ಕೆ ನಾನ್ ಎಸಿ ಬಸ್ ಪರಿಚಯಿಸುವ ಬಗ್ಗೆ ಕೇಂದ್ರ ಕಚೇರಿ ಮಟ್ಟದಲ್ಲಿ ಈ ಹಿಂದೆ ಚರ್ಚೆ ನಡೆದಿತ್ತು. ಲಾಭ-ನಷ್ಟದ ಮಾಹಿತಿ ಯನ್ನು ನೀಡಲಾಗಿದೆ. ಮುಂದಿನ ನಿರ್ಧಾರವನ್ನು ಕೇಂದ್ರ ಕಚೇರಿ ತೆಗೆದುಕೊಳ್ಳುತ್ತದೆ.– ಅರುಣ್ ಕುಮಾರ್,
ವಿಭಾಗ ನಿಯಂತ್ರಣಾಧಿಕಾರಿ, ಕೆಎಸ್ಸಾರ್ಟಿಸಿ ಮಂಗಳೂರು