ಮಂಗಳೂರು: ಮಂಗಳೂರು ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ 4 ಮತ್ತು 5ನೇ ಪ್ಲಾಟ್‌ಫಾರ್ಮ್ ನಿರ್ಮಾಣದ ಕೆಲಸ ಕೊನೆಗೂ ಆರಂಭವಾಗಿದೆ.
ಶುಕ್ರವಾರ ದಕ್ಷಿಣ ರೈಲ್ವೇ ವಿಭಾಗೀಯ ಪ್ರಬಂಧಕ ತ್ರಿಲೋಕ್ ಕೊಠಾರಿ ಅವರು ಪ್ಲಾಟ್‌ಫಾರ್ಮ್ ಕಾಮಗಾರಿ ನಡೆಯುತ್ತಿರುವಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದರು.
ಹೊಸ ಐಲ್ಯಾಂಡ್ ಮಾದರಿಯ ಪ್ಲಾಟ್‌ಫಾರ್ಮ್ 540 ಮೀ. ಉದ್ದವಾಗಿದ್ದು, 24 ಎಲ್‌ಬಿಎಚ್ ಮತ್ತು 26 ಐಸಿಎಫ್ ಕೋಚ್‌ಗಳು ನಿಲ್ಲಲು ಸಾಧ್ಯವಾಗಲಿದೆ.
ಸ್ಥಳದಲ್ಲಿ ಸದ್ಯ ಇರುವ 5ನೇ ಯಾರ್ಡ್ ಲೈನ್, ಒಎಚ್‌ಇ ಮಾಸ್ಟ್ ಮತ್ತು ಹೈಡ್ರೆಂಟ್‌ಗಳನ್ನು ತೆರವುಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಇದು ಪೂರ್ಣಗೊಂಡ ಬಳಿಕ ಪ್ಲಾಟ್‌ಫಾರ್ಮ್ ರಚನೆ ಆರಂಭಗೊಳ್ಳಲಿದೆ. 10 ಮೀ. ಅಗಲವಿದ್ದು ಅಂಧರಿಗಾಗಿ ವಿಶೇಷ ರೀತಿಯ ಟೈಲ್‌ಗಳನ್ನು ಅಳವಡಿಸಲಾಗುವುದು.
ಬೆಂಚುಗಳು ಮತ್ತು ನೀರಿನ ವ್ಯವಸ್ಥೆಯನ್ನೂ ಕಲ್ಪಿಸ ಲಾಗುತ್ತದೆ. 3 ಮತ್ತು 4ನೇ ಪ್ಲಾಟ್‌ಫಾರ್ಮ್ ನಲ್ಲಿ ಬೋಗಿ ಗಳಿಗೆ ನೀರಿಗಾಗಿ ಹೊಸ ಹೈಡ್ರೆಂಟ್ ನಿಮಾರ್ಣವಾಗಲಿದೆ. ಒಟ್ಟು 4.5 ಕೋ.ರೂ. ಮೊತ್ತದ ಯೋಜನೆಯಾಗಿದ್ದು, 2023ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆ ಯಿದೆ. ಪ್ಲಾಟ್‌ಫಾರ್ಮ್ ಶೆಲ್ಟರ್, ಹಳಿ ದಾಟಲು ಪ್ರಯಾಣಿಕ ಕಾಲು ಸೇತುವೆಯ ವಿಸ್ತರಣೆ, ಲಿಫ್ಟ್/ಎಸ್ಕಲೇಟರ್ ಸೌಲಭ್ಯ ಕಲ್ಪಿಸಲೂ ಯೋಜನೆ ರೂಪಿಸಲಾಗಿದೆ ಎಂದು ರೈಲ್ವೇ ಇಲಾಖೆ ಪ್ರಕಟನೆ ತಿಳಿಸಿದೆ.