Advertisement

ಮ್ಯಾಂಚೆಸ್ಟರ್‌ ಟೆಸ್ಟ್: ಸ್ಟೋಕ್ಸ್‌ , ಡಾಮ್‌ ಸಿಬ್ಲಿ ಶತಕ

06:53 AM Jul 18, 2020 | mahesh |

ಮ್ಯಾಂಚೆಸ್ಟರ್‌: ಆಲ್‌ರೌಂಡರ್‌ ಬೆನ್‌ ಸ್ಟೋಕ್ಸ್‌ ಮತ್ತು ಆರಂಭಕಾರ ಡೊಮಿನಿಕ್‌ ಸಿಬ್ಲಿ ಬಾರಿಸಿದ ಆಕರ್ಷಕ ಶತಕ ಸಾಹಸದಿಂದ ಮ್ಯಾಂಚೆಸ್ಟರ್‌ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ಉತ್ತಮ ಮೊತ್ತದತ್ತ ದಾಪುಗಾಲಿಕ್ಕುತ್ತಿದೆ. 7ಕ್ಕೆ 402 ರನ್‌ ಮಾಡಿ 2ನೇ ದಿನದಾಟ ಮುಂದುವರಿಸುತ್ತಿದೆ. ಬೆನ್‌ ಸ್ಟೋಕ್ಸ್‌ 10ನೇ ಶತಕ ಬಾರಿಸಿ ಮುನ್ನುಗ್ಗಿದರು. 176 ರನ್‌ ಬಾರಿಸಿದ ಅವರು ಚಹಾ ವಿರಾಮದ ಬಳಿಕ ಔಟಾದರು. (356 ಎಸೆತ, 17 ಬೌಂಡರಿ, 2 ಸಿಕ್ಸರ್‌). ಸಿಬ್ಲಿ ತೀವ್ರ ಎಚ್ಚರಿಕೆಯಿಂದ ಬ್ಯಾಟ್‌ ಬೀಸಿ 372 ಎಸೆತಗಳಿಂದ 120 ರನ್‌ ಹೊಡೆದರು. ಇದರಲ್ಲಿ ಕೇವಲ 5 ಬೌಂಡರಿ ಒಳಗೊಂಡಿತ್ತು. ಸಿಬ್ಲಿ-ಸ್ಟೋಕ್ಸ್‌ 4ನೇ ವಿಕೆಟಿಗೆ 260 ರನ್‌ ಪೇರಿಸಿ ಕೆರಿಬಿಯನ್‌ ಬೌಲರ್‌ಗಳನ್ನು ಗೋಳುಹೊಯ್ದುಕೊಂಡರು.

Advertisement

ಇಂಗ್ಲೆಂಡ್‌ 3ಕ್ಕೆ 207 ರನ್‌ ಮಾಡಿ ದಲ್ಲಿಂದ ದಿನದಾಟ ಮುಂದು ವರಿಸಿತ್ತು. ಆಗ ಸಿಬ್ಲಿ 86, ಸ್ಟೋಕ್ಸ್‌ 59 ರನ್‌ ಗಳಿಸಿ ಬ್ಯಾಟಿಂಗ್‌ ಕಾಯ್ದು ಕೊಂಡಿದ್ದರು. ಸಿಬ್ಲಿ ನಿರ್ಗಮನದ ಬಳಿಕ ಓಲೀ ಪೋಪ್‌ ಕೇವಲ 7 ರನ್‌ ಮಾಡಿ ಔಟಾದರು.

Advertisement

Udayavani is now on Telegram. Click here to join our channel and stay updated with the latest news.

Next