Advertisement

ICC World Rankings: ಟೆಸ್ಟ್‌ ಬೌಲಿಂಗ್‌ ರ್‍ಯಾಂಕಿಂಗ್‌ ಬುಮ್ರಾ ಮರಳಿ ನಂ.1

03:35 AM Nov 28, 2024 | Team Udayavani |

ದುಬಾೖ: ಪರ್ತ್‌ ಟೆಸ್ಟ್‌ ಪಂದ್ಯದಲ್ಲಿ ತಮ್ಮ ಘಾತಕ ಎಸೆತಗಳಿಂದ ಆಸ್ಟ್ರೇಲಿಯವನ್ನು ಮಣಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಜಸ್‌ಪ್ರೀತ್‌ ಬುಮ್ರಾ ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಮರಳಿ ಅಗ್ರಸ್ಥಾನ ಅಲಂಕರಿಸಿದ್ದಾರೆ. ಈ ಸರಣಿಗೂ ಮುನ್ನ ಅವರು 3ನೇ ಸ್ಥಾನದಲ್ಲಿದ್ದರು.

Advertisement

ಪರ್ತ್‌ನಲ್ಲಿ ಬುಮ್ರಾ ಸಾಧನೆ 72ಕ್ಕೆ 8 ವಿಕೆಟ್‌. ಅವರೀಗ ಜೀವನಶ್ರೇಷ್ಠ 883 ರೇಟಿಂಗ್‌ ಪಾಯಿಂಟ್‌ ಹೊಂದಿದ್ದಾರೆ. ಕಾಗಿಸೊ ರಬಾಡ (872) ಮತ್ತು ಜೋಶ್‌ ಹೇಝಲ್‌ವುಡ್‌ (860) ಅವರನ್ನು ಹಿಂದಿಕ್ಕುವಲ್ಲಿ ಬುಮ್ರಾ ಯಶಸ್ವಿಯಾದರು. ಟಾಪ್‌-10 ಬೌಲಿಂಗ್‌ ರ್‍ಯಾಂಕಿಂಗ್‌ನಲ್ಲಿ ಇನ್ನೂ ಕೆಲವು ಬದಲಾವಣೆ ಸಂಭವಿಸಿದೆ.

ಪರ್ತ್‌ನಲ್ಲಿ ಆಡದೇ ಹೋದರೂ ಆರ್‌. ಅಶ್ವಿ‌ನ್‌ ಒಂದು ಸ್ಥಾನ ಮೇಲೇರಿದ್ದಾರೆ (4). ಶ್ರೀಲಂಕಾದ ಪ್ರಭಾತ್‌ ಜಯಸೂರ್ಯ 2 ಸ್ಥಾನ ಭಡ್ತಿ ಸಂಪಾದಿಸಿದ್ದಾರೆ (5).
ಆಸೀಸ್‌ ನಾಯಕ ಪ್ಯಾಟ್‌ ಕಮಿನ್ಸ್‌ 2 ಸ್ಥಾನ ಕೆಳಗಿಳಿದಿದ್ದಾರೆ (6). ರವೀಂದ್ರ ಜಡೇಜ (7), ನಥನ್‌ ಲಿಯಾನ್‌ (8) ಒಂದೊಂದು ಸ್ಥಾನ ಕುಸಿತ ಕಂಡಿದ್ದಾರೆ.
ಬುಮ್ರಾ ಅವರ ಜತೆಗಾರ ಮೊಹಮ್ಮದ್‌ ಸಿರಾಜ್‌ ಕೂಡ ಗಮನಾರ್ಹ ಪ್ರಗತಿ ಸಾಧಿಸಿದ್ದಾರೆ. 3 ಸ್ಥಾನ ಮೇಲೇರಿದ ಅವರು 25ನೇ ಸ್ಥಾನಕ್ಕೆ ಬಂದಿದ್ದಾರೆ.

ಎರಡಕ್ಕೇರಿದ ಜೈಸ್ವಾಲ್‌
ಪರ್ತ್‌ನಲ್ಲಿ ಪ್ರಚಂಡ ಶತಕ ಬಾರಿಸಿ ಮಿಂಚಿದ ಆರಂಭಕಾರ ಯಶಸ್ವಿ ಜೈಸ್ವಾಲ್‌ ಜೀವನಶ್ರೇಷ್ಠ 825 ಅಂಕಗಳನ್ನು ಹೊತ್ತು ಬ್ಯಾಟಿಂಗ್‌ ರ್‍ಯಾಂಕಿಂಗ್‌ನಲ್ಲಿ ದ್ವಿತೀಯ ಸ್ಥಾನಕ್ಕೆ ಏರಿದ್ದಾರೆ. ಜೋ ರೂಟ್‌ ನಂ.1 ಸ್ಥಾನ ಕಾಯ್ದುಕೊಂಡಿದ್ದಾರೆ (903). ರಿಷಭ್‌ ಪಂತ್‌ 6ನೇ ಸ್ಥಾನ ಉಳಿಸಿಕೊಂಡಿದ್ದಾರೆ (736). 30ನೇ ಶತಕ ಬಾರಿಸಿ ಫಾರ್ಮ್ಗೆ ಮರಳಿದ ವಿರಾಟ್‌ ಕೊಹ್ಲಿ ಅವರಿಗೆ 9 ಸ್ಥಾನಗಳ ಲಾಭವಾಗಿದೆ. ಅವರೀಗ 13ನೇ ರ್‍ಯಾಂಕ್‌ ಹೊಂದಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next