ಹಮೀರ್ ಪುರ್(ಉತ್ತರಪ್ರದೇಶ): ಹಲವು ಬಾರಿ ದೂರವಾಣಿ ಕರೆ ಮಾಡಿದ್ದರೂ ಕೂಡಾ ಆಂಬುಲೆನ್ಸ್ ಬಾರದೇ ಇದ್ದಾಗ ಕೊನೆಗೆ ರೋಗಿಯನ್ನು ತರಕಾರಿ ಮಾರಾಟದ ಗಾಡಿಯಲ್ಲಿ ಮಲಗಿಸಿ ತಳ್ಳಿಕೊಂಡು ಬಂದು ಆಸ್ಪತ್ರೆಗೆ ದಾಖಲಿಸಿರುವ ಘಟನೆ ಉತ್ತರಪ್ರದೇಶದ ಹಮೀರ್ ಪುರ್ ನಲ್ಲಿ ನಡೆದಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ:
Shimoga: ಬಾಕ್ಸ್ ಘಟನೆಗೆ ಮೇಜರ್ ಟ್ವಿಸ್ಟ್; ಇರಿಸಿದ್ದು ಬಾಂಬ್ ಅಲ್ಲ, ಕೋಟಿ ಹಣದ ಪಂಗನಾಮ!
ವಿಡಿಯೋ ವೈರಲ್ ಆಗುವ ಮೂಲಕ ಉತ್ತರಪ್ರದೇಶದಲ್ಲಿನ ಆರೋಗ್ಯ ಇಲಾಖೆಯ ಮುಖವಾಡ ಬಯಲು ಮಾಡಿದಂತಾಗಿದೆ ಎಂದು ಜಾಲತಾಣದಲ್ಲಿ ನೆಟ್ಟಿಗರು ಅಸಮಾಧಾನವ್ಯಕ್ತಪಡಿಸಿದ್ದಾರೆ.
ಈ ಘಟನೆ ನವೆಂಬರ್ 5ರಂದು ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನಾವು 108ಕ್ಕೆ ಹಲವಾರು ಬಾರಿ ಕರೆ ಮಾಡಿದ್ದೇವು, ಆದರೆ ಆರೋಗ್ಯ ಇಲಾಖೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲವಾಗಿತ್ತು.
ರೋಗಿ ಸ್ಥಿತಿ ತುಂಬಾ ಚಿಂತಾಜನಕವಾಗಿತ್ತು, ಹೀಗಾಗಿ ನಾವು ಬಲವಂತವಾಗಿ ತರಕಾರಿ ಮಾರಾಟ ಮಾಡುವ ತಳ್ಳು ಗಾಡಿಯಲ್ಲಿ ರೋಗಿಯನ್ನು ಮಲಗಿಸಿ ಆಸ್ಪತ್ರೆಗೆ ತಂದು ದಾಖಲಿಸಲಾಗಿತ್ತು ಎಂದು ರೋಗಿಯ ಸಂಬಂಧಿಕರು ತಿಳಿಸಿದ್ದಾರೆ.