ಇಸ್ಲಾಮಾಬಾದ್: 26/11 ಭಯೋ*ತ್ಪಾದನಾ ದಾಳಿಯ ಮಾಸ್ಟರ್ ಮೈಂಡ್, ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಉ*ಗ್ರ, ಜೈಶ್ ಇ ಮೊಹಮ್ಮದ್ ಭಯೋ*ತ್ಪಾದಕ ಸಂಘಟನೆಯ ಸ್ಥಾಪಕ ಮೌಲಾನಾ ಮಸೂದ್ ಅಜರ್ ಹೃದಯಾಘಾತಕ್ಕೆ ಒಳಗಾಗಿರುವ ಘಟನೆ ಗುರುವಾರ (ಡಿ.26) ನಡೆದಿರುವುದಾಗಿ ನ್ಯೂಸ್ 18 ವರದಿ ಮಾಡಿದೆ.
ವರದಿಯ ಪ್ರಕಾರ, ಅಜರ್ ಮಸೂದ್ ನನ್ನು ಅಫ್ಘಾನಿಸ್ತಾನದ ಅಡಗುತಾಣದಿಂದ ಪಾಕಿಸ್ತಾನದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದೆ. 1999ರಲ್ಲಿ ಐಸಿ-814 ವಿಮಾನವನ್ನು ಹೈಜಾಕ್ ಮಾಡಿದ್ದು, ಉ*ಗ್ರರು ಮಸೂದ್ ನನ್ನು ಬಿಡುಗಡೆ ಮಾಡಬೇಕೆಂಬ ಬೇಡಿಕೆ ಇಟ್ಟಿದ್ದು, ಅದರಂತೆ ಭಾರತ ಸರ್ಕಾರ ಅಂದು ಉ*ಗ್ರ ಮಸೂದ್ ನನ್ನು ಜೈಲಿನಿಂದ ಬಿಡುಗಡೆಗೊಳಿಸಿತ್ತು.
ಬಿಡುಗಡೆ ನಂತರ ಮಸೂದ್ ಅಜರ್ ಜೈಶ್ ಇ ಮೊಹಮ್ಮದ್ ಎಂಬ ಭಯೋ*ತ್ಪಾದಕ ಸಂಘಟನೆಯನ್ನು ಹುಟ್ಟುಹಾಕಿದ್ದ. ಈ ಸಂಘಟನೆ ಭಾರತದಲ್ಲಿ ಲೆಕ್ಕವಿಲ್ಲದಷ್ಟು ಭಯೋ*ತ್ಪಾದಕ ಚಟುವಟಿಕೆಯಲ್ಲಿ ಶಾಮೀಲಾಗಿತ್ತು ಎಂದು ವರದಿ ವಿವರಿಸಿದೆ.
ಅಜರ್ ಮಸೂದ್ ಗೆ ಹೃದಯಾಘಾತ ಸಂಭವಿಸಿದ ವೇಳೆ ಅಫ್ಘಾನಿಸ್ತಾನದ ಖೋಸ್ಟ್ ಪ್ರಾಂತ್ಯದಲ್ಲಿ ಠಿಕಾಣಿ ಹೂಡಿದ್ದ ಎಂದು ನ್ಯೂಸ್ 18 ವರದಿ ತಿಳಿಸಿದೆ. ಪಾಕ್ ನ ಕರಾಚಿ ಆಸ್ಪತ್ರೆಯಲ್ಲಿ ತಜ್ಞ ವೈದ್ಯರು ಚಿಕಿತ್ಸೆ ನೀಡಲಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಹಲವು ಭಯೋ*ತ್ಪಾದಕ ಸಂಘಟನೆಗಳಲ್ಲಿ ಜೈಶ್ ಇ ಮೊಹಮ್ಮದ್ ನಂತಹ ಹಲವು ಸಂಘಟನೆಗಳಿಗೆ ಪಾಕಿಸ್ತಾನ ಸ್ವರ್ಗವಾಗಿದೆ ಎಂದು ಭಾರತ ಆರೋಪಿಸಿತ್ತು.
ಆದರೆ ಈ ಆರೋಪನ್ನು ಪಾಕಿಸ್ತಾನ ತಳ್ಳಿಹಾಕಿದ್ದು, ಅಷ್ಟೇ ಅಲ್ಲದೇ ಪಾಕಿಸ್ತಾನ ಭಯೋ*ತ್ಪಾದಕ ಸಂಘಟನೆ ಜತೆ ನಿಕಟ ಸಂರ್ಪಕ ಹೊಂದಿದ್ದ ಬಗ್ಗೆ ಭಾರತ ದಾಖಲೆ ಸಹಿತ ಪಾಕ್ ನ ಮುಖವಾಡ ಬಯಲು ಮಾಡಿತ್ತು.