ಲುಧಿಯಾನ: ಪೊಲೀಸ್ ಮಾದರಿ ವೇಷ ತೊಟ್ಟು ಪೋಸ್ ನೀಡಿದ ವ್ಯಕ್ತಿಯೊಬ್ಬನನ್ನು ಹಿಡಿದು ಕಂಬಿ ಹಿಂದೆ ಕಳುಹಿಸಿದ ಘಟನೆ ಪಂಜಾಬ್ ನಲ್ಲಿ ನಡೆದಿದೆ.
ವ್ಯಕ್ತಿಯೊಬ್ಬ ಥೇಟ್ ಪೊಲೀಸ್ ಮಾದರಿಯಲ್ಲಿ ಸಮವಸ್ತ್ರ ಧರಿಸಿ, ಜನರಲ್ಲಿ ಕೋವಿಡ್ ವಿರುದ್ದ ಹೋರಾಡಲು ಮದ್ಯ ಸೇವಿಸಿ ಎಂದು ವಿಡಿಯೋ ಮೂಲಕ ಅಂಗಲಾಚುತ್ತಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ನಿಜವಾದ ಪೊಲೀಸರು ಬಂದು ಈತನನ್ನು ಬಂಧಿಸಿದ್ದಾರೆ.
ಆರೋಪಿಯನ್ನು ಕುಲ್ವಾಂತ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ಜನರಲ್ಲಿ ಕೋವಿಡ್ ವೈರಸ್ ನಾಶವಾಗಬೇಕಾದರೆ ಮದ್ಯ ಸೇವಿಸಿ ಎಂದು ಒತ್ತಾಯಿಸುತ್ತಿದ್ದ. ಆದರೇ ಬಂಧಿತನಾಗುತ್ತಿದ್ದಂತೆ ತನ್ನ ವರಸೆ ಬದಲಿಸಿದ ಕುಲ್ವಾಂತ್ ಸಿಂಗ್, ತಾನೋಬ್ಬ ಹಾಸ್ಯಗಾರ, ಪೊಲೀಸರಿಗೆ ಧಕ್ಕೆ ತರುವ ಯಾವುದೇ ಉದ್ದೇಶವಿರಲಿಲ್ಲ ಎಂದಿದ್ದಾನೆ.
ಈ ಬಗ್ಗೆ ಮಾಹಿತಿ ನಿಡಿದ ಪೊಲೀಸ್ ಆಯುಕ್ತ ರಾಕೇಶ್ ಅಗರವಾಲ್, ಪಂಜಾಬ್ ಪೊಲೀಸರ ಸಮವಸ್ತ್ರ ಧರಿಸಿ, ವಿಸ್ಕಿ ಕುಡಿಯುವುದರಿಂದ ಕೋವಿಡ್ ರೋಗ ಗುಣವಾಗುತ್ತದೆ ಎಂಬ ವದಂತಿಗಳನ್ನು ಹಬ್ಬಿಸುತ್ತಿದ್ದರಿಂದ ಆತನನ್ನು ಬಂಧಿಸಲಾಗಿತ್ತು ಎಂದು ತಿಳಿಸಿದ್ದಾರೆ. ಇದೀಗ ಕಲ್ವಾಂತ್ ಸಿಂಗ್ ವಿರುದ್ಧ ಪಂಜಾಬ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.