Advertisement

ಭವಾನಿಪುರ ಉಪ ಚುನಾವಣೆ: ಭರ್ಜರಿ ವಿಜಯದತ್ತ ಮಮತಾ ಬ್ಯಾನರ್ಜಿ ಓಟ

12:02 PM Oct 03, 2021 | Team Udayavani |

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ಅಭ್ಯರ್ಥಿ ಮಮತಾ ಬ್ಯಾನರ್ಜಿ ಸ್ಪರ್ಧಿಸಿರುವ ಭವಾನಿಪುರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಆರಂಭದಿಂದಲೂ ಮುನ್ನಡೆ ಕಾಯ್ದುಕೊಂಡಿರುವ ಮಮತಾ ಬ್ಯಾನರ್ಜಿ ಭರ್ಜರಿ ಗೆಲುವು ಸಾಧಿಸುವತ್ತ ದಾಪುಗಾಲಿಡುತ್ತಿದ್ದಾರೆ.

Advertisement

ಒಂಬತ್ತು ಸುತ್ತಿನ ಮತ ಎಣಿಕೆಯ ಬಳಿಕ ಮಮತಾ ಬ್ಯಾನರ್ಜಿ 28,825 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಇದುವರೆಗೆ ದೀದಿ 37,504 ಮತಗಳನ್ನು ಪಡೆದಿದ್ದರೆ, ಬಿಜೆಪಿಯ ಪ್ರಿಯಾಂಕಾ ತಿಬ್ರೆವಾಲ್ 8,679 ಮತಗಳನ್ನು ಪಡೆದಿದ್ದಾರೆ.

ಕಳೆದ ಗುರುವಾರ ಮತದಾನ ನಡೆದಿದ್ದು, ಶೇ 57ರಷ್ಟು ಮಾತ್ರ ಮತದಾನ ನಡೆದಿದೆ. ರಾಷ್ಟ್ರದ ಗಮನ ಸೆಳೆದಿರುವ ಈ ಉಪಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿಯಿಂದ ವಕೀಲೆ, ಬಿಜೆಪಿ ಯೂತ್​​ ವಿಂಗ್​​​ ಅಧ್ಯಕ್ಷೆಯಾಗಿದ್ದ ಪ್ರಿಯಾಂಕಾ ತಿಬ್ರೆವಾಲಾ ಕಣದಲ್ಲಿದ್ದಾರೆ.

ಇದನ್ನೂ ಓದಿ:ದೀದಿ ಭವಿಷ್ಯ ಇಂದೇ ನಿರ್ಧಾರ : ಭವಾನಿಪುರ ಉಪಚುನಾವಣೆ ಮತ ಎಣಿಕೆ ಆರಂಭ

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ನಂದಿಗ್ರಾಮದಿಂದ ಸ್ಪರ್ಧಿಸಿದ್ದ ಮಮತಾ ಅವರು ಸುವೇಂದು ಅಧಿಕಾರಿ ವಿರುದ್ಧ ಅಲ್ಪ ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಆ ಹಿನ್ನೆಲೆಯಲ್ಲಿ ಮಮತಾ ಉಪ ಚುನಾವಣೆಯಲ್ಲಿ ಕಣಕ್ಕಿಳಿದಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲು ಭವಾನಿಪುರ ಕ್ಷೇತ್ರದಲ್ಲಿ ಗೆಲುವು ಸಾಧಿಸುವುದು ಅನಿವಾರ್ಯವಾಗಿದೆ. 2011 ಮತ್ತು 2016ರ ವಿಧಾನಸಭೆ ಚುನಾವಣೆಗಳಲ್ಲಿ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಮತಾ ಗೆಲುವು ಸಾಧಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next