Advertisement

“ಮಲ್ನಾಡ್‌’ಮನೆಯ ಊಟ ಚೆನ್ನ 

12:57 PM Jan 06, 2018 | |

ನಗರದ ನಾನ್‌ವೆಜ್‌ ಪ್ರಿಯರು ಭೇಟಿ ನೀಡಲೇಬೇಕಾದ ಜಾಗ ಹೋಟೆಲ್‌ “ಮಲ್ನಾಡ್‌ ನಾಟಿ ಸ್ಟೈಲ್‌’. ನಾಗರಬಾವಿ ರಿಂಗ್‌ ರೋಡಿನಲ್ಲಿ ಇರುವ “ಮಲ್ನಾಡ್‌ ನಾಟಿ ಸ್ಟೈಲ್‌’ನ ಮಾಲೀಕರು ಮೂಲತಃ ತೀರ್ಥಹಳ್ಳಿಯವರಾದ ಕುಸುಮಾ ವಿ. ಮತ್ತು ವಾಸುದೇವ್‌ ಬಿ.ಪಿ. ದಂಪತಿ. ಸುಮಾರು ಮೂವತ್ತು ವರ್ಷಗಳಿಂದ ಹೋಟೆಲ್‌ ಉದ್ಯಮದಲ್ಲಿರುವ ಇವರು ಬದುಕು ಕಟ್ಟಿಕೊಂಡಿದ್ದು ಇದರಿಂದಲೇ. 

Advertisement

ಪತಿಗೆ ಬೆನ್ನೆಲುಬಾಗಿ ನಿಂತಿದ್ದು…: ಇವರು ಮೊದಲು ಹೋಟೆಲ್‌ ಶುರು ಮಾಡಿದ್ದು ಮಲ್ಲೇಶ್ವರಂನ ದೇವಯ್ಯ ಪಾರ್ಕ್‌ ಬಳಿ. ಅಲ್ಲಿ ಕೆಲಸದವರ ಅಭಾವ, ಸರಿಯಾದ ನಿರ್ವಹಣೆಯಿಲ್ಲದೆ ಹೋಟೆಲ…ನ ವ್ಯವಹಾರ ಕುಂಠಿತವಾಗತೊಡಗಿತು. ಮುಂದೆ ಆರ್ಥಿಕ ಬಿಕ್ಕಟ್ಟಿನ ಕಾರಣದಿಂದಾಗಿ ಆ ಹೋಟೆಲ್‌ ಮುಚ್ಚಬೇಕಾಗಿ ಬಂದು ಕೆಲಕಾಲ ನಷ್ಟ ಅನುಭವಿಸಿದರು. ಟ್ರಾನ್ಸ್‌ಪೊàರ್ಟ್‌ ಆಫೀಸಿನಲ್ಲಿ ಅಸಿಸ್ಟೆಂಟ್‌ ಆಗಿ ಕೆಲಸ  ಮಾಡುತ್ತಿದ್ದ ಕುಸುಮಾ ಅವರು, ಆ ಸೋಲನ್ನೇ ಸವಾಲಾಗಿ ಸ್ವೀಕರಿಸಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ  ಪತಿಗೆ ಬೆನ್ನೆಲುಬಾಗಿ ನಿಂತರು. 

ಟೈಲರಿಂಗ್‌ ಮಾಡಿ ಹಣ ಸಂಪಾದಿಸಿ, ಸಂಸಾರದ ಖರ್ಚಿಗೆಂದು ಗಂಡ ಕೊಡುತ್ತಿದ್ದ ಹಣವನ್ನೂ ಉಳಿಸಿ, ಅದನ್ನೇ ಬಂಡವಾಳವಾಗಿಸಿ ವೆಜ್‌ ಮತ್ತು ನಾನ್‌ವೆಜ್‌ ಎರಡೂ ದೊರೆಯುವ ಹೋಟೆಲ್‌ ಪ್ರಾರಂಭಿಸಿದರು. ಅದುವೇ “ಮಲ್ನಾಡ್‌ ನಾಟಿ ಸ್ಟೆçಲ್‌’ ಹೋಟೆಲ್‌. ಸಸ್ಯಾಹಾರ ಸೇರಿದಂತೆ ಮಾಂಸಾಹಾರದ ತಿನಿಸುಗಳನ್ನು ತಯಾರಿಸುವುದರಲ್ಲಿ ಇವರು ಸಿದ್ಧಹಸ್ತರು. ಚಿಕನ್‌, ಮಟನ್‌, ಮೊಟ್ಟೆ, ಸೀ ಫ‌ುಡ್‌ ಹಾಗೂ ಮೀನಿನ ಥರಹೇವಾರಿ  ಖಾದ್ಯಗಳು ಈ ಹೋಟೆಲಿನಲ್ಲಿ ದೊರೆಯುತ್ತವೆ. 

ಚಿಕನ್‌- ಮಟನ್‌ ಸ್ಪೆಷಲ್‌: ಚಿಕನ್‌ನಲ್ಲಿ ಬಟರ್‌ ಚಿಕನ್‌, ಲೆಮನ್‌ ಚಿಕನ್‌, ಚಿಕನ್‌ ಲಾಲಿಪಾಪ್‌, ಪುದೀನ ಚಿಕನ್‌, ನಾಟಿ ಕೋಳಿ  ಸಾರು, ಚಿಕನ್‌ ಕಬಾಬ್‌, ಗಾರ್ಲಿಕ್‌ ಚಿಕನ್‌ ಸೇರಿದಂತೆ  ಇನ್ನೂ ಹಲವಾರು ಖಾದ್ಯಗಳು ದೊರೆಯುತ್ತವೆ. ಮಟನ್‌ ಖಾದ್ಯಗಳಲ್ಲಿ ಬೋಟಿ, ಮಟನ್‌ ಕುರ್ಮ, ಮಟನ್‌ ಕೈಮಾ ಮುಂತಾದ ಖಾದ್ಯಗಳು  ಸಿಗುತ್ತವೆ. ತೆಳ್ಳಗಿನ, ಗಂಟುಗಳಿಲ್ಲದ ರಾಗಿಮುದ್ದೆ, ಚಿಕನ್‌ ಬಿರಿಯಾನಿ ಮತ್ತು ಕಾಲುಸೂಪು ಇಲ್ಲಿನ ವಿಶೇಷಗಳು. 

ಪ್ರತಿದಿನ ಬೆಳಗ್ಗಿನ ತಿಂಡಿಗೆ ದೊರೆಯುವ ಇಡ್ಲಿ ಮತ್ತು ಕಾಲುಸೂಪು ಬಾಯಲ್ಲಿ  ನೀರೂರಿಸುವುದು ಖಚಿತ. ಇಲ್ಲಿನ ಚಿಕನ್‌ ಬಿರಿಯಾನಿ ರುಚಿಗೆ ನೀವು ಮನಸೋಲದೇ ಇರಲಾರಿರಿ. ಪೆಪ್ಪರ್‌ ಚಿಕನ್‌ನ ರುಚಿಯನ್ನಂತೂ ನೀವು ಸವಿಯಲೇಬೇಕು. ಮೊಟ್ಟೆ ಪ್ರಿಯರಿಗೆ ಆಮ್ಲೆಟ್‌, ಎಗ್‌ ಮಸಾಲ, ಎಗ್‌ ಮಂಚೂರಿಯನ್‌ ಸದಾ ಸಿದ್ಧ. ಕರಾವಳಿ ಮಾದರಿಯ ಮೀನಿನ ಫ್ರೈ, ಫಿಶ್‌ ಚಿಲ್ಲಿ, ಸೀಗಡಿಯ ಖಾದ್ಯಗಳೂ ದೊರೆಯುತ್ತವೆ. 

Advertisement

ಸಸ್ಯಾಹಾರ ಸ್ಪೆಷಲ್‌: ಇನ್ನು ಸಸ್ಯಾಹಾರಿಗಳಿಗೆ ಇಡ್ಲಿ, ದೋಸೆ, ಚಪಾತಿ, ಪರೋಟ, ಪನೀರ್‌ ಬಟರ್‌ ಮಸಾಲ, ವೆಜ್‌ ಕಡಾಯಿ, ಮಶ್ರೂಮ್‌ನ ಖಾದ್ಯಗಳು ದೊರೆಯುತ್ತವೆ. ತುಂಬಾ ಕಡಿಮೆ ರೇಟಿನಲ್ಲಿ ಇವನ್ನೆಲ್ಲಾ ಉಣಬಡಿಸುವ ಹೋಟೆಲ್‌ ಮಲ್ನಾಡ್‌, ರುಚಿಯ ವಿಷಯದಲ್ಲಂತೂ ರಾಜಿ ಮಾಡಿಕೊಳ್ಳುವುದಿಲ್ಲ.

“ಜೋಗಯ್ಯ’ ಹೋಟೆಲ್‌: ಈ ಹೋಟೆಲಿನ ಮತ್ತೂಂದು ವಿಶೇಷವೆಂದರೆ ಹ್ಯಾಟ್ರಿಕ್‌ ಹೀರೊ ಶಿವರಾಜ್‌ ಕುಮಾರ್‌ ಅವರ “ಜೋಗಯ್ಯ’ ಚಿತ್ರದ ಚಿತ್ರೀಕರಣ ಇದೇ ಹೋಟೆಲಿನಲ್ಲಿ ನಡೆದಿದ್ದು. ಅದರ ನೆನಪಿಗಾಗಿ ಆ ಚಿತ್ರದ ಪೋಸ್ಟರನ್ನು ಹೋಟೆಲ್‌ನ ಮುಂಭಾಗದಲ್ಲಿ ಹಾಕಿದ್ದಾರೆ. ನೀವು ಹೋಟೆಲಿನ ಒಳಗೆ ಹೋದರೆ, ಕುಪ್ಪಳ್ಳಿಯ ಕುವೆಂಪುರವರ ಮನೆಯ ದೊಡ್ಡ ಫೋಟೋ ನಿಮಗೆ ಸ್ವಾಗತ ಕೋರುತ್ತದೆ.

ಕಿರುತೆರೆಯ  ಹಲವಾರು ನಟ ನಟಿಯರು  ಈ ಹೋಟೆಲಿಗೆ ಆಗಾಗ ಭೇಟಿ ನೀಡುತ್ತಾರೆ. ಸುಮಾರು ಹನ್ನೊಂದು ವರ್ಷದಿಂದ ಈ ಹೋಟೆಲಿನ ಕಾಯಂ ಗಿರಾಕಿಯಾಗಿರುವ ವಿಷ್ಣುಮೂರ್ತಿಯವರು, ಇಲ್ಲಿ ದೊರೆಯುವ ಮುದ್ದೆ ಮತ್ತು ಮಟನ್‌ ಫ್ರೈ ನನ್ನ ಆಲ್‌ ಟೈಮ್‌ ಫೇವರಿಟ್‌ ಅನ್ನುತ್ತಾರೆ.

ಊಟ ರೆಡಿ ಇದೆ…: ಬೆಳಗ್ಗೆ 7ರಿಂದ ರಾತ್ರಿ 11 ರವರೆಗೂ ಈ ಹೋಟೆಲ್‌ ತೆರೆದಿರುತ್ತದೆ. ಸಂಜೆ 4.30ರಿಂದ 6.30 ರವರೆಗೆ ಬ್ರೇಕ್‌. ಸದ್ಯಕ್ಕೆ  ಸೋಮವಾರ ಹೋಟೆಲ್‌ಗೆ ರಜಾ ಮಾಡಿರುವ ಇವರು, ಮುಂದೆ ಏಳೂ ದಿನವು ಹೋಟೆಲ್‌ ನಡೆಸುವ ಯೋಜನೆ ಹಾಕಿ¨ªಾರೆ. ಫ್ರೀ ಹೋಂ ಡೆಲಿವರಿ ಕೂಡಾ ಲಭ್ಯವಿದೆ. 

ಎಲ್ಲಿದೆ? 
ಹೋಟೆಲ್‌ ಮಲ್ನಾಡ್‌ ನಾಟಿ ಸ್ಟೈಲ್‌ ನಾಗರಬಾವಿ ರಿಂಗ್‌ ರೋಡ್‌ ಸಂಪರ್ಕ: 9449672169, 9742969750

* ಸ್ವಾತಿ ಕೆ.ಎಚ್‌.

Advertisement

Udayavani is now on Telegram. Click here to join our channel and stay updated with the latest news.

Next