Advertisement

ಜನವರಿ 27ರಿಂದ ಮುಂಬಯಿಯ ಈ ಪ್ರದೇಶಗಳಲ್ಲಿ ಮಾರ್ಕೆಟ್ ಮಲಗುವುದಿಲ್ಲ!

09:20 AM Jan 23, 2020 | Hari Prasad |

ಮುಂಬಯಿ: ಜನವರಿ 27ರಿಂದ ವಸತಿ ರಹಿತ ಪ್ರದೇಶಗಳಲ್ಲಿರುವ ಮಾಲ್ ಗಳು, ಹೊಟೇಲ್ ಗಳು ಮತ್ತು ಅಂಗಡಿಗಳಿಗೆ ದಿನದ 24 ಗಂಟೆಗಳೂ ವ್ಯಾಪಾರ ನಡೆಸಲು ಅನುಮತಿ ನೀಡಲಾಗುವುದು ಎಂದು ರಾಜ್ಯದ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಅವರು ಹೇಳಿದ್ದಾರೆ. ಈ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟದ ಒಪ್ಪಿಗೆಯೂ ದೊರೆತಿದೆ ಎಂದು ಅವರು ಹೇಳಿದ್ದಾರೆ.

Advertisement

ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಮತ್ತು ನರಿಮನ್ ಪಾಯಿಂಟ್ ಭಾಗದಲ್ಲಿರುವ ಶಾಪಿಂಗ್ ಮಾಲ್ ಗಳು, ಮಲ್ಟಿಪ್ಲೆಕ್ಸ್ ಗಳು, ಅಂಗಡಿಗಳು ಮತ್ತು ಹೊಟೇಲ್ ಗಳು ದಿನದ 24 ಗಂಟೆಯೂ ಕಾರ್ಯಾಚರಿಸಲು ಅನುಮತಿ ನೀಡಲಾಗಿದೆ ಎಂದು ಸಚಿವ ಆದಿತ್ಯ ಠಾಕ್ರೆ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ತಿಳಿಸಿದರು.

ಲಂಡನ್ ನಂತೆ ಮುಂಬಯಿ ಸಹ ಒಂದು ಅಂತಾರಾಷ್ಟ್ರೀಯ ನಗರವಾಗಿರುವುದರಿಂದ ಇಲ್ಲಿನ ವ್ಯಾಪಾರ ಕೇಂದ್ರಗಳು ದಿನದ 24 ಗಂಟೆಯೂ ಕಾರ್ಯನಿರ್ವಹಿಸಿವುದು ಅಗತ್ಯವಾಗಿದೆ ಇದರಿಂದಾಗಿ ಜನರಿಗೆ ಉದ್ಯೋಗವಕಾಶ ಹೆಚ್ಚಾಗಿ ನಗರದ ಆದಾಯದಲ್ಲೂ ಹೆಚ್ಚಳವಾಗಲಿದೆ ಎಂದು ಠಾಕ್ರೆ ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.

ಆದರೆ ಪಬ್ ಮತ್ತು ಬಾರ್ ಗಳ ವ್ಯವಹಾರ ಸಮಯದಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ನಗರದಲ್ಲಿ ಪಬ್ ಮತ್ತು ಬಾರ್ ಗಳಿಗೆ ಮಧ್ಯರಾತ್ರಿ 1.30ರವರೆಗೆ ತೆರೆದಿರಲು ಈಗಾಗಲೇ ಅನುಮತಿ ಇದೆ. ಈ ಸಮಯದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಆದಿತ್ಯ ಠಾಕ್ರೆ ಅವರು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ನಿರ್ಧಾರದಿಂದಾಗಿ ಮುಂಬಯಿ ಪೊಲೀಸರ ಮೇಲೆ ಅಧಿಕ ಕಾರ್ಯದೊತ್ತಡ ಉಂಟಾಗುವುದಿಲ್ಲ ಎಂದೂ ಸಹ ಸಚಿವ ಠಾಕ್ರೆ ಅವರು ಅಭಿಪ್ರಾಯಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next