Advertisement

Waterfalls: ಜಲಪಾತಗಳ ಆಗರ ಮಲೆನಾಡು

04:50 PM Sep 17, 2024 | Team Udayavani |

ಪಶ್ಚಿಮ ಘಟ್ಟಗಳ ಸಾಲಿನಲ್ಲಿ  ಅಗ್ರಗಣ್ಯವೆನಿಸಿಕೊಳ್ಳುವ ಪ್ರಮುಖ ಪ್ರದೇಶವೆಂದರೆ ಅದು ಮಲೆನಾಡು. ಅದರಲ್ಲೂ  ಶಿವಮೊಗ್ಗದ ಮಳೆಗಾಲದ ವಾತಾವರಣ. ಮಲೆನಾಡನ್ನು  ಗಿರಿ ಶಿಖರ ಪರ್ವತಗಳ ನಾಡು, ಜಲಪಾತಗಳ ತವರೂರು, ಪ್ರಕೃತಿ ಸೌಂದರ್ಯದ ಬಿಡು ಹೀಗೆ ವರ್ಣಿಸುತ್ತಾ ಹೋದರೆ ಪದಗಳಿಗೆ ಸಾಲದು.

Advertisement

ಪಶ್ಚಿಮ ಘಟ್ಟದಲ್ಲಿ  ಸದಾ ಹಚ್ಚ ಹಸುರಿನ ಪರಿಸರದಿಂದ ಕಂಗೊಳಿಸುವ ಮತ್ತು ಎತ್ತ ನೋಡಿದರೂ ಕಾಣಸಿಗುವ  ನದಿ, ಕಾನನಗಳು  ಮಳೆಗಾಲದ ಮಲೆನಾಡಿಗೆ ಆಕರ್ಷಣೆ.  ಹಚ್ಚ ಹಸುರಿನೆ ಸೀರೆಯಾಗಿಸಿಕೊಂಡು ಜನರನ್ನು ಆಕರ್ಷಿಸುವ ಶಿವಮೊಗ್ಗದ ಪ್ರವಾಸಿ ತಾಣಗಳು ರಮಣೀಯವಾಗಿವೆ.  ಮೈದುಂಬಿ ಹರಿಯುವ ಜೋಗ ಜಲಪಾತ, ಹಚ್ಚಿ ಕೆನ್ನೆ ಜಲಪಾತ, ಅಬ್ಬಿ ಜಲಪಾತ, ಅಷ್ಟು ಪ್ರಖ್ಯಾತಿ ಪಡೆಯದಿದ್ದರೂ ದಬ್ಬೆ ಜಲಪಾತ ಇನ್ನು ಮುಂತಾದ ನಯನ ಮನೋಹರವಾಗಿ ಮಳೆಗಾಲದಲ್ಲಿ ಮೈದುಂಬಿ ಹಾಲ್‌ ಕೊರೆಗಳಂತೆ ಧುಮ್ಮಿಕ್ಕುವ ಜಲಪಾತ, ನದಿಗಳ ಸೌಂದರ್ಯವನ್ನು ನೋಡಲು ಕಣ್ಣುಗಳಿಗೆ ಹಬ್ಬ. ಇತಿಹಾಸದ ಪಾಠವನ್ನು ತಿಳಿಸುವ ಕೆಳದಿ ಇಕ್ಕೇರಿಗಳು  ಕಾನೂರು ಕೋಟೆಯಂತಹ ಸ್ಥಳಗಳೇ ಬಲು ಆಕರ್ಷಕ.

ಇತ್ತ ತೀರ್ಥಹಳ್ಳಿಯ ಕಡೆ ಗಮನಹರಿಸಿದರೆ ಆಗುಂಬೆಯ  ಹಚ್ಚ ಹಸಿನ ಮಳೆಗಾಡುಗಳು ಮತ್ತು 90ರ ದಶಕದ ಮಾಲ್ಗುಡಿ ಡೇಸ್‌ ಮಾಹಿತಿ ತಿಳಿಸುವ ಅತ್ತಿಂದ. ಹಸಿರಿನ ದಕ್ಷಿಣ ದೇಶದಲ್ಲಿ ಅತಿ ಹೆಚ್ಚು ಮಳೆ ಬೀಳಿಸುವ ಹಾಗೇ ದೇಶದಲ್ಲಿ ಎರಡನೇಯ ಅತೀ ಹೆಚ್ಚು ಮಳೆ ಬೀಳುವ ಆಗುಂಬೆಯು ದಕ್ಷಿಣದ  ಚಿರಪುಂಜ ಎಂದು ಕರೆಸಿಕೊಳ್ಳುತ್ತದೆ . ಹೀಗೆ ಹಲವಾರು ಜಲಪಾತ ನೈಸರ್ಗಿಕ ವೈಭವ ಮತ್ತು ಶ್ರೀಮಂತ  ಜೀವವೈವಿಧ್ಯತೆಗೆ  ಹೆಸರುವಾಸಿ. ಹೀಗೆ ನೋಡುತ್ತಾ ಹೊದರೆ ಸ್ಥಳ ಗಳು ಅನೇಕ  ಒನಕೆ ಅಬ್ಬಿ ಜಲಪಾತ, ಬಂಡಾಜೆ-ಅರ್ಬಿ  ಜಲಪಾತ, ಜೋಗಿ ಗುಂಡಿ ಜಲಪಾತ ಮತ್ತು ಬರ್ಕಾನ ಜಲಪಾತ ಮಳೆಗಾಲದಲ್ಲಿ ಮಾರ್ಪಡುವ ಆಗುಂಬೆಯ ಮಳೆಗಾಡಿನ ಜಲಪಾತಗಳು.

ಸಹಸಮಯವಾದ ಟ್ರಕ್ಕಿಂಗ್‌ ಮಾಡಲು ಪ್ರವಾಸಿಗರಿಗೆ ಸೂಕ್ತವಾದ ಸ್ಥಳ ಕವಲಿ ದುರ್ಗ ಕೋಟೆ ಮತ್ತು ಚಾರಣು ಅತ್ಯಂತ ಜನಪ್ರಿಯವಾಗಿದೆ ಹನ್ನೆರಡನೇ ಶತಮಾನದ ಹೊಯ್ಸಳ ಸಾಮ್ರಾಜ್ಯದ ರಾಜ ವೀರಬಲ್ಲಾಳನ ಪತ್ನಿಯ ಕೋಟೆ ಮತ್ತು ಕುದುರೆಮುಖಗಳೆ ವಿಶೇಷ.

ಇತ್ತ  ಚಿಕ್ಕಮಗಳೂರಿನತ್ತ ಗಮನ ಹರಿಸಿದರೆ  ಸುಂದರವಾದ ಹಸುರಿನಿಂದ ಕಂಗೊಳಿಸುವ ಮುಳ್ಳಯ್ಯನಗಿರಿ ಮಳೆಗಾಲದಲ್ಲಿ ಹಸಿರು ಬೆಟ್ಟಗಳ ಒಂದು ನೋಟ ನೋಡಲು ಬಹಳಷ್ಟು ಸುಂದರ.  ಎಸ್ಟೇಟ್‌ ಕೆಫೆಗಳು, ಕಾಫಿ ತೋಟಗಳನ್ನು ಕಣ್ತುಂಬಿ ಕೊಳ್ಳುವುದು ಪ್ರವಾಸಿಗರಿಗೆ ಖುಷಿಯ ಸಂಗತಿ.  ಪ್ರವಾಸಿ ತಾಣಗಳಂತು ಗಿಜಿ ಗುಟ್ಟುವ ಸ್ಥಳಗಳಲ್ಲಿ ಚಿಕ್ಕ ಮಕ್ಕಳಿಂದ ಹಿಡಿದ ವಯಸ್ಕರು ಸೇರಿದಂತೆ ಎಲ್ಲಾ ವಯೋಮಾನದವರು ಭೇಟಿ ನೀಡುವ ಸ್ಥಳವಾಗಿದೆ. ದೇವಾಲಯಗಳು ಮತ್ತು ಪ್ರಕೃತಿ ಸೌಂದರ್ಯಕ್ಕೆ ಮನಸೋತು ಮರಳಾಗುವ ಜನರು ಹೆಚ್ಚು ಬರುತ್ತಾರೆ ಮಲೆನಾಡು ಒಂದು ರೀತಿ ಸ್ವರ್ಗಕ್ಕೆ ಸಮ ಹಾಗೆ ಜನರನ್ನು ಆಕರ್ಷಿಸುತ್ತಿವೆ. ಇದನ್ನು ನೋಡಲು ಪ್ರವಾಸಿಗರ ದಂಡೇ ಮಲೆನಾಡಿನತ್ತ ಹರಿದು ಬರುತ್ತಿದೆ.

Advertisement

-ಭವಾನಿ ಶಂಕರ್‌ ಚೋಡನಳ

ಕುವೆಂಪು ವಿವಿ, ಶಿವಮೊಗ್ಗ

Advertisement

Udayavani is now on Telegram. Click here to join our channel and stay updated with the latest news.

Next