Advertisement
ಸಮಯದ ಜತೆ ಸಾಗಿ ಸುಂದರ ನೆನಪುಗಳೊಂದಿಗೆಇರೋ ಚಿಕ್ಕ ಜೀವನದಲ್ಲಿ ಆದಷ್ಟುಖುಷಿಯಾಗಿ ಇರೋದಕ್ಕೆ ಕಲಿಯಿರಿಯಾಕೆಂದರೆ ಮರಳಿ ಬರೋದು ನೆನಪುಗಳು ಮಾತ್ರ ಸಮಯವಲ್ಲ. ಇಂಥದ್ದೊಂದು ಸಂದೇಶ ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ನೋಡಿದಾಗ ನಿಜವೆನಿಸಿತು. ಕೆಲವಷ್ಟು ದಿನಗಳನ್ನು ಕಳೆಯಲು ಈ ಭೂಮಿಯ ಮೇಲೆ ಬಾಡಿಗೆದಾರರಾಗಿ ಬರುವ ನಾವು ದ್ವೇಷ ಮತ್ಸರಗಳಿಲ್ಲದೇ ಇರುವಷ್ಟು ದಿನ ಜೀವನದ ಮಕರಂದವನ್ನು ಅನುಭವಿಸಲು ಸಾಧ್ಯವೇ ಇಲ್ಲ ಎನ್ನುವ ಹಾಗೆ ಬದುಕನ್ನು ಸಾಗಿಸುತ್ತೇವೆ. ಕಾಲ ಸರಿದ ಹಾಗೆ ಕಳೆದುಕೊಂಡ ಸುಂದರ ಬದುಕಿಗಾಗಿ ವ್ಯಥೆ ಪಡುತ್ತೇವೆ. ಹಾಗೆಯೇ ಆ ಸಮಯವನ್ನು ಮರಳಿ ಪಡೆಯಲು ಮನಸ್ಸು ಹಾತೊರೆಯುತ್ತಿರುತ್ತದೆ. ಆದರೆ ಆ ಸಮಯ ಮುಗಿದುಹೋಗಿರುತ್ತದೆ ಹಾಗೂ ಆ ಸಮಯದ ನೆನಪುಗಳು ಕಹಿಯಾಗಿರುತ್ತದೆ. ಸಿಹಿಯಾದ ನೆನಪುಗಳೊಂದಿಗೆ ಕೆಲವಷ್ಟು ದಿನ ಬದುಕಿದರೂ ಸಾಕು ಆ ಬದುಕು ಪರಿಪಕ್ವತೆ ಹೊಂದುತ್ತದೆ. ಸಮಯ ಮತ್ತೆ ಬರುವುದಿಲ್ಲ ನಿಜ. ಆದರೆ ಆ ಸಮಯದಲ್ಲಿ ನಾವೆಷ್ಟು ಜನರೊಡನೆ ಪ್ರೀತಿ ವಿಶ್ವಾಸದಿಂದ ಇರುತ್ತೇವೆಯೋ ಅದರ ನೆನಪುಗಳು ಸಮಯ ಸರಿದರೂ ಮನದ ಸ್ಮತಿ ಪಟಲದಲ್ಲಿ ಹಾಗೆಯೇ ಉಳಿದಿರುತ್ತದೆ ಎನ್ನುವುದಂತೂ ನಿಜ ತಾನೇ?.. – ಪ್ರಿಯಾಂಕ ಬಿಜೂರು, ಬೈಂದೂರು
Related Articles
Advertisement