Advertisement

Hunsur: ವೃದ್ದೆಯ ಕೈಕಾಲು ಕಟ್ಟಿ ಸರಗಳ್ಳತನ ಮಾಡಿದ ಮಹಿಳೆ

01:29 PM Dec 05, 2024 | Team Udayavani |

ಹುಣಸೂರು: ಕುಡಿಯಲು ನೀರು ಕೇಳುವ ನೆಪದಲ್ಲಿ ಮನೆಗೆ ಬಂದು ವೃದ್ದೆಯ ಕೈಕಾಲು ಕಟ್ಟಿ ಹಾಕಿ 30 ಗ್ರಾಂ. ಚಿನ್ನದ ಸರ ಅಪಹರಿಸಿರುವ ಘಟನೆ ನಗರದ ಚಿಕ್ಕ ಹುಣಸೂರಲ್ಲಿ ಡಿ.4ರ ಬುಧವಾರ ನಡೆದಿದೆ.

Advertisement

ಚಿಕ್ಕಹುಣಸೂರಿನ ದಿ. ಚಿನ್ನಪ್ಪ ಅವರ ಪತ್ನಿ 80 ವರ್ಷದ ವೃದ್ದೆ ಜಯಮ್ಮ ಎಂ ಚಿನ್ನದ ಸರ ಕಳೆದುಕೊಂಡವರು.

ಜಯಮ್ಮ ಮನೆಯಲ್ಲಿ ಒಬ್ಬರೇ ಇದ್ದ ವೇಳೆ ಮನೆ ಬಳಿಗೆ ಬಂದ ಅಪರಿಚಿತ ಮಹಿಳೆ ಕುಡಿಯಲು ನೀರು ಕೇಳಿದ್ದಾರೆ. ನೀರು ತರಲು ಒಳಗೆ ಹೋಗುತ್ತಿದ್ದಂತೆ ಹಿಂದಿನಿಂದ ಬಂದ ಅಪರಿಚಿತ ಮಹಿಳೆ ವೃದ್ದೆಯ ಬಾಯಿಗೆ ಬಟ್ಟೆ ತುರುಕಿ, ಕೈಕಾಲು ಕಟ್ಟಿ ಹಾಕಿ 30 ಗ್ರಾಂ.ನ ಚಿನ್ನದ ಸರ ಕಸಿದು ಪರಾರಿಯಾಗಿದ್ದಾರೆ.

ಅಕ್ಕ-ಪಕ್ಕದವರು ನೋಡಿದಾಗಲಷ್ಟೆ ಪ್ರಕರಣ ಬೆಳಕಿಗೆ ಬಂದಿದ್ದು, ವೃದ್ದೆಯನ್ನು ಸಂತೈಸಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next