Advertisement

ಸೌಲಭ್ಯ ಸದುಪಯೋಗವಾಗಲಿ

04:10 PM Aug 07, 2020 | Suhan S |

ಹಗರಿಬೊಮ್ಮನಹಳ್ಳಿ: ಸರಕಾರದ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕ ಎಸ್‌.ಭೀಮಾನಾಯ್ಕ ಹೇಳಿದರು.

Advertisement

ಪಟ್ಟಣದ ಜಿವಿಪಿಪಿ ಸರ್ಕಾರಿ ಪ್ರಥಮದರ್ಜೆ ಕಾಲೇಜು ವಿದ್ಯಾರ್ಥಿಗಳಿಗೆ ಸಾಂಕೇತಿಕವಾಗಿ ಲ್ಯಾಪ್‌ಟಾಪ್‌ ವಿತರಿಸಿ ಅವರು ಮಾತನಾಡಿದರು. ಸಾಂಕ್ರಾಮಿಕ ರೋಗ ಕೊರೊನಾ ಹಿನ್ನೆಲೆಯಲ್ಲಿ ಶಾಲಾ ಕಾಲೇಜುಗಳಿಗೆ ರಜೆ ಇದ್ದು ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾರ್ಜನೆ ಹೆಚ್ಚಿಸಿಕೊಳ್ಳಬೇಕು. ಇಂತಹ ಸ್ಪರ್ಧಾತ್ಮಕ ಯುಗದಲ್ಲಿ ಪರಿಶ್ರಮ ಪಟ್ಟ ವಿದ್ಯಾರ್ಥಿಗೆ ಮಾತ್ರ ಯಶಸ್ಸು ಸಿಗಲು ಸಾಧ್ಯ. ವಿದ್ಯಾಭ್ಯಾಸದ ಅವ ಧಿಯಲ್ಲಿ ಇತರೆ ಚಟುವಟಿಕೆಗಳತ್ತ ಗಮನಹರಿಸದೆ ಪ್ರಾಮಾಣಿಕವಾಗಿ ವಿದ್ಯಾಭ್ಯಾಸ ಮಾಡಬೇಕು. ಶೈಕ್ಷಣಿಕ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲಾಗಿದ್ದು ಶಾಲಾ ಕೊಠಡಿ, ಅಂಗನವಾಡಿ ಕಟ್ಟಡ, ಕಾಲೇಜು ಕಟ್ಟಡ ನಿರ್ಮಾಣ, ಜಿಮ್‌, ಗ್ರಂಥಾಲಯ ಸೇರಿದಂತೆ ಶಿಕ್ಷಣ ವಲಯಕ್ಕೆ ವಿಶೇಷ ಆದ್ಯತೆ ನೀಡಲಾಗಿದೆ. ಶಾಲೆಗಳಲ್ಲಿ ಮಕ್ಕಳು ಫ್ಲೋರೈಡ್‌ಯುಕ್ತ ನೀರು ಕುಡಿಯಬಾರದೆಂದು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ವಿದ್ಯಾರ್ಥಿಗಳು ಲ್ಯಾಪ್‌ಟಾಪ್‌ನ್ನು ಸದುದ್ದೇಶಕ್ಕೆ ಬಳಸಿಕೊಳ್ಳುವ ಮೂಲಕ ಸರಕಾರದ ಯೋಜನೆಯನ್ನು ಸಫಲಗೊಳಿಸಬೇಕು ಎಂದು ತಿಳಿಸಿದರು.

ಪ್ರಾಂಶುಪಾಲ ಚಂದ್ರಮೌಳಿ ಮಾತನಾಡಿ,

ಕಾಲೇಜಿನ ಒಂದು ಸಾವಿರ ಮಕ್ಕಳಿಗೆ ಲ್ಯಾಪ್‌ ಟಾಪ್‌ಗ್ಳು ಬಂದಿವೆ. ಕೊರೊನಾ ವೈರಸ್‌ ನಿಂದಾಗಿ ದಿನಕ್ಕೆ 50 ವಿದ್ಯಾರ್ಥಿಗಳಿಗೆ ಲ್ಯಾಪ್‌ ಟಾಪ್‌ ವಿತರಿಸಲಾಗುವುದು ಎಂದು ತಿಳಿಸಿದರು. ತಹಶೀಲ್ದಾರ್‌ ಆಶಪ್ಪ ಪೂಜಾರ್‌, ಪ್ರಾಧ್ಯಾಪಕರಾದ ಸತೀಶ್‌ ಪಾಟೀಲ್‌, ಅಣ್ಣೋಜರೆಡ್ಡಿ, ಬುಳ್ಳಪ್ಪ, ಮಲ್ಲಿಕಾರ್ಜುನ, ಗುರುರಾಜ, ತಿಪ್ಪೇಸ್ವಾಮಿ, ವಸಂತಕುಮಾರ, ಸಂಧ್ಯಾ, ಗಜೇಂದ್ರಿ, ಪ್ರೀತಿ, ಜ್ಯೋತಿ, ರೀಟಾ, ಶ್ರೀನಿವಾಸ, ಮಹಾಂತೇಶ, ಸುರೇಶ, ಬಿ. ವಿರೇಶ್‌, ವಿರೇಶ್‌ನಾಯ್ಕ, ಮುಖಂಡರಾದ ಕನ್ನಿಹಳ್ಳಿ ಚಂದ್ರಶೇಖರ, ಉಮಾಪತಿ, ಕೇಶವರೆಡ್ಡಿ, ಡಿಶ್‌ ಮಂಜುನಾಥ, ಹಾಲ್ದಾಳ್‌ ವಿಜಯಕುಮಾರ, ಬಾಲಕೃಷ್ಣಬಾಬು ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next