Advertisement

ರಾಜಧಾನಿಯಲ್ಲಿ ಸಂಕ್ರಾಂತಿ ಸಂಭ್ರಮ: ಗೋವುಗಳಿಗೆ ಅಲಂಕಾರ- ಪೂಜೆ

11:03 AM Jan 15, 2022 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸಂಕ್ರಾಂತಿ ಸಂಭ್ರಮ. ಈ ವರ್ಷ ಜ.14 ಮತ್ತು 15 ರಂದು ಎರಡೂ ದಿನ ಕೂಡ ಹಬ್ಬ ಬಂದಿದೆ. ಆ ಹಿನ್ನೆಲೆಯಲ್ಲಿ ಶುಕ್ರವಾರ ಕೆಲವು ಪ್ರದೇಶಗಳಲ್ಲಿ ಸಂಕ್ರಾಂತಿ ಹಬ್ಬವನ್ನು ಜನರು ಆಚರಿಸಿ ಸಂಭ್ರಮಿಸಿದರು.

Advertisement

ಸಂಕ್ರಾಂತಿ ಉತ್ಸವಗಳು ಕೂಡ ಅಲ್ಲಲ್ಲಿ ನಡೆದ ಹಳ್ಳಿಯ ಸಂಸ್ಕೃತಿಯನ್ನು ಅನಾವರಣಗೊಳಿಸಿದವು. ಜಯನಗರದ ವಿನಾಯಕ ದೇವಸ್ಥಾನದ ಅವರಣದಲ್ಲಿ ಸಂಕ್ರಾಂತಿ ಹಬ್ಬದ ಪ್ರಯುಕ್ತ ಸಂಕ್ರಾಂತಿ ಉತ್ಸವ ಗೋವುಗಳ ಅಲಂಕಾರ ಪೂಜೆ, ಪೊಂಗಲ್‌ ಸಂಭ್ರಮ ಮತ್ತು ಸಾರ್ವಜನಿಕರಿಗೆ ಕಬ್ಬು, ಎಳ್ಳು-ಬೆಲ್ಲ ವಿತರಣಾ ಕಾರ್ಯಕ್ರಮ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ಶನಿವಾರ-ಭಾನುವಾರ ವಾರಾಂತ್ಯ ಕರ್ಫ್ಯೂ ವಿಧಿಸಲಾಗಿದೆ.

ಹೀಗಾಗಿ ಈ ಬಾರಿ ಬಹುತೇಕ ಭಾಗಗಳಲ್ಲಿ ಗೋವುಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮ ನಡೆಯುತ್ತಿಲ್ಲ. ಏತನ್ಮಧ್ಯೆ ಶನಿವಾರ ಕೂಡ ಸಂಕ್ರಾಂತಿ ಹಬ್ಬ ಇರುವ ಹಿನ್ನೆಲೆಯಲ್ಲಿ ಕೆ.ಆರ್‌. ಮಾರುಕಟ್ಟೆ, ಗಾಂಧಿಬಜಾರ್‌, ಮಲ್ಲೇಶ್ವರ, ಯಶವಂತಪುರ, ಬಸವನಗುಡಿ, ಜಯನಗರ, ವಿಜಯನಗರ, ದಾಸರಹಳ್ಳಿ, ಮಡಿವಾಳ, ಕೆ.ಆರ್‌. ಪುರ ಮತ್ತಿತರ ಮಾರುಕಟ್ಟೆಗಳಲ್ಲಿ ಖರೀದಿ ಸಂಭ್ರಮ ಜೋರಾಗಿತ್ತು. ಸಂಕ್ರಾಂತಿಗೆ ಎಳ್ಳು, ಬೆಲ್ಲ, ಒಣ ಕೊಬ್ಬರಿ, ಕಡ್ಲೆಬೀಜ, ಹುರಿಗಡಲೆಗಳ ಮಿಶ್ರಣ, ಕಬ್ಬು, ಸಕ್ಕರೆ ಅಚ್ಚು, ಎಲಚೆಹಣ್ಣನ್ನು ಬಂಧು, ಆಪ್ತರು ಹಾಗೂ ನೆರೆಹೊರೆಯವರಿಗೆ ಹಂಚಿ ಸಂಭ್ರಮಿಸುತ್ತಾರೆ. ಗ್ರಾಮೀಣ ಪ್ರದೇಶಗಳಲ್ಲಿ ದವಸ-ಧಾನ್ಯಕ್ಕೆ ಪೂಜೆ, ಊರ ಬಾಗಿಲಲ್ಲಿ ಬೆಂಕಿ ಹಾಕಿ ರಾಸುಗಳನ್ನು ಬೆಂಕಿ ಮೇಲೆ ಓಡಿಸುವ ಸ್ಪರ್ಧೆ, ಮತ್ತಿತರ ಚಟುವಟಿಕೆಗಳು ಹಬ್ಬಕ್ಕೆ ವಿಶೇಷ ಮೆರಗು ನೀಡುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next