ಶಿರಡಿ: ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯಲ್ಲಿರುವ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಬೆಳಗಿನ ಜಾವ ಹಾಗೂ ತಡರಾತ್ರಿ ವೇಳೆ ನಡೆಯುವ ಪೂಜಾ ಕೈಂಕರ್ಯಗಳಲ್ಲಿ ಪಾಲ್ಗೊಳ್ಳಲು ಭಕ್ತಾದಿಗಳು ಅವಕಾಶ ಕಲ್ಪಿಸಿದೆ.
ಜೊತೆಗೆ, ಬೆಳಗಿನ ಜಾವ ಹಾಗೂ ತಡರಾತ್ರಿ ನಡೆಯುವ ಪೂಜೆಗಳ ವೇಳಾಪಟ್ಟಿಯನ್ನೂ ದೇಗುಲದ ಆಡಳಿತ ಮಂಡಳಿ ಬದಲಾಯಿಸಿದೆ.
ಬೆಳಗಿನ ಜಾವ 4:30ಕ್ಕೆ ಜರುಗುತ್ತಿದ್ದ ಕಾಕಡ ಆರತಿಯನ್ನು 5:15ಕ್ಕೆ ಆರಂಭಿಸಲು ನಿರ್ಧರಿಸಲಾಗಿದೆ. ರಾತ್ರಿ 10:30ಕ್ಕೆ ಆರಂಭವಾಗುತ್ತಿದ್ದ ಶೇಜಾರ್ತಿ ಆರತಿಯನ್ನು 10 ಗಂಟೆಗೆ ಆರಂಭಿಸಲು ತೀರ್ಮಾನಿಸಲಾಗಿದೆ.
ಇದನ್ನೂ ಓದಿ:ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ನಾಯಕರ ಪಾದಯಾತ್ರೆ : ನಳಿನ್ ಕುಮಾರ್ ಕಟೀಲ್
ಕೊರೊನಾ ನಿರ್ಬಂಧಗಳು ಜಾರಿಯಾಗಿದ್ದ ಹಿನ್ನೆಲೆಯಲ್ಲಿ ರಾತ್ರಿ 11ರಿಂದ ಮುಂಜಾನೆ 5 ಗಂಟೆಯವರೆಗೆ ಸನ್ನಿಧಾನದಲ್ಲಿ ಭಕ್ತಾದಿಗಳ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿತ್ತು.