Advertisement

ಮರಾಠ ಮೀಸಲಾತಿ ಆಗ್ರಹಿಸಿ ಮಹಾರಾಷ್ಟ್ರ ಬಂದ್‌: ಪ್ರತಿಭಟನೆ ತೀವ್ರ

10:37 AM Jul 24, 2018 | Team Udayavani |

ಮುಂಬಯಿ : ಸರಕಾರಿ ಉದ್ಯೋಗದಲ್ಲಿ ಮತ್ತು ಶಿಕ್ಷಣದಲ್ಲಿ ಮೀಸಲಾತಿಯನ್ನು ಆಗ್ರಹಿಸಿ ಅನೇಕ ಮರಾಠಾ ಸಂಘಟನೆಗಳು ಇಂದು ಮಂಗಳವಾರ ಜು.24ರಂದು ಮಹಾರಾಷ್ಟ್ರ ಬಂದ್‌ಗೆ ಕರೆ ನೀಡಿವೆ.

Advertisement

ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರು ತಮ್ಮ ಸಮುದಾಯದ ಮೀಸಲಾತಿ ಬೇಡಿಕೆಯನ್ನು ಪರಿಗಣಿಸುವುದಾಗಿ ಹಲವು ಬಾರಿ ಆಶ್ವಾಸನೆ ನೀಡಿರುವ ಹೊರತಾಗಿಯೂ ಅವರು ಈ ವರೆಗೆ ಏನನ್ನೂ ಮಾಡಿಲ್ಲ ಎಂದು ಮರಾಠಾ ಸಂಘಟನೆಗಳು ಆಕ್ಷೇಪಿಸಿವೆ. 

ನಿನ್ನೆ ಸೋಮವಾರ ಮರಾಠಾ ಸಮುದಾಯದ 27ರ ಹರೆಯದ ಯುವಕ ಕಾಕಾಸಾಹೇಬ್‌ ಶಿಂಧೆ ಎಂಬಾತ ಔರಂಗಾಬಾದ್‌ ಸಮೀಪ ಗೋದಾವರಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಮರಾಠಾ ಮೀಸಲಾತಿ ಚಳವಳಿಗೆ ಹೊಸ ತಿರುವನ್ನು ನೀಡಿದೆ.

ಯುವಕ ಶಿಂಧೆ ಸಾವಿನಿಂದಾಗಿ ರಾಜ್ಯದ ವಿವಿಧ ಭಾಗಗಳಲ್ಲಿ  ಹೊಸ ಪ್ರತಿಭಟನೆಗಳು ನಡೆಯುತ್ತಿದ್ದು ಇದಕ್ಕೆ ಬಿಜೆಪಿ ನೇತೃತ್ವದ ಸರಕಾರವೇ ಕಾರಣವೆಂದು ಮಾರಾಠ ನಾಯಕರು ಆಪಾದಿಸಿದ್ದಾರೆ. 

ಶಿಂಧೆ ಕುಟುಂಬಕ್ಕೆ ರಾಜ್ಯ ಸರಕಾರ 10 ಲಕ್ಷ ರೂ.ಗಳ ಪರಿಹಾರವನ್ನು ಘೋಷಿಸಿದೆ. 

Advertisement

ಇಂದು ಪ್ರತಿಭಟನಕಾರರು ಪರ್ಭಾನಿ ಜಿಲ್ಲೆಯ ಗಂಗಾಖೇಡ್‌ ತೆಹಶೀಲ್‌ನಲ್ಲಿನ  ಅಹ್ಮದಾಬಾದ್‌ -ಔರಂಗಾಬಾದ್‌ ಹೆದ್ದಾರಿಯನ್ನು ತಡೆದು ಪೊಲೀಸ್‌ ವ್ಯಾನ್‌ ಮತ್ತು ಬಸ್‌ ಸಹಿತ ಹಲವು ವಾಹನಗಳಿಗೆ ಹಾನಿ ಉಂಟುಮಾಡಿದ್ದಾರೆ. 

ಈ ನಡುವೆ ರಾಜ್ಯಸಭಾ ಸದಸ್ಯರಾಗಿರುವ ಸಂಭಾಜಿ ರಾಜೆ ಅವರು ಮರಾಠಾ ಸಮುದಾಯದವರು ಪ್ರತಿಭಟನೆ ಹೆಸರಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದು ವಿನಂತಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next